• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯಾದ್ಯಂತ ಇಂದಿನಿಂದ ಭಕ್ತರಿಗೆ ತೆರೆದುಕೊಂಡ ದೇಗುಲಗಳು...

By Lekhaka
|

ಇಂದಿನಿಂದ ಕೇಂದ್ರ ಸರ್ಕಾರದ ನೂತನ ಮಾರ್ಗಸೂಚಿಯ ಮೇರೆಗೆ ದೇವಸ್ಥಾನಗಳು ತೆರೆದಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿವೆ. ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳ ಸಹಿತ, ಎಲ್ಲಾ ದೇವಾಲಯಗಳು ಭಕ್ತರ ದರ್ಶನಕ್ಕೆ ತೆರೆದಿವೆ.

   Chiranjeevi Sarja | ಅತ್ತಿಗೆ ಮೇಘನಾ ರಾಜ್ ನೋಡಿ ಬಿಕ್ಕಿ ಬಿಕ್ಕಿ ಅತ್ತ ಧೃವ ಸರ್ಜಾ | Filmibeat Kannada

   ಈ ಮೊದಲು ಜೂನ್ 1ಕ್ಕೆ ದೇವಾಲಯಗಳು ತೆರೆಯಬೇಕೆಂದು ನಿರ್ಧರಿಸಲಾಗಿದ್ದರೂ, ಕೆಲವು ಕಾರಣಗಳಿಂದಾಗಿ ಜೂನ್ 8ಕ್ಕೆ ತೆರೆಯಬೇಕೆಂದು ಮುಂದೂಡಲಾಗಿತ್ತು. ಇಂದಿನಿಂದ ಎಲ್ಲಾ ದೇವಾಲಯಗಳೂ ತೆರೆಯುತ್ತಿದ್ದು, ಎಲ್ಲಾ ಭಕ್ತರು ಸಹಕರಿಸಬೇಕಾಗಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ತಿಳಿಸಿದ್ದರು. ಮಾರ್ಗಸೂಚಿಯ ಪ್ರಕಾರ, ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳಲು, ಈ ಮುನ್ನವೇ ಪೂರ್ವ ತಯಾರಿಯನ್ನೂ ದೇವಾಲಯಗಳು ನಡೆಸಿದ್ದವು. ಇದೀಗ ರಾಜ್ಯದಲ್ಲಿ ಯಾವ ಯಾವ ದೇಗುಲಗಳು ತೆರೆದಿವೆ, ಯಾವ ಯಾವ ದೇಗುಲಗಳನ್ನು ಇನ್ನೂ ತೆರೆಯಲಾಗಿಲ್ಲ ಎಂಬ ಮಾಹಿತಿ ಇಲ್ಲಿದೆ...

   ಭಕ್ತರಿಗೆ ಮುಕ್ತವಾದ ಚಿಕ್ಕಮಗಳೂರಿನ ಶಾರದಾಂಬೆಯ ದೇಗುಲ, ದತ್ತಪೀಠ...

    ಉತ್ತರ ಕನ್ನಡ; ತೆರೆಯಿತು ಗೋಕರ್ಣ, ಮುರುಡೇಶ್ವರ, ಮಾರಿಕಾಂಬಾ ದೇವಾಲಯಗಳು

   ಉತ್ತರ ಕನ್ನಡ; ತೆರೆಯಿತು ಗೋಕರ್ಣ, ಮುರುಡೇಶ್ವರ, ಮಾರಿಕಾಂಬಾ ದೇವಾಲಯಗಳು

   ರಾಜ್ಯದಾದ್ಯಂತ ಇಂದಿನಿಂದ ದೇವಾಲಯಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳು ತೆರೆದುಕೊಂಡಿವೆ.

