SWR: ದಸರಾ ಪ್ರಯುಕ್ತ ಮೈಸೂರು-ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ

ದಸರಾ ಹಬ್ಬ ಸಮೀಪಿಸುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರು ಮಾತ್ರವಲ್ಲದೇ ರಾಜ್ಯಾದ್ಯಂತ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಶಾಲೆ-ಕಾಲೇಜುಗಳು ರಜೆ ಇದ್ದು, ಜನ ಸಂಚಾರ ಹೆಚ್ಚಾಗಿರುತ್ತದೆ. ಈ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆ ವಲಯ (SWR) ಪ್ರಯಾಣಿಕರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಮೂರು ಜಿಲ್ಲೆಗಳ ಮಧ್ಯ ವಿಶೇಷ ರೈಲುಗಳು ಕಾರ್ಯಾಚರಣೆ ಮಾಡಲಿದೆ.

ನೈಋತ್ಯ ರೈಲ್ವೆ ನೀಡಿರುವ ವೇಳಾಪಟ್ಟಿ ಪ್ರಕಾರ, SMVT ಬೆಂಗಳೂರು-ಬೆಳಗಾವಿ-SMVT ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06275) ಕಾರ್ಯಾಚರಣೆ ಮಾಡಲಿದೆ. ಈ ರೈಲು ಅಕ್ಟೋಬರ್ 04 ರಂದು ಸಂಜೆ 7 ಗಂಟೆಗೆ SMVT ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 08:25 ಕ್ಕೆ ಬೆಳಗಾವಿಗೆ ಆಗಮಿಸಲಿದೆ.

SWR Special Express Trains Between SMVT Bengaluru-Belagavi-Mysuru on These Date Time Schedule

ರೈಲು ಸಂಖ್ಯೆ 06276 ಬೆಳಗಾವಿ-ಬೆಂಗಳೂರು SMVT ವಿಶೇಷ ಎಕ್ಸ್‌ಪ್ರೆಸ್‌ ರೈಲು ದಿನಾಂಕ 05.10.2025 ರಂದು ಸಂಜೆ 5:30 ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ SMVT ಬೆಂಗಳೂರು ನಿಲ್ದಾಣಕ್ಕೆ ಬಂದು ತಲುಪಲಿದೆ. ಈ ಎರಡು ಬದಿಯಲ್ಲಿ ತಲಾ ಒಂದೊಂದು ಟ್ರಿಪ್‌ಗಳ ಸೇವೆ ಪ್ರಯಾಣಿಕರಿಗೆ ಸಿಗಲಿದೆ.

ಮಾರ್ಗದ ಮಧ್ಯದ ನಿಲುಗಡೆಗಳು

ಬೆಂಗಳೂರು SMVT-ಬೆಳಗಾವಿ-ಬೆಂಗಳೂರು SMVT ಹಬ್ಬದ ವಿಶೇಷ ರೈಲು ಮಾರ್ಗ ಮಧ್ಯದಲ್ಲಿ ಚಿಕ್ಕಬಾಣವಾರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, SMM ಹಾವೇರಿ, SSS ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ.

ಈ ವಿಶೇಷ ರೈಲು 1 ಎಸಿ 2-ಟೈರ್, 3 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್ ಗಳೊಂದಿಗೆ ಚಲಿಸುತ್ತದೆ. 3 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್/ಡಿ ಕೋಚ್‌ಗಳು ಒಳಗೊಂಡಂತೆ ಒಟ್ಟು 19 ಬೋಗಿಗಳನ್ನು ಹೊಂದಿರುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ವಿಶೇಷ ಎಕ್ಸ್‌ಪ್ರೆಸ್ ವಿಶೇಷ ಕಾರ್ಯಾಚರಣೆ

ದಸರಾ ಪ್ರಯುಕ್ತ ಬೆಂಗಳೂರು SMVT-ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06271) ಕಾರ್ಯಾಚರಣೆ ನಡೆಸಲಿದೆ. ಒಂದು ಟ್ರಿಪ್ ಸೇವೆ ನೀಡುವ ಈ ರೈಲು ಸೆಪ್ಟಂಬರ್ 30 ರಂದು ಸಂಜೆ 7 ಗಂಟೆಗೆ SMVT ಬೆಂಗಳೂರು ನಿಲ್ದಾಣದಿಂದ ಹೊರಡುತ್ತದೆ. ಮರುದಿನ ಬೆಳಗ್ಗೆ 07:30 ಕ್ಕೆ ಬೆಳಗಾವಿ ತಲುಪುತ್ತದೆ.

ಮರಳಿ ಅದೇ ದಿಕ್ಕಿನಲ್ಲಿ ರೈಲು (06272) ಬೆಳಗ್ಗೆ 5:30 ಕ್ಕೆ ಬೆಳಗಾವಿಯಿಂದ ಹೊರಡುತ್ತದೆ. ಅಕ್ಟೋಬರ್ 01ರಂದು ಹಾಗೂ ಮರುದಿನ ಬೆಳಗ್ಗೆ 07:45 ಕ್ಕೆ ಮೈಸೂರು ತಲುಪುತ್ತದೆ. ಮಾರ್ಗ ಮಧ್ಯೆ ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ. ಎಸ್ ಎಸ್ ಎಸ್ ಹುಬ್ಬಳ್ಳಿ, ಎಸ್ ಎಂಎಂ ಹಾವೇರಿ, ಹರಿಹರ. ದಾವಣಗೆರೆ. ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಯಶವಂತಪುರ, ಕೆಎಸ್‌ಆರ್ ಬೆಂಗಳೂರು ಮತ್ತು ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು SWR ತಿಳಿಸಿದೆ.

ಮೈಸೂರು-ಬೆಳಗಾವಿ-ಬೆಂಗಳೂರು ರೈಲು

ಮೈಸೂರು-ಬೆಳಗಾವಿ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06273) ಮೈಸೂರಿನಿಂದ ಅಕ್ಟೋಬರ್ 02 ರಂದು ರಾತ್ರಿ 11:45 ಕ್ಕೆ ಹೊರಡುತ್ತದೆ. ಅಕ್ಟೋಬರ್ 03 ರಂದು ಮಧ್ಯಾಹ್ನ 12:30 ಕ್ಕೆ ಬೆಳಗಾವಿಯನ್ನು ತಲುಪುತ್ತದೆ.

ಮರಳಿ ಇದೇ ರೈಲು (06274) ಅಕ್ಟೋಬರ್ 03ರಂದು ಬೆಳಗಾವಿಯಿಂದ ಸಂಜೆ 5:30 ಕ್ಕೆ ಹೊರಟು ಮರುದಿನ ಅಕ್ಟೋಬರ್ 01ರಂದು ಬೆಳಗ್ಗೆ 05ಕ್ಕೆ ಬೆಂಗಳೂರಿಗೆ ಬಂದು ತನ್ನ ಸೇವೆ ಕೊನೆಗೊಳಿಸುತ್ತದೆ. ಎರಡು ಬದಿ ಸಂಚಾರ ವೇಳೆ ಮಾರ್ಗಮಧ್ಯೆ ಮಂಡ್ಯ, ಕೆಎಸ್‌ಆರ್ ಬೆಂಗಳೂರು, ಯಶವಂತಪುರದಲ್ಲಿ ನಿಲ್ಲುತ್ತದೆ. ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+