Tata Car: ಭೀಕರ ಅಪಘಾತವಾದರೂ ಸಣ್ಣ ಗಾಯವೂ ಆಗದೆ ಪಾರು ಮಾಡಿದ ಟಾಟಾ ಕಾರು
ಟಾಟಾ ಕಾರು ಭಾರತದಲ್ಲಿ ಗುಣಮಟ್ಟದ ಕಾರಣ ಭಾರಿ ಗಮನ ಸೆಳೆಯುತ್ತಿದೆ. ಮಧ್ಯಮ ವರ್ಗಕ್ಕೂ ಕೈಗೆಟುಕುವ ಬೆಲೆಯ ಶ್ರೇಣಿಯ ಕಾರುಗಳನ್ನು ಕೂಡ ಟಾಟಾ ಬಿಡುಗಡೆ ಮಾಡಿದೆ. ಸುರಕ್ಷತೆ ವಿಚಾರದಲ್ಲಿ ಟಾಟಾ ಕಾರು ಜನರ ನಂಬಿಕೆಯನ್ನು ಗಳಿಸಿಕೊಂಡಿದೆ.
ಟಾಟಾ ಕಾರು ಬಲಿಷ್ಠವಾಗಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವುದಕ್ಕೆ ಮತ್ತೊಂದು ಘಟನೆ ವರದಿಯಾಗಿದೆ. ಭೀಕರ ಅಪಘಾತವಾದರೂ, ಟಾಟಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಒಂದು ಗಾಯವೂ ಆಗದೆ ಪಾರಾಗಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರಲ್ಲಿ ಒಬ್ಬರಾದ ಕಾರ್ತಿಕ್ ಶೆಟ್ಟಿ ಎನ್ನುವವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಮಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದು, ಜೀವ ಉಳಿಸಿದ ಟಾಟಾ ಕಾರಿಗೆ ಧನ್ಯವಾದ ತಿಳಿಸಿದ್ದಾರೆ.
ಕಾರ್ತಿಕ್ ಶೆಟ್ಟಿ ಹೇಳಿದ್ದೇನು?
ನನ್ನ ಸ್ನೇಹಿತರು ಮತ್ತು ನಾನು ರಾಷ್ಟ್ರೀಯ ಹೆದ್ದಾರಿ 44ರ ಬೆಂಗಳೂರು ಸೇಲಂ ಮಾರ್ಗದಲ್ಲಿ ಭಯಾನಕ ಕಾರು ಅಪಘಾತಕ್ಕೀಡಾಗಿದ್ದೇವೆ. ಆದರೂ, ನಾವು ಯಾವುದೇ ಗಾಯಗೊಳ್ಳದೆ ಪಾರಾಗಿದ್ದೇವೆ. ಸುರಕ್ಷತೆ ವಿಧಾನಕ್ಕೆ ಟಾಟಾ ಮೋಟಾರ್ಸ್‌ಗೆ ದೊಡ್ಡ ಧನ್ಯವಾದಗಳು! ಎಂದು ಟ್ವೀಟ್ ಮಾಡಿದ್ದಾರೆ.
Yesterday, my friends and I had a scary car accident on NH44 Bengaluru to Salem route. But huge thanks to @TataMotors for their safety-first approach! We were in a Tata Harrier, and all three of us came out without a scratch. Grateful for their commitment to safety. 🙏#gratitude pic.twitter.com/DNnX4OtAml
— Karthik Shetty (@imkarthikshetty) February 26, 2024
ಭೀಕರ ಅಪಘಾತವಾದರೂ ನಾವು ಮೂವರೂ ಸಣ್ಣ ಗಾಯವೂ ಇಲ್ಲದೆ ಹೊರಬಂದೆವು. ಸುರಕ್ಷತೆಗೆ ಟಾಟಾ ಕಂಪನಿಯ ಬದ್ಧತೆಗೆ ಕೃತಜ್ಞರಾಗಿರಬೇಕು ಎಂದು ಹೇಳಿದ್ದಾರೆ.
ಕಾರ್ತಿಕ್ ಶೆಟ್ಟಿ ಮತ್ತು ಸ್ನೇಹಿತರು ಟಾಟಾ ಹ್ಯಾರಿಯರ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಹಿಂದೆ-ಮುಂದೆ ಎರಡೂ ಕಡೆ ಕಾರಿಗೆ ಗುದ್ದಿದ್ದರೂ, ಒಳಗಿದ್ದವರು ಯಾವ ಅಪಾಯವೂ ಇಲ್ಲದೇ ಪಾರಾಗಿದ್ದಾರೆ. ಟ್ವೀಟ್ ಖಾತೆಯಲ್ಲಿ ಅವರು ಚಿತ್ರಗಳನ್ನು ಕೂಡ ಹಂಚಿಕೊಂಡಿದ್ದು, ಅಪಘಾತದ ತೀವ್ರತೆ ಎಷ್ಟಿದೆ ಎನ್ನುವುದನ್ನು ನೋಡಬಹುದಾಗಿದೆ.
ಟಾಟಾ ಮೋಟಾರ್ಸ್ ಹೇಳಿದ್ದೇನು?
ಕಾರ್ತಿಕ್ ಶೆಟ್ಟಿ ಅವರ ಟ್ವೀಟ್‌ಗೆ ಟಾಟಾ ಮೋಟಾರ್ಸ್ ಪ್ರತಿಕ್ರಿಯೆ ನೀಡಿದೆ. "ಹೇ, ಕಾರ್ತಿಕ್ ಶೆಟ್ಟಿ, ಈ ದುರದೃಷ್ಟಕರ ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದು ನಮಗೆ ನಿರಾಳವಾಗಿದೆ. ನಿಮ್ಮ ಸುರಕ್ಷತೆಯೊಂದಿಗೆ ನಮ್ಮನ್ನು ನಂಬಿದ್ದಕ್ಕಾಗಿ ಧನ್ಯವಾದಗಳು.
ಟಾಟಾ ಮೋಟಾರ್ಸ್ ಎಲ್ಲಾ ಸಮಯದಲ್ಲೂ ಸುರಕ್ಷತೆಯ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯುವುದನ್ನು ಮುಂದುವರಿಸುತ್ತದೆ. ಯಾವುದೇ ಹೆಚ್ಚಿನ ಸಹಾಯದ ಸಂದರ್ಭದಲ್ಲಿ ನಮ್ಮನ್ನು ಸಂಪರ್ಕಿಸಬಹುದು." ಎಂದು ಹೇಳಿದೆ.
-
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications