KARTET Answer key : ಕೀ ಉತ್ತರಗಳ ಪರಿಶೀಲನೆ ವಿಧಾನ ತಿಳಿಯಿರಿ
ಬೆಂಗಳೂರು, ನವೆಂಬರ್ 09: ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2022 (ಟಿಇಟಿ)ಯ ಕೀ ಉತ್ತರಗಳನ್ನು ಬುಧವಾರ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ಟಿಇಟಿ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಕೀ ಉತ್ತರಗಳನ್ನು ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.schooleducation.kar.nic.in/indexKn.html ನಲ್ಲಿ ಕೀ ಉತ್ತರಗಳನ್ನು ನೋಡಬಹುದು.
ಕೀ ಉತ್ತರಗಳ ಮೇಲೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳಿಗೆ ಯಾವುದಾದರು ಆಕ್ಷೇಪಣೆಗಳಿದ್ದರೆ ದಿನಾಂಕ 10-11-2022 ರಿಂದ 17-10-2022ರ ವರೆಗೆ ಅವಕಾಶ ಕಲ್ಪಿಸಲಾಗಿದೆ.ಈ ಕುರಿತು ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ ಅಭ್ಯರ್ಥಿಗಳು ನವೆಂಬರ್ 17ರೊಳಗೆ ಸಲ್ಲಿಸುವಂತೆ ಸಲ್ಲಿಸುವಂತೆ ಇಲಾಖೆಯ ಪ್ರಟಕಣೆ ತಿಳಿಸಿದೆ.

ಟಿಇಟಿ 2022 ಕೀ ಉತ್ತರ ನೋಡಲು ಹೀಗೆ ಮಾಡಿ
ಅಭ್ಯರ್ಥಿಗಳು ಮೊದಲು ಅಧಿಕೃತ ಶಿಕ್ಷಣ ಇಲಾಖೆ ಅಧಿಕೃತ ವೆಬ್‌ಸೈಟ್ https://www.schooleducation.kar.nic.in/indexKn.html ಗೆ ಭೇಟಿ ಕೊಡಿ. ನಂತರ ವೆಬ್‌ಸೈಟ್‌ನ ಮುಖಪುಟದಲ್ಲಿರವು ಕೆಎಆರ್‌ಟಿಇಟಿ 2022 ಕೀ ಉತ್ತರ ಲಿಂಕ್ ಮೇಲೆ ಒತ್ತಿರಿ. ಅಲ್ಲಿ ಕಾಣುವ ಪತ್ರಿಕೆ 1 ಹಾಗೂ ಪತ್ರಿಕೆ 2ರ ಕೀ ಉತ್ತರಗಳು ಎಂಬ ಲಿಂಕ್ ಮೇಲೆ ಟ್ಯಾಪ್ ಮಾಡಬೇಕು. ಬಳಿಕ ಎರಡೂ ಪತ್ರಿಕೆಗಳ ಕೀ ಉತ್ತರಗಳು ಪರದೆಯ ಮೇಲೆ ಕಾಣಿಸುತ್ತವೆ. ಅಲ್ಲಿನ ಡೌನ್‌ಲೋಡ್ ಆಯ್ಕೆ ಮೇಲೆ ಕ್ಲಿಕ್ ಮಾಡಬಹುದು.
ಆಕ್ಷೇಪಣೆ ಸಲ್ಲಿಸಲು ಇಲಾಖೆಯ ಸೂಚನೆಗಳು
ಪತ್ರಿಕೆ 1 ಮತ್ತು ಪತ್ರಿಕೆ 2ರ ಕುರಿತು ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ಎಂಟು ದಿನ ಅವಕಾಶ ನೀಡಲಾಗಿದೆ. ಮೊದಲು ಅಭ್ಯರ್ಥಿಗಳು ಪ್ರಕಟಿತ ಕೀ ಉತ್ತರ ಪರಿಶೀಲಿಸಬೇಕು. ನಂತರ ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಇತರ ವಿಧಾನಗಳಲ್ಲಿ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ.

ಆಕ್ಷೇಪಣೆಗಳ ಜೊತೆಗೆ ಅಧಿಕೃತ ಆಧಾರ ದಾಖಲೆಗಳನ್ನು ಸಲ್ಲಿಸಬೇಕು. ಸೂಕ್ತ ಆಧಾರ ದಾಖಲೆಗಳಿಲ್ಲದ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಆ ದಾಖಲೆಗಳು 500kb ಗಿಂತ ಹೆಚ್ಚಿರಬಾರದು. ಜರ್ನಲ್‌ಗಳು, ಮ್ಯಾಗಜೀನ್, ಸ್ವತಂತ್ರ ಪ್ರಕಾಶಕರುಗಳ ಪುಸ್ತಕಗಳು, ಗೈಡ್‌ಗಳು, ಇಂಟರ್‌ನೆಟ್ ಮೂಲಗಳು (ವಿಕಿಪೀಡಿಯಾ, ಗೂಗಲ್ ಮಾಹಿತಿ, ಆನ್‌ಲೈನ್ ಡೌನ್‌ಲೋಡ್ ಮಾಡಿದ ಮೂಲ) ವಿಡಿಯೋ, ದಿನ ಪತ್ರಿಕೆ ಹಾಗೂ ಪ್ರಕಟಗೊಂಡ ಲೇಖನಗಳನ್ನು ದಾಖಲೆಗಳಾಗಿ ಪರಿಗಣಿಸುವುದಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.












Click it and Unblock the Notifications