   ಕುಮಟಾ ತಾಲ್ಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದ ಮಾತ್ಹೋಬಾರ್ ದೇವಸ್ಥಾನ ಹಾಗೂ ಶಿರಸಿಯ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯಗಳಲ್ಲಿ ಇಂದು ಬೆಳಗ್ಗಿನಿಂದಲೇ ಪೂಜೆಗಳು ಪ್ರಾರಂಭವಾಗಿದೆ. ಸುಮಾರು ಎರಡೂವರೆ ತಿಂಗಳ ಬಳಿಕ ಭಕ್ತರಿಗೆ ದೇವರ ದರ್ಶನ ಸಿಕ್ಕಂತಾಗಿದ್ದು ಸಾಕಷ್ಟು ಮಂದಿ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.

   ದೇವಸ್ಥಾನಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತರಿಗೂ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಲಾಗುತ್ತಿದ್ದು ದೇಹದ ಉಷ್ಣಾಂಶದ ಪರೀಕ್ಷೆ ಬಳಿಕವೇ ದೇವಸ್ಥಾನಕ್ಕೆ ಪ್ರವೇಶ ಸಿಗಲಿದೆ. ಇನ್ನು ದೇವಸ್ಥಾನಗಳಲ್ಲಿ ಪೂಜೆಗೆ ಮಾತ್ರ ಅವಕಾಶ ಇದ್ದು ಇತರೆ ಯಾವುದೇ ವಿಶೇಷ ಸೇವೆಗಳು ಇನ್ನೂ ಸಹ ಪ್ರಾರಂಭಗೊಂಡಿಲ್ಲ.

    ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಆರಂಭ

   ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಆರಂಭ

   ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕ್ಷೇತ್ರ ಕೊಲ್ಲೂರು ದೇಗುಲ ಇಂದಿನಿಂದ ಆರಂಭಗೊಂಡಿದೆ. ದೇಗುಲದಲ್ಲಿ ಧ್ವಜಸ್ತಂಭವರೆಗೆ ಮಾತ್ರ ಭಕ್ತರಿಗೆ ಹೋಗುವ ಅವಕಾಶ ನೀಡಲಾಗಿದೆ. ಮೂಕಾಂಬಿಕೆಯ ಗರ್ಭಗುಡಿ ಸಮೀಪ ಹೋಗುವಂತಿಲ್ಲ. ಹೀಗಾಗಿ ದೂರದಿಂದಲೇ ಭಕ್ತರು ಮೂಕಾಂಬಿಕಾ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಭಕ್ತರು ಶರ್ಟ್, ಬನಿಯನ್ ತೆಗೆಯುವ ಅವಶ್ಯಕತೆ ಇಲ್ಲ.

   ಬರೋಬ್ಬರಿ 77 ದಿನಗಳ ನಂತರ ಭಕ್ತರಿಗೆ ತೆರೆದ ದೇಗುಲ ತೆರೆದಿದ್ದು, ದೇವಿಗೆ ದೇವಸ್ಥಾನ ಸಿಬ್ಬಂದಿ ಹೂವಿನಿಂದ ಸಿಂಗಾರ ಮಾಡಿದ್ದಾರೆ. ದ್ವಾರ, ದೇಗುಲ ಪ್ರಾಂಗಣದಲ್ಲೂ ಹೂವಿನ ಅಲಂಕಾರ ಮಾಡಲಾಗಿದೆ. ದೇವಾಲಯ ಸಿಬ್ಬಂದಿ ಭಕ್ತರಿಗೆ ಸ್ಯಾನಿಟೈಸರ್, ಥರ್ಮಲ್ ಚೆಕಪ್ ಮಾಡುತ್ತಿದ್ದಾರೆ.

