ದೇವಾಲಯಗಳಿಗೂ ಕೋವಿಡ್ ಬಿಸಿ; ಆದಾಯದಲ್ಲಿ ಕುಸಿತ

ಬೆಂಗಳೂರು, ಆಗಸ್ಟ್ 25 : ಕೋವಿಡ್ ಲಾಕ್ ಡೌನ್ ಪರಿಣಾಮ ವಿವಿಧ ಕ್ಷೇತ್ರಗಳಲ್ಲಿ ಅಪಾರವಾದ ನಷ್ಟ ಉಂಟಾಗಿದೆ. ಕರ್ನಾಟಕದ ದೇವಾಲಯಗಳಿಗೂ ಸಹ ಕೋವಿಡ್ ಸೋಂಕಿನ ಬಿಸಿ ತಟ್ಟಿದ್ದು, ಆದಾಯ ಗಣನೀಯವಾಗಿ ಕುಸಿದಿದೆ.

Recommended Video

      Chris Gayle went to a party with Usain Bolt, who has now tested Corona Positive | Oneindia Kannada

      ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ಆದಾಯದಲ್ಲಿ ಕುಸಿತವಾಗಿದೆ. ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ಆದಾಯ ಬರುತ್ತಿದ್ದ ದೇವಾಲಯಗಳಲ್ಲಿ ಆದಾಯ ಕಡಿಮೆಯಾಗಿದೆ. ಭಕ್ತರ ಸಂಖ್ಯೆ ಸಹ ಇಳಿಮುಖವಾಗಿದೆ.

      ಕಳೆದ ವರ್ಷದ ದೇವಾಲಯಗಳಿಂದ 317 ಕೋಟಿ ರೂ. ಆದಾಯ ಬಂದಿತ್ತು. ಆದರೆ, ಈ ವರ್ಷ ಇದುವರೆಗೂ 18 ಕೋಟಿ ರೂ. ಮಾತ್ರ ಬಂದಿದೆ. ಕೋವಿಡ್ ಲಾಕ್ ಡೌನ್ ತೆರವುಗೊಳಿಸಿ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.

      Temples Revenue Come Down Due To Covid

      ಕರ್ನಾಟಕದಲ್ಲಿ ಎಲ್ಲಾ ದೇವಾಲಯಗಳೂ ಇನ್ನೂ ಭಕ್ತರಿಗೆ ಬಾಗಿಲು ತೆರೆದಿಲ್ಲ. ಸಿಬ್ಬಂದಿಗಳು, ಅರ್ಚಕರು ಮಾತ್ರ ಪ್ರತಿದಿನದ ಪೂಜೆಯನ್ನು ಮಾಡುತ್ತಿದ್ದಾರೆ. ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಾಲಯದ ಒಬ್ಬರು ಅರ್ಚಕರಿಗೆ ಕೋವಿಡ್ ಸೋಂಕು ತಗುಲಿದ ಕಾರಣ ಆಗಸ್ಟ್ 31ರ ತನಕ ದೇವಾಲಯವನ್ನು ಮುಚ್ಚಲಾಗಿದೆ.

      ದೇಶದಲ್ಲಿ ಕೋವಿಡ್ ಸೋಂಕು ಹರಡದಂತೆ ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ದೇವಾಲಯ ಸೇರಿದಂತೆ ಎಲ್ಲಾ ಪ್ರಾರ್ಥನಾ ಮಂದಿರಗಳನ್ನು ಮುಚ್ಚಲಾಗಿತ್ತು. ಜೂನ್ 8ರಿಂದ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

      ದೇವಾಲಯಗಳನ್ನು ತೆರೆದರೂ ಜಾತ್ರೆ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಿಲ್ಲ. ಇದರಿಂದಾಗಿ ದೇವಾಲಯಗಳ ಆದಾಯ ಕುಸಿತವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+