Cabinet Meeting: ಕ್ಯಾಬಿನೆಟ್ ಮೀಟಿಂಗ್‌ನಲ್ಲೇ ಸಿದ್ದರಾಮಯ್ಯ ಎದುರೇ ಸಚಿವರ ಜಟಾಪಟಿ: ಚರ್ಚೆಯಾಗಿದ್ದೇನು?
ಬೆಂಗಳೂರು, ಅಕ್ಟೋಬರ್ 31: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಪ್ರಭಾವಿ ಸಚಿವರ ನಡುವೆ ಭಾರೀ ಮಾತಿನ ಸಮರ, ಜಟಾಪಟಿ, ಗದ್ದಲ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಸದಸ್ಯರು ಹಾಗೂ ಶಾಸಕರ ನಡುವೆ ಪದೇ ಪದೇ ಜಟಾಪಟಿ ನಡೆದಿತ್ತು. ಇದೀಗ ಸಮಾಜ ಕಲ್ಯಾಣ ಸಚಿವ ಹೆಚ್‌ಸಿ ಮಹದೇವಪ್ಪ ಹಾಗೂ ಇಂಧನ ಸಚಿವ ಕೆಜೆ ಜಾರ್ಜ್ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ.
ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಈ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ಹಾಜರಿದ್ದರು. ಈ ವೇಳೆಯೇ ಚರ್ಚೆ ನಡೆಯುವಾದ ಇಂಧನ ಸಚಿವ ಕೆಜೆ ಜಾರ್ಜ್ ಹಾಗೂ ಮಹದೇವಪ್ಪ ನಡುವೆ ವಾಕ್ಸಮರ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ಜಟಾಪಟಿ ನಡೆದಿದ್ಯಂತೆ. ಕೆಜೆ ಜಾರ್ಜ್ ಮಾತಿಗೆ ತಾಳ್ಮೆ ಕಳೆದುಕೊಂಡ ಹೆಚ್‌ಸಿ ಮಹದೇವಪ್ಪ, ಸಭೆಯಿಂದ ನಾನು ಎದ್ದು ಹೊರಟೇ ಬಿಡುತ್ತೇನೆ ಎಂದು ಕೂಗಾಡಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟದಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು ಇಲ್ಲಿವೆ
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಕೊಳವೆಬಾವಿಗಳನ್ನು ಕೊರೆಯಲು ಮತ್ತು ಪಂಪ್ ಸೆಟ್‌ಗಳನ್ನು ಸರಬರಾಜು ಮಾಡಲು 2022-23ನೇ ಸಾಲಿನಲ್ಲಿ Empanel ಮಾಡಿಕೊಂಡಿರುವ ಗುತ್ತಿಗೆದಾರರ ಅವಧಿಯನ್ನು ಮುಂದಿನ ಎರಡು ವರ್ಷಗಳಿಗೆ (2024-25 ಮತ್ತು 2025-26 ಸಾಲಿನ ಗುರಿಗಳಿಗೆ) ಸೀಮಿತಗೊಳಿಸಿ, 2027ನೇ ಜೂನ್ ತಿಂಗಳವರೆಗೆ ವಿಸ್ತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಗಂಗಾಕಲ್ಯಾಣ ಯೋಜನೆ ಮತ್ತು ಇತರ ಸ್ವಯಂ ಉದ್ಯೋಗ ಯೋಜನೆಗಳಡಿ ಫಲಾನುಭವಿಗಳನ್ನು ಆಯಾ ವರ್ಷದ ಅಕ್ಟೋಬರ್ 31ನೇ ತಾರೀಖಿನೊಳಗೆ ಸಂಬAಧಪಟ್ಟ ಆಯಾ ಕ್ಷೇತ್ರದ ಮಾನ್ಯ ಶಾಸಕರುಗಳು ಆಯ್ಕೆ ಮಾಡದೇ ಇದ್ದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಯಾ ಜಿಲ್ಲಾ ಮಾನ್ಯ ಉಸ್ತುವಾರಿ ಸಚಿವರಿಗೆ ವಹಿಸಲು (2025-26ನೇ ಸಾಲಿನ ಗುರಿಗಳನ್ನು ಹೊರತುಪಡಿಸಿ); ಸಚಿವ ಸಂಪುಟ ನಿರ್ಣಯಿಸಿದೆ.
2025-26ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ 241 ವಿವಿಧ ಮಾದರಿಯ ವಾಹನಗಳನ್ನು ರೂ.34.95 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೆಚ್ ಕೆ ಪಾಟೀಲ್ ಅವರು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ 2200 ಶಾಲಾ ಕೊಠಡಿಗಳನ್ನು 360 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ವಹಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
2025-26ನೇ ಆರ್ಥಿಕ ವರ್ಷದಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ, ವಲಯ ಮಟ್ಟದಲ್ಲಿ ಟೆಂಡರ್ ಕರೆಯಲು ಅವಕಾಶ ನೀಡುವುದು ಮತ್ತು ಮೈಸೂರು ಮತ್ತು ಬೆಂಗಳೂರು ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಯ ಯೋಜನಾ ರಸ್ತೆ ಆಸ್ತಿ ನಿರ್ವಹಣಾ ಕೇಂದ್ರ (PRAMC) ಗೆ ವಹಿಸಿ, ಕೇಂದ್ರೀಕೃತ ಟೆಂಡರ್ ಕರೆಯಲು ಅವಕಾಶ ನೀಡುವುದು. ಜಿಲ್ಲಾ ಮಟ್ಟದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಉಪ ನಿರ್ದೇಶಕರು (ಆಡಳಿತ) ಇವರು ಕಾಮಗಾರಿಗಳ ಮೇಲ್ವಿಚಾರಣೆ ನಡೆಸುತ್ತಾರೆ ಸಚಿವ ಸಂಪುಟ ನಿರ್ಧರಿಸಿದೆ.
