Holiday Special Trains: ಯಶವಂತಪುರದಿಂದ ಕರಾವಳಿ ಭಾಗಕ್ಕೆ 02 ವಿಶೇಷ ಎಕ್ಸ್‌ಪ್ರೆಸ್ ರೈಲು, ವೇಳಾಪಟ್ಟಿ
Christmas Holiday Special Trains: ಮುಂಬರಲಿರುವ ಕ್ರಿಸ್‌ಮಸ್ (ಡಿಸೆಂಬರ್ 25) ಹಾಗೂ ಹೊಸ ವರ್ಷದ (ಜನವರಿ 01) ಸಂಭ್ರಮಾಚರಣೆ ಪ್ರಯುಕ್ತ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಜೋಡಿ ವಿಶೇಷ ರೈಲುಗಳ ಸೇವೆ ಘೋಷಣೆ ಆಗಿದೆ. ಪ್ರಯಾಣಿಕರ ದಟ್ಟಣೆ ಅನುಗುಣವಾಗಿ ರೈಲುಗಳ ಕಾರ್ಯಾಚರಣೆಗೆ ನೈಋತ್ಯ ರೈಲ್ವೆ ನಿರ್ಧರಿಸಿದೆ. ಈ ರೈಲಿನ ಮಾರ್ಗ, ನಿಲುಗಡೆ, ಸಮಯ, ವೇಳಾಪಟ್ಟಿ ವಿವರ ಇಲ್ಲಿದೆ.
ವರ್ಷಾಂತ್ಯದ ಸಂಭ್ರಮಾಚರಣೆ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ವಿಭಾಗವು (South Western Railway) ಯಶವಂತಪುರ -ಕಾರವಾರ ಹಾಗೂ ಕಾರವಾರ -ಯಶವಂತಪುರ ಮಾರ್ಗಗಳಲ್ಲಿ ಎರಡು ಜೋಡಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಚಾರ ನಡೆಸಲು ನಿರ್ಧರಿಸಿದೆ. ಹಬ್ಬದ ರಜಾ ದಿನಗಳಲ್ಲಿ ಕರಾವಳಿ ಮತ್ತು ಬೆಂಗಳೂರಿನ ನಡುವಿನ ಪ್ರಯಾಣ ಈ ಅವಧಿಯಲ್ಲಿ ಸುಧಾರಿಸಲಿದೆ. ಸಾವಿರಾರು ಪ್ರಯಾಣಿಕರಿಗೆ ಈ ವಿಶೇಷ ರೈಲುಗಳು ಸಾರಿಗೆ ಅನುಕೂಲ ಒದಗಿಸಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

SWR ನೀಡಿರುವ ವೇಳಾಪಟ್ಟಿ ಪ್ರಕಾರ, ಯಶವಂತಪುರ -ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು (06267) ಡಿಸೆಂಬರ್ 24 ಮತ್ತು 27ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಡುತ್ತದೆ. ಮಾರನೆ ದಿನ ಬೆಳಗ್ಗೆ 6.10ಗಂಟೆಗೆ ಕಾರವಾರ ನಿಲ್ದಾಣ ತಲುಪಲಿದೆ.
ಕಾರವಾರ -ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (06268) ಡಿಸೆಂಬರ್ 25 ಮತ್ತು 28ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರದಿಂದ ಹೊರಡಲಿದೆ. ವಿವಿಧ ನಿಲ್ದಾಣಗಳ ಮೂಲಕ ಸಾರಿಗೆ ಮರುದಿನ ಬೆಳಗ್ಗೆ 4.30ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಬರುತ್ತದೆ.
ನಿಲುಗಡೆ ನಿಲ್ದಾಣಗಳು: ಹಾಲಿಡೇ ಪ್ಲಾನ್‌ಗೆ ಅನುಕೂಲ
ಈ ರೈಲುಗಳು ಎರಡು ಬದಿ ಸಂಚಾರ ವೇಳೆ ಮಾರ್ಗ ಮಧ್ಯದಲ್ಲಿ ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಾಪುತ್ತೂರು, ಬಂಟವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ ಹಾಗೂ ಅಂಕೋಲ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ. ವಳಿ ಪ್ರದೇಶಕ್ಕೆ ರಜೆ ವೇಳೆ ಭೇಟಿ ನೀಡಲು ಯೋಜಿಸಿರುವ ಬೆಂಗಳೂರು ಸೇರಿ ಮಾರ್ಗದ ಅಕ್ಕಪಕ್ಕದ ಜಿಲ್ಲೆಗಳ ಪ್ರಯಾಣಿಕರಿಗೆ ಬಹುದೊಡ್ಡ ಅನುಕೂಲ ಒದಗಿಸಲಿದೆ.
ಜನರಲ್, ನಾನ್ ಎಸಿ ಸ್ಲೀಪರ್, ಟು ಟೈರ್ ಎಸಿ, ತ್ರಿ ಟೈರ್ ಎಸಿ ಕೋಚ್ ಸೇರಿದಂತೆ ಒಟ್ಟು 21 ಬೋಗಿಗಳನ್ನು ಈ ವಿಶೇಷ ಜೋಡಿ ಎಕ್ಸ್‌ಪ್ರೆಸ್ ರೈಲುಗಳು ಹೊಂದಿರುತ್ತವೆ. ಪ್ರಯಾಣಿಕರು ತಮ್ಮ ಟಿಕೆಟ್ ಗಳನ್ನು ಮುಂಚಿತವಾಗಿ ಕಾಯ್ದಿರಿಸಿಕೊಳ್ಳಬಹುದು. ಅದಕ್ಕಾಗಿ ನೀವು NTES ಅಪ್ಲಿಕೇಶನ್ ಬಳಸಬೇಕು. www.swr.indianrailways.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ಶನಿವಾರ ಕೋರಿದ್ದಾರೆ.












Click it and Unblock the Notifications