Terror Attack ರಾಹುಲ್‌ ಗಾಂಧಿ ವಿದೇಶಿ ಪ್ರವಾಸ ಮಾಡಿದಾಗೆಲ್ಲವೂ ದೇಶಕ್ಕೆ ಕೆಟ್ಟದಾಗಿದೆ: ಬಿಜೆಪಿ !

Pahalgam Terror Attack: ಜಮ್ಮು - ಕಾಶ್ಮೀರದಲ್ಲಿ ನಡೆದಿರುವ ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ದೇಶದ ವಿರೋಧ ಪಕ್ಷದ ನಾಯಕರ ರಾಹುಲ್‌ ಗಾಂಧಿ ಅವರ ಬಗ್ಗೆ ಬಿಜೆಪಿ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ. ರಾಹುಲ್‌ ಗಾಂಧಿಯ ಬಗ್ಗೆ ಅವರ ಬಗ್ಗೆ ಬಿಜೆಪಿ ಮಾಡಿರುವ ಟ್ವೀಟ್‌ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ದಾಳಿಯು ಭಾರೀ ಭೀಕರತೆಗೆ ಸಾಕ್ಷಿಯಾಗಿದೆ. ನಿರೀಕ್ಷೆಯಂತೆಯೇ ರಾಜಕೀಯ ಪಕ್ಷಗಳು ಈ ವಿಷಯದಲ್ಲೂ ರಾಜಕೀಯವನ್ನು ಮಾಡುವುದಕ್ಕೆ ಪ್ರಾರಂಭಿಸಿದೆ. ಇದೀಗ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯ ಮೇಲೆ ಗಂಭೀರವಾದ ಆರೋಪವೊಂದನ್ನು ಮಾಡಲಾಗಿದೆ.

ಇಡೀ ದೇಶವೇ ಪಹಲ್ಗಾಮ್ ಉಗ್ರರ ದಾಳಿ ವಿಚಾರದಲ್ಲಿ ಆತಂಕಕ್ಕೆ ಗುರಿಯಾಗಿದೆ. ಪುಲ್ವಾಮಾ ದಾಳಿಯ ನಂತರ ದೇಶವು ಮತ್ತೊಂದು ಭಯಾನಕ ದಾಳಿಗೆ ಗುರಿಯಾಗಿದೆ. ಉಗ್ರರ ದಾಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ರೀತಿ ಇರುವಾಗಲೇ ರಾಜಕೀಯ ವಾಕ್ಸಮರಕ್ಕೂ ಇದು ಕಾರಣವಾಗಿದೆ. ಕರ್ನಾಟಕ ಬಿಜೆಪಿಯು ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ.

Terror Attack Whenever Rahul Gandhi Travels Abroad Attack Happens in India BJP

ಬಿಜೆಪಿ ಮಾಡಿರುವ ಟ್ವೀಟ್‌ನಲ್ಲಿ ಏನಿದೆ ?

ದಾಳಿಯ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಕರ್ನಾಟಕ ಬಿಜೆಪಿ ಟ್ವೀಟ್‌ವೊಂದನ್ನು ಮಾಡಿದೆ. ಅದರಲ್ಲಿ Every time @RahulGandhi leaves the country, something sinister unfolds back home ಎಂದು ಹೇಳಲಾಗಿದೆ. ಇದರರ್ಥ, ರಾಹುಲ್‌ ಗಾಂಧಿ ವಿದೇಶಿ ಪ್ರವಾಸ ಮಾಡಿದಾಗೆಲ್ಲವೂ ದೇಶದಲ್ಲಿ ಕೆಟ್ಟದೊಂದು ನಡೆಯುತ್ತದೆ / ದುರಂತ ಸಂಭಿಸುತ್ತದೆ ಎಂದು ಟ್ವೀಟ್ ಮಾಡಲಾಗಿದೆ. ಪಹಲ್ಗಾಮ್ ಉಗ್ರರ ದಾಳಿ ವಿಚಾರದಲ್ಲಿ ಪರೋಕ್ಷವಾಗಿ ರಾಹುಲ್‌ ಗಾಂಧಿಯ ಪಾತ್ರವಿದೆ ಎಂಬರ್ಥದಲ್ಲಿ ಈ ಟ್ವೀಟ್‌ ಇದೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಸಹ ವಿದೇಶಿ ಪ್ರವಾಸದಲ್ಲಿ ಇದ್ದರು!

ಈ ಟ್ವೀಟ್‌ ಬಿಜೆಪಿಗೇ ತಿರುಗುಬಾಣವಾಗಿದೆ. ರಾಹುಲ್‌ ಗಾಂಧಿ ಮಾತ್ರವಲ್ಲ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ವಿದೇಶಿ ಪ್ರವಾಸದಲ್ಲಿ ಇದ್ದರು ಎಂದು ಜನ ನೆನಪಿಸಿದ್ದಾರೆ. ಮುಂದುವರಿದು ಭದ್ರತಾ ವೈಫಲ್ಯ ಹಾಗೂ ಗುಪ್ತಚರ ಲೋಪಗಳನ್ನು ಮರೆ ಮಾಚುವುದಕ್ಕೆ ಬಿಜೆಪಿ ಐಟಿ ಸೆಲ್‌ ಕೆಲಸ ಮಾಡುತ್ತಿದೆ ಎಂದು ರಾಜೇಂದ್ರ ಕೋಶಿಕ್ ಅವರು ಟ್ವೀಟ್‌ಗೆ ರಿಪ್ಲೈ ಮಾಡಿದ್ದಾರೆ.

Take a Poll

ಧರ್ಮ ಕೇಳಿದರು ಎಂದ ಬಿಜೆಪಿ: ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿಯು "ಸಮಾಜದಲ್ಲಿ ಭಯ ಸೃಷ್ಟಿಸುವ ಭಯೋತ್ಫಾದನೆ ಬದಲಾಗಿದೆ. ಹಿಂದೂಗಳನ್ನು ಟಾರ್ಗೆಟ್‌ ಮಾಡಿ ಹತ್ಯೆ ಮಾಡುವುದೇ ಭಯೋತ್ಫಾದನೆ ಆಗಿದೆ. ನಮ್ಮೊಳಗೆ ಇರುವ ಹಿಂದೂ ವಿರೋಧಿಗಳು, ಸನಾತನ ವಿರೋಧಿಗಳ ಕಾರಣದಿಂದಲೇ ಭಯೋತ್ಪಾದಕರ ಈ ಕೃತ್ಯಕ್ಕೆ ಪ್ರೇರಣೆ ಆಗಿದೆ. ಒಂದು ಧರ್ಮವನ್ನು ಕೊಂದು ಮತ್ತೊಂದು ಧರ್ಮ ಉಳಿಸಿಕೊಳ್ಳುವ ಸ್ಥಿತಿ ಆ ಧರ್ಮಕ್ಕೆ ಬಂದಿದೆ ಎಂದರೆ, ಆ ಧರ್ಮದ ಭಯೋತ್ಪಾದಕರಿಗೆ ಉಳಿಗಾಲವಿಲ್ಲ ಎಂದೇ ಅರ್ಥ" ಎಂದು ಟ್ವೀಟ್‌ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+