ನೈಋತ್ಯ ರೈಲ್ವೆ: ₹85,000 ಕೋಟಿ ಯೋಜನೆಗಳಿಗೆ ಇಂದು ಪ್ರಧಾನಿ ಚಾಲನೆ
ಹುಬ್ಬಳ್ಳಿ, ಮಾರ್ಚ್ 12: ಕರ್ನಾಟಕದ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಹಾಗೂ ದೇಶದ ವಿವಿಧ ಹೊಸ ವಂದೇ ಭಾರತ್ ರೈಲುಗಳು, ಅಭಿವೃದ್ಧಿ ಯೋಜನೆಗಳ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಂಗಳವಾರ (ಮಾ.12) ಚಾಲನೆ ನೀಡಲಿದ್ದಾರೆ.
ಈ ಪೈಕಿ ನೈಋತ್ಯ ರೈಲ್ವೆ ವಲಯ (SWR) ವ್ಯಾಪ್ತಿಯಲ್ಲಿ 85,000 ಕೋಟಿ ರೂಪಾಯಿ ಯೋಜನೆಗಳ ಅನುಷ್ಠಾನಕ್ಕೆ ಆನ್ ಲೈನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಲಿದ್ದಾರೆ. ಈ ಮೂಲಕ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು.

ರೂ.5,142 ಕೋಟಿ ಯೋಜನೆಗಳು ಜಾರಿ
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ, ಈ ಪೈಕಿ ಕೆಲವು ಉದ್ಘಾಟನೆ ಹಾಗೂ ಇನ್ನುಳಿದ ಹಲವು ಯೋಜನೆಗಳು ಶಂಕುಸ್ಥಾಪನೆಗೊಳ್ಳಲಿವೆ. ನೈಋತ್ಯ ರೈಲ್ವೆ ವಲಯದಲ್ಲಿ ಒಟ್ಟು 5,142 ಕೋಟಿ ಮೊತ್ತದ ಯೋಜನೆಗಳು ಜಾರಿಯಾಗುತ್ತಿವೆ ಎಂದು ತಿಳಿಸಿದ್ದಾರೆ.
27.79 ಕೋಟಿ ರೂ.ಗಳ ವೆಚ್ಚದಲ್ಲಿ ಹುಬ್ಬಳ್ಳಿ ಮತ್ತು ಥಣಿಸಂದ್ರ ರೈಲ್ವೆ ವರ್ಕ್‌ಶಾಪ್‌ನಲ್ಲಿ ಡೆಮು/ಮೆಮು ಶೆಡ್ ನಿರ್ಮಾಣಕ್ಕೆ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸುವರು. ಇದೇ ಸಂದರ್ಭದಲ್ಲಿ ದೇಶದ 10 ವಂದೇ ಭಾರತ್ ರೈಲು ಸಂಚಾರ ಸೇವೆಗೆ ಚಾಲನೆ ನೀಡಲಿದ್ದಾರೆ.
ಗುಡಗೇರಿ ರೈಲು ನಿಲ್ದಾಣ: ಮಳಿಗೆಗೆ ಚಾಲನೆ
ಗುಜರಾತ್‌ನಲ್ಲಿ ಮಂಗಳವಾರ ಬೆಳಗ್ಗೆ 9.30ಕ್ಕೆ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪ್ರಾಲ್ಗೊಳ್ಳಲಿದ್ದಾರೆ. ಆನ್ ಲೈನ್ ವೇದಿಕೆ ಮೂಲಕ ಹುಬ್ಬಳ್ಳಿ ವಿಭಾಗೀಯ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಹುಬ್ಬಳ್ಳಿ, ಧಾರವಾಡ ಗುಡಗೇರಿ ರೈಲು ನಿಲ್ದಾಣಗಳಲ್ಲಿ 'ಒಂದು ನಿಲ್ದಾಣ-ಒಂದು ಉತ್ಪನ್ನ' ಯೋಜನೆಯಡಿ ಮಳಿಗೆಗಳನ್ನು ತೆರೆಯಲಾಗಿದೆ. ಈ ಸ್ಥಳೀಯ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲಾಗುವ ಯೋಜನೆಗಳಿಗೂ ಇಂದು ಚಾಲನೆ ಸಿಗಲಿವೆ. ಒಟ್ಟಾರೆ ಈ ಎಲ್ಲ ಯೋಜನೆಗಳ ಅನುಷ್ಠಾನನಗಳು ದೇಶದ ರೈಲ್ವೆ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲಾಗಲಿವೆ ಎಂದು ಪ್ರಹ್ಲಾದ್ ಜೋಶಿಯವರು ಬಣ್ಣಿಸಿದರು.
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿ ದೊರೆಯಲು ಪ್ರಧಾನ ಮಂತ್ರಿ ಜನೌಷಧಿ ಮಳಿಗೆ ಕೂಡ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ವಿವರಿಸಿದರು.












Click it and Unblock the Notifications