Get Updates
Get notified of breaking news, exclusive insights, and must-see stories!

Text Book Revision: ಬಿಜೆಪಿಯ ಅವಾಂತರ ಸರಿಪಡಿಸುತ್ತೇವೆ: ಕಾಂಗ್ರೆಸ್ ತಿರುಗೇಟು

ಬೆಂಗಳೂರು, ಸೆಪ್ಟಂಬರ್ 27: ಪಠ್ಯ ಪರಿಷ್ಕರಣೆ ಹೆಸರಲ್ಲಿ ರಾಜ್ಯ ಬಿಜೆಪಿ ಸರ್ಕಾರ ನಾಡಿನ ಮಹನೀಯರನ್ನು ಅವಮಾನಿಸಿದ್ದು ಹಲವು ವಿಚಾರಗಳನ್ನು ನಾಡಿನ ಜನರು ನೋಡಿದ್ದಾರೆ. ಕೊನೆಗೆ ನೀವು ಮಣಿದಿದ್ದನ್ನು ನೋಡಿದ್ದಾರೆ. ಬಿಜೆಪಿಯಿಂದ ಪಠ್ಯ ಪರಿಷ್ಕರಣೆ ಮೂಲಕ ನಡೆದ ಅವಾಂತರಗಳನ್ನು ಸರಿಪಡಿಸುವುದು ನಿಶ್ಚಿತ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣೆ ಕುರಿತು ರಾಜ್ಯ ಬಿಜೆಪಿ ಮಾಡಿದ್ದ ಟ್ವೀಟ್‌ಗೆ ತಿರುಗೇಟು ನೀಡಿ ಬುಧವಾರ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಸಮರ ನಡೆಸಿದೆ. ಈ ಮೂಲಕ ಕರ್ನಾಟಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎದ್ದಿದ್ದ ಪಠ್ಯ ಪರಿಷ್ಕರಣೆ ವಿಚಾರ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮತ್ತೆ ಮುನ್ನೆಲೆಗೆ ಬಂದಿದೆ.

Text Book Revision: We Correct Irregularities By Revising The Text Book From BJP: Congress

ಹಿಂದಿದ್ದ ಬಿಜೆಪಿ ಸರ್ಕಾರವ, ಪಠ್ಯ ಪರಿಷ್ಕರಣೆ ಹೆಸರಲ್ಲಿ ನಾಡಿನ ಮಹನೀಯರನ್ನು ಅವಮಾನಿಸಿದ್ದನ್ನು ಜನತೆ ಕಂಡಿದ್ದಾರೆ. ಪಠ್ಯ ಪರಿಷ್ಕರಣೆ ಹೆಸರಲ್ಲಿ ನಾಡಿನ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸದೆ ಕಳ್ಳಾಟ ಆಡಿದ್ದನ್ನೂ ಜನ ನೆನಪಿಟ್ಟುಕೊಂಡಿದ್ದಾರೆ.

ಪಠ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ನ ಅಜೆಂಡಾಗಳನ್ನು ತುರುಕಿ ಮಕ್ಕಳ ಮನಸ್ಸನ್ನು ಕೆಡಿಸುವ ಷಡ್ಯಂತ್ರ ರೂಪಿಸಿದ್ದನ್ನೂ ಜನರು ನೋಡಿದ್ದಾರೆ ಆರೋಪಿಸಲಾಗಿದೆ.

ಅಲ್ಲದೇ ಇದೆಲ್ಲರ ವಿರುದ್ಧ ವಿರೋಧಗಳು ಕೇಳಿ ಬಂದವು. ಅದಾದ ಬಳಿಕ ಜನರ ಆಕ್ರೋಶಕ್ಕಾಗಿ ತಾವು ಬಿಜೆಪಿಯವರು ಮಣಿದಿದ್ದನ್ನೂ ನೋಡಿದ್ದೇವೆ. ಹೋರಾಟ ಹಾರಾಟ ಏನೇ ಇದ್ದರೂ ಬಿಜೆಪಿ ಅವಧಿಯಲ್ಲಿ ಸೃಷ್ಟಿಯಾದ ಪಠ್ಯದ ಅವಂತರಗಳನ್ನು ಸರಿಪಡಿಸುವುದು ನಿಶ್ಚಿತ ಎಂದು ಸ್ಪಷ್ಟಪಡಿಸುವ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದೆ.

Text Book Revision: We Correct Irregularities By Revising The Text Book From BJP: Congress

ಈ ಹಿಂದೆ ಬಿಜೆಪಿ ಸರ್ಕಾರವು ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಪರಿಷ್ಕರಣೆ ಸಮಿತಿಗೆ ನೇಮಕ ಮಾಡಿ, ಪರಿಷ್ಕರಣೆ ಮಾಡಿತ್ತು. ಇದಕ್ಕೆ ಕಾಂಗ್ರೆಸ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೇ ಚುನಾವಣೆಗೂ ಮುನ್ನ ನಾವು ಅಧಿಕಾರಕ್ಕೆ ಬಂದ ಪರಿಷ್ಕರಣೆ ಮಾಡುವುದಾಗಿ ಹೇಳಿತ್ತು.

ಇದೀಗ ಅಧಿಕಾರದಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು 37 ಮಂದಿ ಸದಸ್ಯರ ತಂಡವನ್ನು ರಚಿಸಿದ್ದು, ವರದಿ ಸಲ್ಲಿಕೆಗೆ ಮೂರು ತಿಂಗಳ ಕಾಲಾವಕಾಶ ನೀಡಿದೆ. ಪರಿಷ್ಕರಣೆ ಆದರೆ ಮುಂದಿನ ವರ್ಷದಿಂದ ಹೊಸ ಪರಿಷ್ಕೃತ ಪಠ್ಯ ಅನುಷ್ಠಾನಕ್ಕೆ ಬರಲಿದೆ.

ಕಾಂಗ್ರೆಸ್ ಪಠ್ಯ ಪರಿಷ್ಕರಣೆಗೆ ಬಿಜೆಪಿ ಹೇಳಿದ್ದೇನು

ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಶಾಲಾ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಜತೆ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಟ್ವೀಟ್ ಮಾಡಿತ್ತು.

ಪಠ್ಯಪುಸ್ತಕದಲ್ಲಿ ಇರುವ ರಾಷ್ಟ್ರೀಯತೆಯ ವಿಚಾರಗಳನ್ನು ತೆಗೆದು ಹಾಕಿ ಕಮ್ಯುನಿಸ್ಟ್ ಮತ್ತು ದೇಶವಿರೋಧಿ ಎಡಬಿಡಂಗಿ ಸಿದ್ಧಾಂತವನ್ನು ಹೇರಿ ಮಕ್ಕಳ ಬ್ರೈನ್ ವಾಶ್ ಮಾಡುವುದಕ್ಕೆ ಕಾಂಗ್ರೆಸ್ ಸಂಚು ರೂಪಿಸಿದೆ. ಮುಖ್ಯಮಂತ್ರಿ ಅವರ ಸರ್ಕಾರದ ಎಲ್ಲ ಆಟಗಳು ನಾಡ ಜನರ ಮುಂದೆ ಬಯಲಾಗಲಿದೆ. ಮುಗ್ಧ ಮಕ್ಕಳ ವಿದ್ಯಾಭ್ಯಾಸದ ಕಮ್ಯುನಿಸ್ಟೀಕರಣದ ವಿರುದ್ಧ ನಾವು ಧ್ವನಿ ಎತ್ತಲಿದ್ದೇವೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+