ಶಿವಮೊಗ್ಗದಲ್ಲಿ ತಮಿಳು ಗೀತೆಗೆ ತಡೆ: ಅಣ್ಣಮಲೈ ಕ್ಷಮೆಯಾಚನೆಗೆ ಕನಿಮೊಳಿ ಆಗ್ರಹ

ಚೆನ್ನೈ, ಏಪ್ರಿಲ್ 28: ಶಿವಮೊಗ್ಗದಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರದ ವೇಳೆ ತಮಿಳುನಾಡು ರಾಜ್ಯ ಗೀತೆ ಅರ್ಧಕ್ಕೆ ಮೊಟುಕು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಡಿಎಂಕೆ ಸಂಸದೆ ಕನಿಮೊಳಿ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶಿವಮೊಗ್ಗದಲ್ಲಿ ಗುರುವಾರ ಪ್ರಚಾರದ ವೇಳೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಅಣ್ಣಮಲೈ ಅವರು ಇದ್ದರು. ಈ ವೇಳೆ ಸಮಾರಂಭದಲ್ಲಿ ತಮಿಳುನಾಡು ರಾಜ್ಯ ಗೀತೆಯನ್ನು ಧ್ವನಿವರ್ಧಕದಲ್ಲಿ ಹಾಕಲಾಯಿತು. ಆದ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಅವರು ಗೀತೆ ಅರ್ಧಕ್ಕೆ ನಿಲ್ಲಿಸುವಂತೆ ತಿಳಿಸಿದ್ದರು.

Tamil nadu state song stop in Shivamogga: Kanimozhi demands Annamalais apology

ಈ ಘಟನೆಯ ಕುರಿತು ಅಣ್ಣಮಲೈ ಸಮ್ಮುಖದಲ್ಲಿ ಬಿಜೆಪಿ ತಮಿಳುನಾಡು ಗೀತೆ ಅವಮಾನ ಮಾಡಿದೆ. ಹೀಗಾಗಿ ಅವರು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ. "ತಮಿಳು ಥಾಯ್ ವಜ್ತು" ಅನ್ನು ತನ್ನ ಬಿಜೆಪಿ ಪಕ್ಷದ ಸದಸ್ಯರು ನಿಲ್ಲಿಸುವುದನ್ನು ತಡೆಯಲು ಸಾಧ್ಯವಾಗದ ಯಾರಾದರೂ ತಮಿಳುನಾಡಿನ ಜನರ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾರೆ?" ಎಂದು ಕನಿಮೊಳಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಡಿಎಂಕೆಗೆ ಪ್ರತಿಯಾಗಿ ಅಣ್ಣಾಮಲೈ ಕೂಡ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಹಳೆಯ ಸುದ್ದಿ ಕ್ಲಿಪ್ ಅನ್ನು ಟ್ವೀಟ್ ಮಾಡಿದರು. ಆಗ ಸ್ಟಾಲಿನ್‌ ವಿರೋಧ ಪಕ್ಷದ ನಾಯಕರಾಗಿದ್ದರು. ಇದರಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ನಾಡಗೀತೆಯನ್ನು ಹಾಡಿಸಲಾಗಿಲ್ಲ ಎಂದು ವರದಿಯಾಗಿದೆ.

Tamil nadu state song stop in Shivamogga: Kanimozhi demands Annamalais apology

ರಾಷ್ಟ್ರ ಧ್ವಜಾರೋಹಣ ಮಾಡಿದ ನಂತರ ನಾಡಗೀತೆಯನ್ನು ನುಡಿಸಲು ತಿಳಿಯದ ನಾಯಕನೊಂದಿಗೆ ಇದೆಲ್ಲಾ ಬೇಕಾ. ತಮಿಳು ಥಾಯ್ ರಾಜ್ಯ ಗೀತೆ ಮತ್ತು ರಾಜ್ಯ ವಿಭಜನೆಯನ್ನು ಬಿತ್ತಿದೆಯೇ?""ನಿಮ್ಮ ಮತ್ತು ಡಿಎಂಕೆಯ ಅಗ್ಗದ ರಾಜಕೀಯದಿಂದ ತಮಿಳು ಜನರನ್ನು ಉಳಿಸುವುದು ನಮ್ಮ ಏಕೈಕ ಧ್ಯೇಯವಾಗಿದೆ. ಚಿಂತಿಸಬೇಡಿ ಎಂದು ಅಣ್ಣಾಮಲೈ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಈ ಘಟನೆಯ ವೈರಲ್ ವೀಡಿಯೊ ಪ್ರಕಾರ, ಶಿವಮೊಗ್ಗದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮದ ವೇಳೆ ತಮಿಳುನಾಡು ರಾಜ್ಯ ಗೀತೆ ತಮಿಳು ಥಾಯ್ ವಜ್ತುವನ್ನು ವೇದಿಕೆಯಲ್ಲಿ ನುಡಿಸಲಾಯಿತು. ಆದರೆ ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ಕರ್ನಾಟಕ ರಾಜ್ಯ ಗೀತೆಯನ್ನು ನುಡಿಸುವಂತೆ ಹೇಳಿ ಅದನ್ನು ಮಧ್ಯದಲ್ಲಿ ನಿಲ್ಲಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕರ್ನಾಟಕದ 224 ಸ್ಥಾನಗಳ ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+