   ತೆರೆದ ಸೇಂಟ್ ಮೇರಿ ಚರ್ಚ್: ಸಾಮಾಜಿಕ ಅಂತರದೊಂದಿಗೆ ಪ್ರಾರ್ಥನೆ

    ಶಿವಮೊಗ್ಗದ ದೇವಾಲಯ, ಚರ್ಚ್, ಮಸೀದಿ ಓಪನ್; ಸಿಗಂದೂರು ದೇಗುಲ ತೆರೆಯಲ್ಲ

   ಶಿವಮೊಗ್ಗದ ದೇವಾಲಯ, ಚರ್ಚ್, ಮಸೀದಿ ಓಪನ್; ಸಿಗಂದೂರು ದೇಗುಲ ತೆರೆಯಲ್ಲ

   ಇಂದಿನಿಂದ ಶಿವಮೊಗ್ಗದ ಬಹುತೇಕ ದೇವಾಲಯಗಳು ತೆರೆದಿದ್ದು, ಶಿವಮೊಗ್ಗದ ಕೋಟೆ ಮಾರಿಕಾಂಬ, ಸೀತಾರಾಮಾಂಜನೇಯ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳು ತೆರೆದಿದ್ದು, ದರ್ಶನಕ್ಕೆ ದೇವಾಲಯಗಳತ್ತ ಭಕ್ತರು ಬರುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಅನುಮತಿ ನೀಡಿದರೂ ಜೂನ್ 20ರ ವರೆಗೂ ಸಿಂಗದೂರು ದೇವಾಲಯ ಬಂದ್ ಇರಲಿದೆ. ಸ್ಥಳೀಯರ ಕೋರಿಕೆ ಮೇರೆಗೆ ದೇವಾಲಯ ಓಪನ್ ಮಾಡದಿರಲು ಸಿಗಂದೂರು ದೇವಾಲಯ ಸಮಿತಿ ನಿರ್ಧಿಸಿದಿದೆ.

   ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಲಾಂಜ್ ಮೂಲಕ ಹೋಗಬೇಕಿರುವ ಹಿನ್ನೆಲೆಯಲ್ಲಿ, ಲಾಂಜ್ ನಲ್ಲಿ ಸಾಮಾಜಿಕ ಅಂತರ ಕಾಪಾಡಲು ಕಷ್ಟವಾದ ಕಾರಣದಿಂದ ದೇವಾಲಯವನ್ನು ಮುಚ್ಚಲಾಗಿದೆ. ಶರಾವತಿ ನದಿ ಹಿನ್ನೀರ ಭಾಗದಲ್ಲಿರುವ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ರಾಜ್ಯದ ಬೇರೆ ಬೇರೆ ಭಾಗದಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಜೂನ್ 20ರ ನಂತರ ದೇವಿಯ ದರ್ಶನ ಭಾಗ್ಯ ದೊರೆಯಲಿದೆ‌ ಎಂದು ಸಮಿತಿ‌ ತಿಳಿಸಿದೆ.

    ಕಾರಣಿಕ ನುಡಿಯುತ್ತಿದ್ದ ಮೈಲಾರ ಲಿಂಗೇಶ್ವರನ ದೇಗುಲವೂ ತೆರೆದಿಲ್ಲ

   ಕಾರಣಿಕ ನುಡಿಯುತ್ತಿದ್ದ ಮೈಲಾರ ಲಿಂಗೇಶ್ವರನ ದೇಗುಲವೂ ತೆರೆದಿಲ್ಲ

   ಪ್ರತಿ ವರ್ಷ ಕಾರಣಿಕ ನುಡಿಯಿಂದ ಜಗತ್ ಪ್ರಸಿದ್ಧಿಯಾಗಿದ್ದ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರನ ದೇವಸ್ಥಾನದ ಬಾಗಿಲು ತೆರೆಯಬಾರದೆಂದು ಸ್ಥಳೀಯ ಭಕ್ತರು ಮತ್ತು ಗ್ರಾಮಸ್ಥರು ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿದ ಧರ್ಮದರ್ಶಿ ವ್ಯಂಕಪಯ್ಯ ಒಡೆಯರ್ ದೇಗುಲವನ್ನು ಜೂನ್ 30ರವರೆಗೂ ತೆರೆಯುವುದಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

