ಹೊಗೇನಕಲ್ ನದಿಯಲ್ಲಿ ದೋಣಿ ವಿಹಾರ ನಿಷೇಧಿಸಿದ ತಮಿಳುನಾಡು

ಹೊಗೇನಕಲ್‌, ನವೆಂಬರ್‌ 10: ಸಾರ್ವಜನಿಕರು ಮತ್ತು ಪ್ರವಾಸಿಗರ ಸುರಕ್ಷತೆಯನ್ನು ಪರಿಗಣಿಸಿ ಹೊಗೇನಕಲ್ ಕಾವೇರಿ ನದಿಯಲ್ಲಿ ಪರಿಸಲ್ (ದೋಣಿ) ಸೇವೆಯನ್ನು ಧರ್ಮಪುರಿ ಜಿಲ್ಲಾಡಳಿತ ನಿಷೇಧಿಸಿದೆ.

ಧರ್ಮಪುರಿ ಜಿಲ್ಲೆಯಲ್ಲಿ ಹೊಗೇನಕಲ್ ಕಾವೇರಿ ನದಿಯಲ್ಲಿ ಸೆಕೆಂಡಿಗೆ 8000 ಕ್ಯೂಬಿಕ್ ಅಡಿಗಿಂತ ಹೆಚ್ಚಿನ ನೀರಿನ ಒಳಹರಿವು ಇದ್ದರೆ, ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಪರಿಸಲ್ ಕಾರ್ಯಾಚರಣೆಗೆ ಸಾಮಾನ್ಯವಾಗಿ ನಿಷೇಧ ಹೇರುತ್ತದೆ.

Tamil Nadu bans parisal service in Hogenakkal river

ಗುರುವಾರ ಬೆಳಗಿನ ವರದಿಯಂತೆ ಹೊಗೇನಕಲ್ ಕಾವೇರಿ ನದಿ ಸೆಕೆಂಡಿಗೆ 11,000 ಕ್ಯೂಬಿಕ್ ಅಡಿಗಳಷ್ಟು ಹರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಹೊಗೇನಕಲ್ ಕಾವೇರಿ ನದಿಯಲ್ಲಿ ದೋಣಿ ವಿಹಾರ ಸೇವೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದರೆ ಹೊಗೇನಕಲ್ ಜಲಪಾತದಲ್ಲಿ ಸ್ನಾನ ಮಾಡಲು ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ನಿರ್ಬಂಧವಿಲ್ಲ.

ಕಾವೇರಿ ಜಲಾನಯನ ಪ್ರದೇಶಗಳು ಹಾಗೂ ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಅರಣ್ಯ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಬಹುದು ಎಂದು ಕೇಂದ್ರ ಜಲ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೀಪಾವಳಿ ರಜೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಹೊಗೇನಕಲ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಅಕ್ಟೋಬರ್‌ನಲ್ಲಿ ತಮಿಳುನಾಡಿಗೆ ಮತ್ತೆ 2,600 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶ ಪ್ರಶ್ನಿಸಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋದ ಕರ್ನಾಟಕಕ್ಕೆ ಭಾರೀ ಹಿನ್ನಡೆತ್ತು. ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಎತ್ತಿಹಿಡಿರುವ ಪ್ರಾಧಿಕಾರ, ನವೆಂಬರ್ 23ರ ವರೆಗೆ ತಮಿಳುನಾಡಿಗೆ ನಿತ್ಯ 2600 ಕ್ಯೂಸೆಕ್‌ ನೀರು ಹರಿಸುವಂತೆ ಮತ್ತೆ ಸೂಚನೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+