SWR: ಪಂಢರಾಪುರಕ್ಕೆ ತೆರಳುವವರಿಗೆ ಶುಭ ಸುದ್ದಿ, ಕರ್ನಾಟಕದಿಂದ ವಿಶೇಷ ರೈಲು: ಎಲ್ಲಿಂದ? ವೇಳಾಪಟ್ಟಿ ವಿವರ
ಬೆಂಗಳೂರು, ಜೂನ್ 28: ಕರ್ನಾಟಕದಿಂದ ಮಹಾರಾಷ್ಟ್ರದ ಪಂಡರಾಪುರಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲೂ ಎದುರಾದ ಆಷಾಢ ಏಕಾದಶಿ ವೇಳೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಯೇ ಅಲ್ಲಿಗೆ ಹೋಗುತ್ತಾರೆ. ಇವರೆಗೆಂದೇ ಭಾರತೀ ರೈಲ್ವೆ ಇಲಾಖೆಯು ರಾಜ್ಯದಿಂದ ಪಂಢರಾಪುರಕ್ಕೆ ವಿಶೇಷ ರೈಲು ಕಾರ್ಯಾಚರಣೆ ಮಾಡುತ್ತಿದೆ. ಎಲ್ಲಿಂದ ತೆರಳುತ್ತದೆ? ಸಮಯ, ದಿನಾಂಕ ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ಆಷಾಢ ಏಕಾದಶಿ ಪ್ರಯುಕ್ತ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮಿ ಮಠದಿಂದ-ಪಂಢರಾಪುರಕ್ಕೆ ವಿಶೇಷ ರೈಲು ಕಾರ್ಯಾಚರಣೆ ಮಾಡಲಾಗುತ್ತದೆ. ಆಷಾಢ ಹಿನ್ನೆಲೆಯಲ್ಲಿ ಭಕ್ತರ ದಟ್ಟಣೆಯನ್ನು ನಿಭಾಯಿಸಲು, ರೈಲ್ವೆ ಇಲಾಖೆಯ ನೈಋತ್ಯ ರೈಲ್ವೆ ವಲಯವು ಶ್ರೀ ಸಿದ್ಧಾರೂಢ ಸ್ವಾಮೀಜಿ, ಹುಬ್ಬಳ್ಳಿ ಮತ್ತು ಪಂಢರಪುರ ನಡುವೆ ವಿಶೇಷ ಕಾಯ್ದಿರಿಸದ ರೈಲು ಸೇವೆಗಳನ್ನು ಭಕ್ತರಿಗಾಗಿ ಒದಗಿಸುತ್ತಿದೆ. ಪಂಢರಾಪುರದ ವಾರ್ಷಿಕ ಆಚರಣೆಗಳಲ್ಲಿ ಭಾಗವಹಿಸುವ ಯಾತ್ರಾರ್ಥಿಗಳಿಗೆ ಸುಗಮ ಪ್ರಯಾಣ ಸೇವೆ ಲಭ್ಯವಾಗಲಿದೆ.

ಹುಬ್ಬಳ್ಳಿ-ಪಂಢರಾಪುರ ವಿಶೇಷ್ ರೈಲುಗಳು ಸಂಖ್ಯೆ (07313/07314) ಮುಂದಿನ ಜುಲೈ 1ರಂದು ಮಂಗಳವಾರದಿಂದ ಜುಲೈ 8, 2025 ರವರೆಗೆ (04.07.2025 ಹೊರತುಪಡಿಸಿ) ಸಂಚರಿಸಲಿವೆ. ಪ್ರತಿ ದಿಕ್ಕಿನಲ್ಲಿ ಏಳು ಟ್ರಿಪ್‌ಗಳ (ಒಟ್ಟು 14) ಸೇವೆ ಲಭ್ಯವಾಗಲಿದೆ.
* ಎಸ್‌ಎಸ್ ಹುಬ್ಬಳ್ಳಿಯಿಂದ ಪಂಡರಾಪುರ-ಎಸ್‌ಎಸ್ ಹುಬ್ಬಳ್ಳಿ ರೈಲು (ಸಂಖ್ಯೆ 07314) ಕಾಯ್ದಿರಿಸದ ಹುಬ್ಬಳ್ಳಿಯಿಂದ ಬೆಳಗ್ಗೆ 05:10 ಗಂಟೆಗೆ ಹೊರಟು ಅದೇ ದಿನ ಸಂಜೆ 04:00 ಗಂಟೆಗೆ ಪಂಢರಾಪುರ ತಲುಪಲಿದೆ. ಇದು ಧಾರವಾಡ, ಅಳ್ಳಾವರ, ಲೋಂಡಾ, ಖಾನಾಪುರ, ದೇಸೂರು, ಬೆಳಗಾವಿ, ಪಚ್ಚಾಪುರ, ಗೋಕಾಕ್ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಬಾಗ್, ಚಿಂಚಳಿ, ಕುಡಚಿ, ಉಗಾರ ಖುರ್ದ್, ಶೇಡಬಾಳ, ವಿಜಯನಗರ, ಮಿರಜ್, ಅರಗ, ಧಲಗಾಂವ, ಜತ್ ರೋಡ್, ವಾಸುದ, ಮತ್ತು ಸಂಗೋಲಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
* ಸಂಖ್ಯೆಯ 07314 ಎಸ್‌ಎಸ್ ಹುಬ್ಬಳ್ಳಿಯಿಂದ ಪಂಡರಾಪುರ-ಎಸ್‌ಎಸ್ ಹುಬ್ಬಳ್ಳಿ ಕಾಯ್ದಿರಿಸದ ವೀಶೇಷ ರೈಲು ಜುಲೈ 1 ರಿಂದ ಜುಲೈ 08, 2025 ರವರೆಗೆ (ಜುಲೈ 04 ಸಂಚಾರ ಇಲ್ಲ) ಪಂಢರಪುರದಿಂದ ಸಂಜೆ 06 ಗಂಟೆಗೆ ಹೊರಟು ಮರುದಿನ ಬೆಳಗ್ಗೆ, 04:00 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಈ ರೈಲು ಮೇಲೆ ತಿಳಿಸಿದ ಎಲ್ಲ ನಿಲ್ದಾಣಗಳಲ್ಲು ನಿಲುಗಡೆ ನೀಡುತ್ತದೆ.
ಈ ಹುಬ್ಬಳ್ಳಿ-ಪಂಢಾಪುರ ವಿಶೇಷ ರೈಲು 10 ಬೋಗಿಗಳನ್ನು ಹೊಂದಿದೆ. ಅದರಲ್ಲಿ 8 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ದ್ವಿತೀಯ ದರ್ಜೆ ಲಗೇಜ್ ಕಮ್-ಬ್ರೇಕ್ ವ್ಯಾನ್ಗಳು/ಅಂಗವಿಕಲ ಬೋಗಿಗಳು ಇರಲಿವೆ. ಈ ವಿಶೇಷ ಸೇವೆಗಳು ಪ್ರಯಾಣಿಕರಿಗೆ, ವಿಶೇಷವಾಗಿ ಆಷಾಢ ಏಕಾದಶಿ ಉತ್ಸವಗಳಿಗಾಗಿ ಪಂಢರಪುರಕ್ಕೆ ತೆರಳುವ ವಾರಕರಿಗಳು ಮತ್ತು ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಪ್ರಯಾಣಿಕರ ದಟ್ಟಣೆಗೆ ಕಡಿವಾಣ ಹಾಕಲಿದೆ.












Click it and Unblock the Notifications