ಗಡಿಭಾಗದ ಶಾಲೆಯಲ್ಲಿ ತಮಿಳು ಹೇರಿಕೆ ವಿರುದ್ಧ ಕೋರ್ಟ್‌ಗೆ
ಬೆಂಗಳೂರು, ಫೆ. 17 : ಗಡಿ ಜಿಲ್ಲೆಗಳ ಕನ್ನಡ ಶಾಲೆಗಳಲ್ಲಿ ತಮಿಳು ಭಾಷೆಯ ಹೇರಿಕೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಭಾಷ್ ಎಸ್. ಛಾಯಾಗೋಳ್ ಹೇಳಿದ್ದಾರೆ. ಪ್ರಥಮ ಭಾಷೆಯಾಗಿ ಆಯಾ ರಾಜ್ಯದ ಆಡಳಿತ ಭಾಷೆಯನ್ನು ಹೇರಲು ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸುಭಾಷ್ ಎಸ್. ಛಾಯಾಗೋಳ್ ಅವರು, ಸಂವಿಧಾನದ 350 ಎ ಮತ್ತು ಬಿ ವಿಧಿಯ ಅನ್ವಯ ಯಾವುದೇ ರಾಜ್ಯದಲ್ಲೂ ಮಾತೃಭಾಷೆಯಲ್ಲಿ ಶಿಕ್ಷಣ ಕಲಿಯಲು ಅವಕಾಶ ನೀಡಲಾಗಿದೆ.[ಗಂಡುಮೆಟ್ಟಿನ ನಾಡಿನ ಹೈದ ಬೆಂದ ಊರು..! ಕಂಡಿದ್ದು ಹೀಗೆ]

ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕಾಗಿದ್ದು ಆಯಾ ರಾಜ್ಯ ಸರ್ಕಾರಗಳ ಕರ್ತವ್ಯ. ಪ್ರಥಮ ಭಾಷೆಯಾಗಿ ಆಯಾ ರಾಜ್ಯದ ಆಡಳಿತ ಭಾಷೆಯನ್ನು ಹೇರಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಗಡಿ ಜಿಲ್ಲೆಗಳಲ್ಲಿ ತಮಿಳು ಹೇರಿಕೆ ವಿರುದ್ಧ ರಿಟ್ ಅರ್ಜಿ ಸಲ್ಲಿಸಲಾಗುತ್ತದೆ ಎಂದರು. [ಒಂದೇ ನಿರ್ಣಯದೊಂದಿಗೆ ಶ್ರವಣಬೆಳಗೊಳ ಸಮ್ಮೇಳನಕ್ಕೆ ತೆರೆ]
ಪ್ರೊ. ಬರಗೂರು ರಾಮಚಂದ್ರಪ್ಪ ಹಾಗೂ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ಗಡಿನಾಡು ಅಧ್ಯಯನ ವರದಿಯನ್ನು ಅನುಷ್ಠಾನಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದ ಸುಭಾಸ್ ಎಸ್ ಛಾಯಾಗೋಳ ಅವರು ಈ ಸಂಬಂಧ ಮುಂದಿನ ಬಜೆಟ್ 100 ಕೋಟಿ ಅನುದಾನವನ್ನು ಪ್ರಾಧಿಕಾರಕ್ಕೆ ಒದಗಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು.
ಗಡಿಭಾಗದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ, ಗ್ರಂಥಾಲಯಗಳನ್ನು ಪ್ರಾರಂಭಿಸುವುದು, ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಾಧಿಕಾರವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಪ್ರಾಧಿಕಾರದಲ್ಲಿ ಈಗಿರುವ 80 ಲಕ್ಷ ರೂ ಅನುದಾನದಲ್ಲಿ ಚಿತ್ರದುರ್ಗ, ಯಾದಗಿರಿ, ರಾಯಚೂರು, ವಿಜಯಾಪುರ, ಬೀದರ್, ಗುಲ್ಬರ್ಗಾ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications