Taxi Fare Revision: ರಾಜ್ಯದಲ್ಲಿ ಇನ್ಮುಂದೆ ಟ್ಯಾಕ್ಸಿ ಪ್ರಯಾಣ ದುಬಾರಿ, ಏಕೆ? ತಿಳಿಯಿರಿ
ಬೆಂಗಳೂರು, ಫೆಬ್ರವರಿ 04: ಕರ್ನಾಟಕದಲ್ಲಿ ಅಗ್ರಿಗೇಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಪ್ರಯಾಣ ಸೇವೆ ನೀಡುತ್ತಿರುವ ಟ್ಯಾಕ್ಸಿ ವಾಹನಗಳ ಪ್ರಯಾಣ ದರವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೆಚ್ಚಳ ಮಾಡಿದೆ.
ಕರ್ನಾಟಕ ರಾಜ್ಯ ಸರ್ಕಾರವು ನಗರದ ಟ್ಯಾಕ್ಸಿಗಳು ಮತ್ತು ಓಲಾ ಹಾಗೂ ಊಬರ್‌ನಂತಹ ಅಗ್ರಿಗೇಟರ್‌ಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ವಾಹನಗಳ ದರವನ್ನು ಏರಿಕೆ ಮಾಡಿದೆ. ಟ್ಯಾಕ್ಸಿ ವಾಹನಗಳನ್ನು ಈಗ ವಾಹನದ ವೆಚ್ಚದ ಆಧಾರದ ಮೇಲೆ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

10 ಲಕ್ಷದವರೆಗಿನ ವಾಹನಗಳಿಗೆ 4 ಕಿ.ಮೀ.ವರೆಗಿನ ಕನಿಷ್ಠ ದರವನ್ನು 100 ರೂ.ಗೆ ನಿಗದಿಪಡಿಸಲಾಗಿದೆ. 4 ಕಿ.ಮೀ ನಂತರ ಪ್ರತಿ ಕಿ.ಮೀ.ಗೆ 24 ರೂ., 10 ಲಕ್ಷದಿಂದ 15 ಲಕ್ಷದವರೆಗಿನ ವಾಹನಗಳಿಗೆ ಕನಿಷ್ಠ ಮೊದಲ 4 ಕಿ.ಮೀಗೆ 115 ರೂ., ಅದಕ್ಕೂ ಮೀರಿದ ಪ್ರತಿ ಕಿ.ಮೀ.ಗೆ 28 ರೂ. 15 ಲಕ್ಷಕ್ಕಿಂತ ಹೆಚ್ಚಿನ ವಾಹನಗಳಿಗೆ ಮೊದಲ 4 ಕಿ.ಮೀ.ಗೆ 130 ರೂ., ಪ್ರತಿ ಹೆಚ್ಚುವರಿ ಕಿ.ಮೀ.ಗೆ 32 ರೂ. ಏರಿಕೆ ಮಾಡಲಾಗಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.
ಕಿಲೋ ಮೀಟರ್ ದರ
ನಾನ್-ಎಸಿ ಟ್ಯಾಕ್ಸಿಗಳಿಗೆ ಮೊದಲ 4 ಕಿಲೋ ಮೀಟರ್‌ಗೆ ರೂಪಾಯಿ 75 ನಿಗದಿ ಮಾಡಿತ್ತು. ನಂತ ಪ್ರತಿ ಕಿಮೀಗೆ ರೂಪಾಯಿ 18 ನಿಗದಿಪಡಿಸಿದೆ. ಸರ್ಕಾರ ಕೊನೆಯದಾಗಿ 2021 ರಲ್ಲಿ ದರಗಳನ್ನು ಪರಿಷ್ಕರಣೆ ಮಾಡಿತ್ತು. ಹವಾ ನಿಯಂತ್ರಣ ಟ್ಯಾಕ್ಸಿಗಳ ಮೊದಲ 4 ಕಿಮೀಗೆ 100 ರೂಪಾಯಿ ಇತ್ತು.
ಅಪ್ಲಿಕೇಶನ್ ಆಧಾರಿತ ಮತ್ತು ಸಿಟಿ ಟ್ಯಾಕ್ಸಿಗಳಿಗೆ ಪ್ರತ್ಯೇಕ ದರಗಳಿದ್ದವು. ಪ್ರತಿ ವರ್ಗವು ಕನಿಷ್ಠ ಮತ್ತು ಗರಿಷ್ಠ ದರ ಹೊಂದಿದ್ದು, ಅದನ್ನು ತೆಗೆದುಹಾಕಲಾಗಿದೆ. ಎಲ್ಲಾ ಟ್ಯಾಕ್ಸಿಗಳು/ಕ್ಯಾಬ್‌ಗಳಿಗೆ ಏಕರೂಪದ ದರ ಪರಿಚಯಿಸಲು ಇಲಾಖೆ ನಿರ್ಧರಿಸಿದೆ. ಎಲ್ಲಾ ವಾಹನಗಳು ಈಗ ಎಸಿ ಸೌಲಭ್ಯಗಳನ್ನು ಹೊಂದಿರುವುದರಿಂದ ಶುಲ್ಕದ ರಚನೆಯಿಂದ ಎಸಿ ಅಲ್ಲದ ವರ್ಗವನ್ನು ತೆಗೆದುಹಾಕಲಾಗಿದೆ ಎಂದು ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಎಲ್ ಹೇಮಂತ್ ಕುಮಾರ್ ವಿವರಿಸಿದರು.

