TN State Anthem: ಶಿವಮೊಗ್ಗ ಸಮಾವೇಶದಲ್ಲಿ ತಮಿಳುನಾಡು ನಾಡಗೀತೆ ಪ್ಲೇ- ಕನ್ನಡಿಗರು ಕಿಡಿ

ಶಿವಮೊಗ್ಗ ಏಪ್ರಿಲ್ 27: ರಾಜ್ಯದಲ್ಲಿ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಕೇಂದ್ರ ಹಾಗೂ ಇತರ ರಾಜ್ಯದ ಪ್ರಭಾವಿ ನಾಯಕರನ್ನು ಕರೆತಂದು ರಾಜ್ಯದಲ್ಲಿ ಪ್ರಚಾರವನ್ನು ಪಕ್ಷಗಳು ನಡೆಸುತ್ತಿವೆ. ಇಂದು ಸಮಾವೇಶವೊಂದರಲ್ಲಿ ತಮಿಳುನಾಡು ನಾಡಗೀತೆಯನ್ನು ಹಾಕಲಾಗಿದ್ದು, ಬಳಿಕ ಎಚ್ಚತ್ತುಕೊಂಡ ಶಾಸಕ ಕೆ.ಎಸ್‌. ಈಶ್ವರಪ್ಪ ಅದನ್ನು ಅರ್ಧಕ್ಕೆ ತಡೆದು ಕರ್ನಾಟಕದ ನಾಡಗೀತೆ ಹಾಕಿಸಿದ್ದು ಕಂಡು ಬಂದಿದೆ. ಈ ಘಟನೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಶಿವಮೊಗ್ಗದ ಎನ್‌ಇಎಸ್‌ ಮೈದಾನದಲ್ಲಿ ಮಧ್ಯಾಹ್ನ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ತಮಿಳು ಬಾಂಧವರ ಸಮಾವೇಶದಲ್ಲಿ ಈ ಘಟನೆ ನಡೆದಿದೆ. ಸಮಾವೇಶ ಆರಂಭವಾಗುತ್ತಿದ್ದಂತೆಯೇ ಸಂಘಟಕರು ಈಗ ತಮಿಳು ನಾಡಗೀತೆ ಆರಂಭವಾಗಲಿದೆ. ಎಲ್ಲರೂ ಎದ್ದು ನಿಂತುಕೊಳ್ಳಿ ಎಂದು ಮನವಿ ಮಾಡಿದರು. ಆಗ ಸಮಾವೇಶದಲ್ಲಿ ನೆರೆದವರ ಜೊತೆ ವೇದಿಕೆಯಲ್ಲಿದ್ದ ಈಶ್ವರಪ್ಪ ಸೇರಿದಂತೆ ಗಣ್ಯರು ಎದ್ದು ನಿಂತಿದ್ದಾರೆ. ಈ ವೇಳೆ ತಮಿಳುನಾಡು ನಾಡಗೀತೆ ಆರಂಭವಾಗಿದೆ. ಬಳಿಕ ಈಶ್ವರಪ್ಪ ಕರ್ನಾಟಕದ ನಾಡಗೀತೆಯನ್ನ ಹಾಕಿಸಿದ್ದಾರೆ.

Tamil Nadu Nada geete Played in Shivamogga Convention

ಶಿವಮೊಗ್ಗ ನಗರ ಹಾಗೂ ಭದ್ರಾವತಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳು ಮತದಾರರಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ಬಿಜೆಪಿ ತಮಿಳು ಭಾಷಿಗರ ಸಮಾವೇಶ ಆಯೋಜನೆ ಮಾಡಿತ್ತು. ಸಮಾವೇಶದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಮಾಜಿ ಸಚಿವ ಈಶ್ವರಪ್ಪ, ಅಭ್ಯರ್ಥಿ ಚನ್ನಬಸಪ್ಪ ಭಾಗಿಯಾಗಿದ್ದರು.

