Vande Bharat Express: ಕರ್ನಾಟಕ ವಂದೇ ಭಾರತ್ ರೈಲುಗಳು ಮಾರ್ಗ ಬದಲಾವಣೆ, ವಿವರ
ಬೆಂಗಳೂರು, ಜೂನ್ 26: ರೈಲ್ವೆ ಇಲಾಖೆ ವತಿಯಿಂದ ಕರ್ನಾಟಕದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ನಾಗಸಮುದ್ರಂ ರೈಲ್ವೆ ನಿಲ್ದಾಣದಲ್ಲಿ ಹಾಲಿ ಇರುವ ಲೂಪ್ ಲೈನ್ (ರೋಡ್-3) ಅನ್ನು ಮುಖ್ಯ ಮಾರ್ಗದಷ್ಟು ಗುಣಮಟ್ಟ ಲೈನ್ ಆಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. OHE ಪೋರ್ಟಲ್‌ಗಳನ್ನು ಸ್ಥಳಾಂತರಿಸುವ ಕಾಮಗಾರಿ ಸಹ ನಡೆಯುತ್ತಿದೆ.
ಈ ಕಾರಣದಿಂದಾಗಿ ಜುಲೈ 2, 2025 ರಿಂದ ಜುಲೈ 28, 2025 ರವರೆಗೆ 27 ದಿನಗಳ ಕಾಲ ಲೂಪ್ ಲೈನ್ ಅನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಕಾಮಗಾರಿಯ ಹಿನ್ನೆಲೆಯಲ್ಲಿ, ಈ ಕಾರಣದಿಂದಾಗಿ ಕರ್ನಾಟಕದ ಮಾರ್ಗವಾಗಿ ವಿವಿಧೆಡೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಯಾವ ಮಾರ್ಗ ರೈಲುಗಳು ಬದಲಾಗಿವೆ, ಅವುಗಳ ಸಂಖ್ಯೆ, ನಿಲ್ದಾಣ ನಿಲುಗಡೆ ಇದಿಯಾ? ಇಲ್ಲವೇ ಎಂಬ ಮಾಹಿತಿ ಇಲ್ಲಿದೆ.

ವಂದೇ ಭಾರತ್ ರೈಲುಗಳ ಮಾರ್ಗ ಬದಲಾವಣೆ ಪಟ್ಟಿ
* ಕಲಬುರಗಿ - ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22231) ಶುಕ್ರವಾರ ಹೊರತುಪಡಿಸಿ ಅನಂತಪುರ, ಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ಕಾಚೇಗುಡ ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 20703) ಬುಧವಾರ ಹೊರತುಪಡಿಸಿಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಶವಂತಪುರ ಮಾರ್ಗವಾಗಿ ಕಾರ್ಯಾಚರಣೆ ಮಾಡಲಿದೆ.

* ಗುರುವಾರ ಹೊರತುಪಡಿಸಿ ಸಂಚರಿಸುವ ಎಸ್‌ಎಂವಿಟಿ ಬೆಂಗಳೂರು - ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22232) ) ಯಲಹಂಕ, ಪೆನುಕೊಂಡ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಧರ್ಮಾವರಂ ಮತ್ತು ಅನಂತಪುರ ಮಾರ್ಗವಾಗಿ ಸಂಚರಿಸಲಿದ್ದು, ಪ್ರಯಾಣಿಕರು ಗಮನಿಸಿ ಪ್ರಯಾಣ ಮಾಡಬೇಕು.
ಇನ್ನೂ ಈ ರೈಲುಗಳು ಮಾರ್ಗ ಬದಲಾವಣೆ ಅವಧಿಯಲ್ಲಿ, ಮೇಲೆ ತಿಳಿಸಿದ ಯಾವುದೇ ರೈಲುಗಳ ನಿಲುಗಡೆಗಳನ್ನು ಬಿಟ್ಟು ಬಿಡುವುದಿಲ್ಲ. ನಿಗಿದತ ಎಲ್ಲ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 12 ವಂದೇ ಭಾರತ್ ರೈಲು ಸಂಚಾರ, ಯಾವುವು?
* KSR ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20661)
* ಎಸ್‌ಎಸ್‌ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20669)
* ಯಶವಂತಪುರ - ಕಾಚೆಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20704)
* ಬೆಂಗಳೂರು ಕಂ.-ಕೊಯಮತ್ತೂರು ವಂದೇ ಭಾರತ್ ರೈಲು (20641)
* SMVT ಬೆಂಗಳೂರು-MGR ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ (20663)
* ಬೆಂಗಳೂರು ಕಂಟೋನ್ಮೆಂಟ್-ಮಧುರೈ ವಂದೇ ಭಾರತ್ ಎಕ್ಸ್‌ಪ್ರೆಸ್ (20672)
* ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ರೈಲು (20608)
* ಮಂಗಳೂರು ಸೆಂಟ್ರಲ್-ಮಡ್ಗಾಂವ್ ವಂದೇ ಭಾರತ್ ರೈಲು (20646)
* ಕಾಸರಗೋಡು - ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20633)
* ಕಲಬುರಗಿ - SMVT ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22231)
* SMVT ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು (22232)
* ಬೆಳಗಾವಿ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸದ್ಯ ಹೊಸದಾಗಿ ಘೋಷಣೆ ಆಗಿದೆ. ಇದರ ವೇಳಾಪಟ್ಟಿ ಘೋಷಣೆ ಆಗಬೇಕಿದೆ.












Click it and Unblock the Notifications