Railway Good News: ನವೆಂಬರ್‌ನಲ್ಲಿ ಬೆಂಗಳೂರಿನಿಂದ ಇಲ್ಲಿಗೆ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ
ಬೆಂಗಳೂರು, ನವೆಂಬರ್ 10: ವಿವಿಧ ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ಸೌಕರ್ಯಕ್ಕಾಗಿ ನೈಋತ್ಯ ರೈಲ್ವೆಯು (SWR) ಎರಡು ತಾತ್ಕಾಲಿಕ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಈ ರೈಲುಗಳು ಮೂಜಫರ್‌ಪುರ ಮತ್ತು ಬೆಂಗಳೂರಿನ ಎನ್‌ಎಸ್‌ಎಂಟಿ ನಿಲ್ದಾಣಗಳ ನಡುವೆ ಸಂಚರಿಸಲಿವೆ. ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲಿದ್ದು, ಈ ಭಾಗದ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಒದಗಿಸಲಿದೆ. ಯಾವಾಗಿನಿಂದ ಈ ರೈಲು ಸೇವೆ ಲಭ್ಯವಾಗಲಿದೆ, ವೇಳಾಪಟ್ಟಿ ವಿವರ ಇಲ್ಲಿದೆ.
ಮೂಜಫರ್‌ಪುರ ಜಂಕ್ಷನ್‌ನಿಂದ ಯಶವಂತಪುರ ಜಂಕ್ಷನ್‌ಗೆ ಈ ಮೊದಲ ವಿಶೇಷ ರೈಲು (05545) ನವೆಂಬರ್ 11 ಮತ್ತು 12 ರಂದು ಪ್ರಯಾಣ ಆರಂಭವಾಗಲಿದೆ. ಈ ರೈಲು ರಾತ್ರಿ 9:15ಗಂಟೆಗೆ ಮೂಜಫರ್‌ಪುರ ನಿಂದ ಹೊರಟು, ಮರುದಿನ ರಾತ್ರಿ 11:50 ಗಂಟೆಗೆ ಯಶವಂತಪುರಕ್ಕೆ ಬಂದು ಸೇರುತ್ತದೆ.

ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ಮೂಜಫರ್‌ಪುರ ಎರಡನೇ ವಿಶೇಷ ರೈಲು (ಸಂಖ್ಯೆ 05546) ಬೆಂಗಳೂರಿನಿಂದ ಇದೇ ನವೆಂಬರ್ 14 ಮತ್ತು 15 ರಂದು ಕಾರ್ಯಾಚರಣೆ ಮಾಡಲಿದೆ. ಈ ರೈಲು ಮಧ್ಯಾಹ್ನ 3:50ಗಂಟೆರಗೆ ರಾಜಧಾನಿಯಿಂದ ಹೊರಟು ಮರುದಿನ ಸಂಜೆ 7 ಗಂಟೆಗೆ ಗಮ್ಯಸ್ಥಾನ ತಲುಪುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವಿಶೇಷ ರೈಲುಗಳು ಎಸಿ, ನಾನ್ ಎಸಿ ಸ್ಲೀಪರ್, ಜನಲ್, ಇತರ ಬೋಗಿಗಳು ಸೇರಿದಂತೆ 22 ಕೋಚ್‌ಗಳ ಸಂಯೋಜನೆ ಒಳಗೊಂಡಿದೆ. ಹಬ್ಬದ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ರೈಲ್ವೆ ಇಲಾಖೆ ರೈಲುಗಳ ಹೆಚ್ಚುವರಿ ಟ್ರಿಪ್ ಸೇವೆಗೆ ನಿರ್ಧರಿಸಿದೆ.
ಪ್ರಯಾಣಿಕರು ರೈಲುಗಳ ನಿಲ್ದಾಣ ಮತ್ತು ಸಮಯದ ವಿವರಗಳನ್ನು ಅಧಿಕೃತ ವೆಬ್‌ಸೈಟ್ http://www.enquiry.indianrail.gov.in ಅಥವಾ NTES ಆಪ್‌ನಲ್ಲಿ ಪರಿಶೀಲಿಸಬಹುದಾಗಿದೆ. ಪ್ರಯಾಣಿಕರು 139 ಸಂಖ್ಯೆಗೆ ಕರೆಮಾಡಿ ಇತರ ಮಾಹಿತಿ ಪರಿಶೀಲಿಸಬಹುದು.
ಎರಡು ಟ್ರಿಪ್ ವಿಶೇಷ ರೈಲುಗಳ ಹೆಚ್ಚುವರಿ ಮಾಹಿತಿ, ಪಟ್ಟಿ
* ಮೂಜಫರ್‌ಪುರ ಜಂಕ್ಷನ್ - ಯಶವಂತಪುರ ಜಂಕ್ಷನ್
* ಎಸ್‌ಎಂವಿಟಿ ಬೆಂಗಳೂರು - ಮೂಜಫರ್‌ಪುರ ಜಂಕ್ಷನ್
* ಮೂಜಫರ್‌ಪುರ ಜಂ. - ಯಶವಂತಪುರ ಜಂ. ರೈಲು (05545) ನವೆಂಬರ್ 11 ಮತ್ತು 12 ರಂದು ಸೇವೆ ನೀಡುತ್ತದೆ.
* ಹೊರಡುವ ಸಮಯ: ರಾತ್ರಿ 21:15 (ಬುಧವಾರ ಮತ್ತು ಗುರುವಾರ)
* ತಲುಪುವ ಸಮಯ: 23:50 (ಗುರುವಾರ ಮತ್ತು ಶನಿವಾರ)
* ಎಸ್‌ಎಂವಿಟಿ ಬೆಂಗಳೂರು - ಮೂಜಫರ್‌ಪುರ ಜಂ. ರೈಲು (05546) ನವೆಂಬರ್ 14 ಮತ್ತು ನವೆಂಬರ್ 15ರಂದು ಕಾರ್ಯಾಚರಣೆ ಮಾಡಲಿದೆ.
* ರೈಲು ಹೊರಡುವ ಸಮಯ: ಮಧ್ಯಾಹ್ನ 15:50 (ಶುಕ್ರವಾರ ಮತ್ತು ಶನಿವಾರ)
* ರೈಲು ತಲುಪುವ ಸಮಯ: 19:00 (ಭಾನುವಾರ ಮತ್ತು ಸೋಮವಾರ).












Click it and Unblock the Notifications