ಈ ವೇಳೆ ಸಮಾವೇಶದಲ್ಲಿ ತಮಿಳು ಪ್ರಾರ್ಥನೆ ಪ್ಲೇ ಆಗಿದೆ. ತಕ್ಷಣವೇ ಎಚ್ಚೆತ್ತ ಮಾಜಿ ಸಚಿವ ಈಶ್ವರಪ್ಪ, ಏಯ್ ಇದು ಯಾವ ಪ್ರಾರ್ಥನೆ? ನಾಡಗೀತೆ ಹಾಕಪ್ಪ. ನಿಮ್ಮಲ್ಲಿ ಯಾರಾದರೂ ನಾಡಗೀತೆ ಹಾಡುತ್ತೀರಾ ಎಂದು ನೆರೆದಿದ್ದವರನ್ನು ಈಶ್ವರಪ್ಪ ಕೇಳಿದ್ದಾರೆ. ಬಳಿಕ ಆಯೋಜಕರು ತಮಿಳಿನ ಪ್ರಾರ್ಥನೆಯನ್ನು ನಿಲ್ಲಿಸಿ ಕನ್ನಡದ ನಾಡಗೀತೆಯನ್ನು ಪ್ಲೇ ಮಾಡಿದರು.

ಇದರ ವಿರುದ್ಧ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು 'ಅಪ್ಪಟ ಕನ್ನಡಿಗರ ನಾಡು ಶಿವಮೊಗ್ಗ.. ಕುವೆಂಪು ಅವರ ನಾಡಿನಲ್ಲಿ ತಮಿಳು ನಾಡಗೀತೆ... ಈಗ ಚುನಾವಣಾ ಸಮಯ ವೋಟ್ ಗಾಗಿ ಏನ್ ಬೇಕೋ ಅದನ್ನು ಮಾಡಿ...' ಎಂದು ಆಕ್ರೋಶಗೊಂಡಿದ್ದಾರೆ.

ಬುಧವಾರ ಅಣ್ಣಾಮಲೈ ವಿ ಸೋಮಣ್ಣ ಅವರೊಂದಿಗೆ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮಿಳಿನಲ್ಲಿ ಅವರು ಮಾತನಾಡಿರುವ ದೃಶ್ಯ ಕಂಡು ಬಂದಿದೆ. ಈ ವಿಡಿಯೋವನ್ನು ಹಂಚಿಕೊಂಡ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕಿಡಿ ಕಾರಿದ್ದಾರೆ.

'ಕನ್ನಡಕ್ಕಾಗಿ ತನ್ನ ಪ್ರಾಣ ನೀಡಿದ ಗೋವಿಂದರಾಜರ ಹೆಸರಿನ ಬಡಾವಣೆಯಲ್ಲಿ ತಮಿಳು. ಇದು ತಮಿಳುನಾಡು ಅಂದುಕೊಂಡ್ರಾ ಅಲ್ಲಾ ಅಪ್ಪಟ ಕನ್ನಡಿಗರಿರೋ ಬೆಂಗಳೂರಿನ ಗೋವಿಂದರಾಜನಗರ ಎಲ್ಲವೂ ವೊಟ್ಗಾಗಿ.. ಅಯ್ಯೋ ಕರ್ಮವೇ ಇನ್ನು ಏನೇನು ನೋಡಬೇಕೋ ಕನ್ನಡಿಗರು... ಇಲ್ಲಿರೋ ಎಲ್ಲರಿಗೂ ಕನ್ನಡ ಬರುತ್ತೆ ಅರಿವಿರಲಿ.. ಭಾಷೆಗಿಂತ ನಿಮ್ಮ ರಾಜಕೀಯ ದೊಡ್ಡದಲ್ಲ..' ಎಂದು ಅವರು ಕಿಡಿ ಕಾರಿದ್ದಾರೆ.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆದಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವೂ ಮುಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

ಬಿಜೆಪಿ ಪ್ರಚಾರದ ವೇಳೆ ಅಣ್ಣಾಮಲೈ ತಮಿಳಿನಲ್ಲಿ ಮತಯಾಚಿಸಿದ್ದರು. ಅದಕ್ಕೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಆಕ್ಷೇಪ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದರು. ಅವರ ಟ್ವೀಟಿಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು ಹಿಂದೆ ಜೆಡಿಎಸ್ ಪ್ರಚಾರದ ವೇಳೆ ಉರ್ದುವಿನಲ್ಲಿ ಭಾಷಣ ಮಾಡಿದ ವಿಡಿಯೋ ತುಣುಕನ್ನು ಹಾಕಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+