   ಜೂನ್ 30ರವರೆಗೂ ಭಕ್ತರು ಲಿಂಗಯ್ಯನನ್ನು ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ಧರ್ಮದರ್ಶಿಗಳು ಮನವಿ ಮಾಡಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ನಿತ್ಯ ಸಾವಿರಾರು ಭಕ್ತರು ಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ಹೀಗಾಗಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ದೇವಸ್ಥಾನ ಬಾಗಿಲು ತೆರೆಯುವುದು ಬೇಡ. ಭಕ್ತರು ಸ್ವಲ್ಪ ದಿನ ಮನೆಯಲ್ಲಿಯೇ ಪ್ರಾರ್ಥಿಸಿ ಎಂದು ಹೂವಿನ ಹಡಗಲಿ ತಾಲೂಕಿನ ದಂಡಾಧಿಕಾರಿ ಮತ್ತು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳು ಮನವಿ ಮಾಡಿದ್ದಾರೆ.

    ಕೋಲಾರದ ಚಿಕ್ಕತಿರುಪತಿಗೆ ಭಕ್ತರ ಆಗಮನ

   ಕೋಲಾರದ ಚಿಕ್ಕತಿರುಪತಿಗೆ ಭಕ್ತರ ಆಗಮನ

   77 ದಿನಗಳ ನಂತರ ಕೋಲಾರದ ಮಾಲೂರು ತಾಲೂಕಿನಲ್ಲಿರುವ ಪ್ರಸಿದ್ಧ ಚಿಕ್ಕತಿರುಪತಿ ದೇವಾಲಯ ತೆರೆದಿದ್ದು, ಭಕ್ತರು ಪ್ರಸನ್ನ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಚಿಕ್ಕ ತಿರುಪತಿ ದೇವಸ್ಥಾನವನ್ನು ತೆರೆಯಲಾಗಿದೆ. ದೇವರ ದರ್ಶನ ಪಡೆದು ಭಕ್ತರು ಪುನೀತರಾಗಿದ್ದಾರೆ. ಚಿಕ್ಕತಿರುಪತಿ

   ಮುಜರಾಯಿ ಇಲಾಖೆಗೆ ಸೇರಿರುವ ಪುರಾಣ ಪ್ರಸಿದ್ಧ ದೇವಸ್ಥಾನ.

   ದೇವಾಲಯದ ಆವರಣದಲ್ಲಿ ಬ್ಯಾಕ್ಸ್ ಹಾಕಿ ಸಾಮಾಜಿಕ ಅಂತರಕ್ಕೆ ಅನುವು ಮಾಡಿಕೊಡಲಾಗಿದೆ. ದೇವಾಲಯದ ಪಾರ್ಕಿಂಗ್ ಜಾಗದಲ್ಲಿ ಸ್ಯಾನಿಟೈಸರ್ ಸಿಂಪಡಿಸಿ,ಥರ್ಮಲ್ ಸ್ಕ್ರೀನಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಮುಡಿ, ಪ್ರಸಾದ ವಿನಿಯೋಗ ಇಲ್ಲ. ಭಕ್ತರು ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಬರುವ ಆಗಿಲ್ಲ. 10 ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರಿಗೆ, ಗರ್ಭಿಣಿ ಸ್ತ್ರೀಯರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿದೆ.

   ದೇವಸ್ಥಾನ, ಮಸೀದಿಗಳಲ್ಲಿ ಮಾಸ್ಕ್ ತೊಟ್ಟ ಭಕ್ತರಿಂದ ಪ್ರಾರ್ಥನೆ ಶುರು!