ಕರಾವಳಿಯ ಪ್ರಸ್ತಾವಿತ ಯೋಜನೆಗಳಾಗಿರುವ ರಾಜ್ಯದ ನಾಲ್ಕು ಹಾಲಿ (existing) ಬಂದರುಗಳಾದ (1) ಕಾರವಾರ (2) ಹಳೇ ಮಂಗಳುರು (ಬೇಂಗ್ರೆ ಬದಿ) (3) ಹಳೇ ಮಂಗಳೂರು (ನಗರ ಬದಿಯ) ಮತ್ತು (4) ಮಲ್ಪೆಯ ಬರ್ತ್ಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರಿಪೇರಿ- ಕಾರ್ಯಾಚರಣೆ-ನಿರ್ವಹಣೆ-ವರ್ಗಾವಣೆ (ROMT) ಆಧಾರದಲ್ಲಿ ಅಭಿವೃದ್ಧಿಪಡಿಸಿ, ನಿರ್ವಹಿಸುವ ಗುರಿಯನ್ನು ಹೊಂದಿದ್ದು, ಇದು ಖಾಸಗಿ ಪಾಲುದಾರಿಕೆಯೊಡನೆ ಕರಾವಳಿಯ ಆಯ್ದ ಹಾಲಿ ಬಂದರುಗಳ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿವುದರೊಂದಿಗೆ, ಕರ್ನಾಟಕ ಜಲಸಾರಿಗೆ ಮಂಡಳಿಯ ವಾರ್ಷಿಕ ಆದಾಯದ ಹೆಚ್ಚಳ, ಸ್ಥಳೀಯ ಉದ್ಯೋಗದ ಹೆಚ್ಚಳ ಮತ್ತು ಸುಧಾರಿತ ಜೀವನೋಪಾಯಕ್ಕೆ ಅವಕಾಶ ನೀಡುವ ಮೂಲಕ ಈ ಯೋಜನೆಗಳು ಅಭಿವೃದ್ಧಿಯನ್ನು ಉತ್ತೇಜಿಸುವುದರಿಂದ ಸದರಿ ಯೋಜನೆಯನ್ನು ಸಚಿವ ಸಂಪುಟ ಅನುಮೋದಿಸಿದೆ.
ಮಂಡ್ಯ ಜಿಲ್ಲಾ, ಕಾಂಗ್ರೆಸ್ ಭವನದ ಕಟ್ಟಡದ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ವಿವೇಕಾನಂದ ಬಡಾವಣೆಯಲ್ಲಿರುವ ನಾಗರಿಕ ಸೌಲಭ್ಯ ನಿವೇಶನ ಸಂಖ್ಯೆ: 1/ಬಿ ರಲ್ಲಿ 1457.8 ಚ.ಮೀ ವಿಸ್ತೀರ್ಣದ ನಿವೇಶನವನ್ನು ಮಂಜೂರು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.
ಕೋಲಾರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕೋಲಾರ APMC ಯಿಂದ ಹಾಗೂ ಬಿಬಿಎಂಪಿಯಿಂದ ಪ್ರತಿದಿನ ಒಟ್ಟಾರೆ 150 ಟನ್‌ಗಳಷ್ಟು ಹಸಿತ್ಯಾಜ್ಯವನ್ನು Compressed Bio Gas (CBG)) ಘಟಕಗಳ ಮೂಲಕ ಸಂಸ್ಕರಿಸಲು ಕೋಲಾರ ನಗರಸಭೆಗೆ ಸೇರಿದ ವಕ್ಕಲೇರಿ ಹೋಬಳಿ, ಅರಾಭಿಕೊತ್ತನೂರು ಗ್ರಾಮದ ಸರ್ವೆ ನಂ.152ರಲ್ಲಿ 9 ಎಕರೆ 38 ಗುಂಟೆ ಜಮೀನನ್ನು ಕೇವಲ ಸೀಮಿತ ಬಳಕೆಗಾಗಿ ಮಾತ್ರ (Permissive Use)) 25 ವರ್ಷಗಳ ಅವಧಿಗೆ Nominal Lease Rate ಆಧಾರದ ಮೇಲೆ Gas Authority of India Limited (GAIL) ಸಂಸ್ಥೆಗೆ ವಹಿಸಿಕೊಡಲು; ಸಚಿವ ಸಂಪುಟ ನಿರ್ಧರಿಸಿದೆ.












Click it and Unblock the Notifications