ವೇಟಿಂಗ್ ಚಾರ್ಜ್‌ನಲ್ಲಿ ಬದಲಾವಣೆ ಇಲ್ಲ
ಸದ್ಯ ಸರ್ಕಾರ ವೇಟಿಂಗ್ ಚಾರ್ಜ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿದೆ. ಇದು ಮೊದಲ ಐದು ನಿಮಿಷ ವೇಟಿಂಗ್‌ಗೆ ಯಾವುದೇ ಶುಲ್ಕ (ಚಾರ್ಜ್) ವಿಧಿಸುತ್ತಿರಲಿಲ್ಲ. ಐದು ನಿಮಿಷ ಬಳಿಕ ಪ್ರತಿ ಒಂದು ನಿಮಿರ್ಷಕ್ಕೆ ಒಂದು ರೂಪಾಯಿ ತೆಗೆದುಕೊಳ್ಳಲಾಗುತ್ತಿತ್ತು. ಆಧಾರಿತ ಅಗ್ರಿಗೇಟರ್‌ಗಳು ಶೇಕಡಾ 5 ಜಿಎಸ್‌ಟಿ ಸಂಗ್ರಹಿಸುತ್ತವೆ.
ಮಹಿಳೆಯರಿಗಾಗಿ ಉಚಿತ ಪ್ರಯಾಣ ನೀಡಲು ರಾಜ್ಯ ಸರ್ಕಾರದ ಉಚಿತ ಬಸ್ ಸೇವೆಯ ಶಕ್ತಿ ಯೋಜನೆ ಜಾರಿಗೆ ತಂದ ನಂತರ ಕೆಲವು ತಿಂಗಳುಗಳಲ್ಲಿ ಟ್ಯಾಕ್ಸಿ ಚಾಲಕರು ಆದಾಯ ಕುಸಿತ ಕಂಡಿತು. ಸೆಪ್ಟೆಂಬರ್ 2023 ರಲ್ಲಿ, ಮಹಿಳೆಯರಿಗೆ ಪ್ರೀಮಿಯಂ ಅಲ್ಲದ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ನೀಡಿದ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ಬೆಂಗಳೂರು ಬಂದ್‌ಗೆ ಕರೆ ನೀಡಿತ್ತು.
ಆಟೋಗಳು, ಟ್ಯಾಕ್ಸಿಗಳು, ವಿಮಾನ ನಿಲ್ದಾಣ ಟ್ಯಾಕ್ಸಿಗಳು, ಮ್ಯಾಕ್ಸಿ ಕ್ಯಾಬ್‌ಗಳು, ಸರಕು ವಾಹನಗಳು, ಶಾಲಾ ವಾಹನಗಳು ರಸ್ತೆಗಿಳಿದು ಪ್ರತಿಭಟಿಸಿದ್ದರು. ತಮಗಾದ ನಷ್ಟವನ್ನು ತುಂಬಿಕೊಡುವಂತೆ ಆಗ್ರಹಿಸಿದ್ದವು.












Click it and Unblock the Notifications