   ಭಕ್ತರಿಗೆ ದರುಶನ ಕೊಟ್ಟ ಚಾಮುಂಡಿ ತಾಯಿ

   ಭಕ್ತರಿಗೆ ದರುಶನ ಕೊಟ್ಟ ಚಾಮುಂಡಿ ತಾಯಿ

   ಇಂದಿನಿಂದ ಮೈಸೂರಿನ ಅಧಿದೇವತೆ ಚಾಮುಂಡಿ ದೇವಿ ಭಕ್ತರಿಗೆ ದರುಶನ ನೀಡುತ್ತಿದ್ದಾಳೆ. ಇಂದಿನಿಂದ ಪ್ರಸಿದ್ಧ ಚಾಮುಂಡೇಶ್ವರಿ ದೇಗುಲ ಭಕ್ತರಿಗೆ ತೆರೆದಿದೆ. ದೇಗುಲ ತೆರೆದ ಮೊದಲ ದಿನವಾದ ಇಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಮುಂಡಿ ದೇವಸ್ಥಾನ ಹಾಗೂ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

   ಮೈಸೂರಿನ ಚಾಮುಂಡಿ ಬೆಟ್ಟದೊಂದಿಗೆ, ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಶ್ರೀಕಂಠನ ದರ್ಶನವೂ ಆರಂಭವಾಗಿದೆ. ದರ್ಶನಕ್ಕೆ ಬರುವ ಭಕ್ತರು ಸ್ಯಾನಿಟೈಸರ್ ಮತ್ತು ಮಾಸ್ಕ್ ಅಳವಡಿಸಿದರೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. "ರಾಜ್ಯ ಸರ್ಕಾರದ ಆದೇಶದ ಮೇರೆಗೆ ಇಂದಿನಿಂದ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದಷ್ಟು ಬೇಗ ಕರ್ನಾಟಕ ಕೊರೋನ ಮುಕ್ತವಾಗಲೆಂದು ನಾನು ಪ್ರಾರ್ಥಿಸುತ್ತೇನೆ" ಎಂದು ನಂಜುಂಡೇಶ್ವರನ ದರ್ಶನ ಪಡೆದ ಸ್ಥಳೀಯ ಶಾಸಕ ಹರ್ಷವರ್ಧನ್ ಕೇಳಿಕೊಂಡರು.

   ದಾವಣಗೆರೆ ದುರ್ಗಾಂಬ ದೇವಾಲಯದಲ್ಲಿ ಭಕ್ತರ ಸಂಖ್ಯೆ ವಿರಳ

   ದಾವಣಗೆರೆ ದುರ್ಗಾಂಬ ದೇವಾಲಯದಲ್ಲಿ ಭಕ್ತರ ಸಂಖ್ಯೆ ವಿರಳ

   ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಎರಡೂವರೆ ತಿಂಗಳಿಂದ ಬಾಗಿಲು ಮುಚ್ಚಿದ್ದ ದೇವಸ್ಥಾನಗಳು ಇಂದಿನಿಂದ ಬಾಗಿಲು ತೆರೆದು, ಭಕ್ತರಿಗೆ ಷರತ್ತು ಬದ್ಧ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿವೆ. ನಗರ ದೇವತೆ ದುರ್ಗಾಂಬಿಕಾ ದೇವಾಲಯ, ಗ್ರಾಮದೇವತೆ ನಿಟುವಳ್ಳಿಯ ದುರ್ಗಾಂಬಿಕಾ ದೇವಾಲಯ, ಹರಿಹರದ ಹರಿಹೇಶ್ವರ ದೇವಾಲಯ, ಉಚ್ಚಂಗಿ ದುರ್ಗದ ಉಚ್ಚೆಂಗೆಮ್ಮ ದೇವಾಲಯಗಳಲ್ಲಿ ಬೆಳ್ಳಿಗ್ಗೆ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಧಾವಿಸಿ ದರ್ಶನ ಪಡೆಯುತ್ತಿದ್ದಾರೆ. ಯಾವ ದೇವಾಲಯಗಳಲ್ಲೂ ಹಣ್ಣು, ತೆಂಗಿನಕಾಯಿ ಒಯ್ಯುವಂತಿಲ್ಲ. ತೀರ್ಥ, ಪ್ರಸಾದ ನೀಡುತ್ತಿಲ್ಲ.

