ನಿತ್ಯದ ಆಗುಹೋಗುಗಳ ಸಂಕಲನ 'ಕಾಫಿ ಬ್ರೇಕ್'!

ಹವ್ಯಾಸಿ ಬರಹಗಾರರಾಗಿರುವ ರಂಗರಾಜ್ ಚಕ್ರವರ್ತಿ ಅವರು ಆಂಗ್ಲ ಭಾಷೆಯಲ್ಲಿ ಬರೆದಿರುವ 'ಕಾಫಿ ಬ್ರೇಕ್' ಪುಸ್ತಕದ ಕನ್ನಡ ಅನುವಾದ ಸೆಪ್ಟೆಂಬರ್ 22ರ ಭಾನುವಾರ, ಬೆಳಿಗ್ಗೆ 10.30ಕ್ಕೆ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಕನ್ನಡ ಅನುವಾದ ಮಾಡಿರುವವರು ಧರ್ಮಶ್ರೀ ಬಿ. ಐಯ್ಯಂಗಾರ್.
ಇಂಜಿನಿಯರಿಂಗ ಪದವೀಧರೆಯಾಗಿರುವ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಮತ್ತು ಹಾಡುಗಾರ್ತಿಯಾಗಿರುವ ಧರ್ಮಶ್ರೀ ಐಯ್ಯಂಗಾರ್ ಅವರು ಮೈಸೂರನಲ್ಲಿ ನೆಲೆಸಿದ್ದಾರೆ. ಅವರು ಕೆಲ ವರ್ಷಗಳ ಕಾಲ ಅಮೆರಿಕದಲ್ಲಿ ಇದ್ದು ಈಗ ಭಾರತಕ್ಕೆ ಮರಳಿದ್ದಾರೆ. ಧರ್ಮಶ್ರೀ ಅವರು ಹವ್ಯಾಸಿ ಬರಹಗಾರ್ತಿಯಾಗಿದ್ದಾರೆ.
ಖ್ಯಾತ ಪತ್ರಕರ್ತ ಮತ್ತು ಸಾಹಿತಿ ಜೋಗಿ (ಗಿರೀಶ್ ರಾವ್ ಹತ್ವಾರ್) ಮತ್ತು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಉದ್ಯೋಗಿಯಾಗಿರುವ ರವಿ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಕರ್ತೃಗಳಾದ ರಂಗರಾಜ್ ಚಕ್ರವರ್ತಿ ಮತ್ತು ಧರ್ಮಶ್ರೀ ಐಯ್ಯಂಗಾರ್ ಅವರೂ ಉಪಸ್ಥಿತರಿರಲಿದ್ದಾರೆ.
ರಂಗರಾಜ್ ಚಕ್ರವರ್ತಿ ಅವರ ಬ್ಲಾಗ್ ಬರಹಗಳ ಸಂಕಲನ 'ಕಾಫಿ ಬ್ರೇಕ್'. ದಿನನಿತ್ಯದ ಆಗುಹೋಗುಗಳ ಬಗ್ಗೆ ರಂಗರಾಜ್ ಚಕ್ರವರ್ತಿ ಅವರು ಲಘು ಬರಹಗಳನ್ನು ಬರೆದಿದ್ದಾರೆ. ಪುಸ್ತಕದಲ್ಲಿ ಒಟ್ಟು 22 ಅಧ್ಯಾಯಗಳಿವೆ. ಪುಸ್ತಕವನ್ನು ಪ್ರಕಟಿಸಿರುವುದು ವಾಟಿಕುಟೀರ ಪಬ್ಲಿಕೇಷನ್.
ಪುಸ್ತಕ ಬಿಡುಗಡೆಯ ವಿವರ
ಶೀರ್ಷಿಕೆ : ಕಾಫಿ ಬ್ರೇಕ್
ಕರ್ತೃ : ರಂಗರಾಜ್ ಚಕ್ರವರ್ತಿ (ಇಂಗ್ಲಿಷ್), ಕನ್ನಡ ಅನುವಾದ ಧರ್ಮಶ್ರೀ ಐಯ್ಯಂಗಾರ್.
ಸ್ಥಳ : ಬಿ.ವಿ. ಜಗದೀಶ್ ಹಾಲ್, ನ್ಯಾಷನಲ್ ಕಾಲೇಜು, ಜಯನಗರ 7ನೇ ಬ್ಲಾಕ್, ಬೆಂಗಳೂರು.
ದಿನಾಂಕ, ಸಮಯ : 22ನೇ ಸೆಪ್ಟೆಂಬರ್, 2013, ಬೆಳಿಗ್ಗೆ 10.30ಕ್ಕೆ.












Click it and Unblock the Notifications