   ಹರಿಹರದ ಹರಿಹರೇಶ್ವರ ದೇವಾಲಯದಲ್ಲಿ ಈವರೆಗೆ 150 ಮಂದಿ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ದರ್ಶನಕ್ಕೆ ಬಂದಿದ್ದರು. ದೇವಸ್ಥಾನದಲ್ಲಿ ಕುಳಿತು ಪೂಜೆ ಸಲ್ಲಿಸಲು ಅವಕಾಶ ನೀಡದ ಹಿನ್ನಲೆಯಲ್ಲಿ ಭಕ್ತರು ಹಣ್ಣು, ಕಾಯಿಗಳನ್ನು ಬೆಟ್ಟದ ಅಲ್ಲಲ್ಲಿ ಒಡೆದು ಪೂಜೆ ಸಲ್ಲಿಸಿದರು.

   ಭಕ್ತರಿಗೆ ಮುಕ್ತವಾದ ಚಿಕ್ಕಮಗಳೂರಿನ ಶಾರದಾಂಬೆಯ ದೇಗುಲ, ದತ್ತಪೀಠ...

   ಭಕ್ತರಿಗೆ ಮುಕ್ತವಾದ ಚಿಕ್ಕಮಗಳೂರಿನ ಶಾರದಾಂಬೆಯ ದೇಗುಲ, ದತ್ತಪೀಠ...

   ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ಹಾಗೂ ಬಾಬಾಬುಡನ್ ಗಿರಿಯ ಗುರುದತ್ತಾತ್ರೇಯ ಸ್ವಾಮಿ ದರ್ಗಾ ಕೂಡ ಇಂದಿನಿಂದ ಭಕ್ತರಿಗೆ ಮುಕ್ತವಾಗಿವೆ. ದರ್ಶನಕ್ಕೆ ಭಕ್ತರಿಗೆ ದೇವಸ್ಥಾನದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಹಿಂದೆ ಶೃಂಗೇರಿಯ ಶಾರದಾಂಬೆ ದೇವಾಲಯ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಗಳು ಜೂನ್ 8ರ ನಂತರವೂ ತೆರೆಯುವುದಿಲ್ಲ ಎನ್ನಲಾಗಿತ್ತು. ಕೆಲವೊಂದು ಧಾರ್ಮಿಕ ಕೈಂಕರ್ಯಗಳಿಗೆ ಸಮಸ್ಯೆ ಆಗುವ ಹಿನ್ನೆಲೆಯಲ್ಲಿ ದೇವಾಲಯ ತೆರೆಯುವುದಿಲ್ಲ ಎಂದು ಆಡಳಿತ ಮಂಡಳಿಗಳು ತಿಳಿಸಿದ್ದವು. ಆದರೆ ಇದೀಗ ಶೃಂಗೇರಿ ಶಾರದಾ ದೇಗುಲದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

   ವಿವಾದಿತ ಬಾಬಾಬುಡನ್ ಗಿರಿಯ ಶ್ರೀಗುರುದತ್ತಾತ್ರೇಯ ಸ್ವಾಮಿ ದರ್ಗಾಕ್ಕೂ ಭಕ್ತರಿಗೆ ಜಿಲ್ಲಾಡಳಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೂಡಿಗೆರೆಯ ಹೊರನಾಡು ಅನ್ನಪೂರ್ಣೇಶ್ವರಿಯ ದೇವಸ್ಥಾನವನ್ನು ಇನ್ನೂ ತೆರೆಯಲಾಗಿಲ್ಲ.

   English summary
   Temples reopened in karnataka today after 77 days. Here is a list of temples which are opened today and some temples didnt open,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X