ಸಿಎಂ ಬದಲಾವಣೆಯ ಬಗ್ಗೆ ಸ್ವಾಮೀಜಿ ಹೀಗೆ ಹೇಳಲು ಇವರೇ ಕಾರಣ

ಸದ್ಯ ರಾಜ್ಯದಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿರುವ ವಿಷಯ ಸಿಎಂ ಬದಲಾವಣೆ. ಈ ವಿಷಯದ ಬಗ್ಗೆ ಇಷ್ಟು ದಿನ ಗುಸು ಗುಸು ಇತ್ತು. ಆದರೆ ಈಗ ಎಲ್ಲರೂ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಬರೀ ಶಾಸಕರು, ಸಚಿವರು, ರಾಜಕೀಯ ಮುಖಂಡರು ಅಷ್ಟೇ ಅಲ್ಲ ಈಗ ಈ ಅಖಾಡಕ್ಕೆ ಮಠಾಧೀಶರು ಸಹ ಎಂಟ್ರಿ ನೀಡಿದ್ದಾರೆ.

ಲೋಕಸಭಾ ಚುನಾವಣೆಗಳು ಮುಗಿದ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಅನ್ನುವ ಗುಸುಗುಸು ಮಾತ್ರ ಇತ್ತು. ಈಗ ಈ ವಿಚಾರ ವ್ಯಾಪಕವಾಗಿ ಹರಡಿಕೊಂಡಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಕೆಂಪೇಗೌಡ ಜಯಂತಿಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಚಂದ್ರಶೇಖರನಾಥ್ ಸ್ವಾಮೀಜಿ ನೀಡಿದ್ದ ಆ ಒಂದು ಹೇಳಿಕೆ ಸಂಚಲ ಮೂಡಿಸಿತ್ತು. ಇದೇ ವೇದಿಕೆಯಲ್ಲಿ ಸ್ವಾಮೀಜಿಗಳು ಡಿಕೆ ಶಿವಕುಮಾರ್‌ ಅವರನ್ನು ಸಿಎಂ ಮಾಡಿ ಎಂದು ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದಾರೆ.

Swamijis on Karnataka CM DyCM Posts Minister Sees BJP s Hand

ಈ ಹೇಳಿಕೆ ರಾಜಕೀಯ ವಲಯದಲ್ಲಿ ಕಾಡಗಿಚ್ಚಿನಿಂತೆ ಹರಡಿತು. ಅಸಲಿಗೆ ಈ ವಿಷಯವನ್ನು ಬಳಸಿಕೊಂಡು ರಾಜಕೀಯ ನಡೆಸಿದ್ದಾರೆಂದು ಹಲವರು ಆರೋಪಿಸಿದ್ದರು. ಈಗ ಈ ಸಾಲಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಎಂಟ್ರಿ ನೀಡಿದ್ದಾರೆ. ಸ್ವಾಮೀಜಿ ಹೀಗೆ ಹೇಳಲು ಕಾರಣ ಏನು ಎಂಬುದನ್ನು ಅವರು ಬಹಿರಂಗ ಪಡಿಸಿದ್ದಾರೆ.

ಸ್ವಾಮೀಜಿ ಹೀಗೆ ಹೇಳಲು ಇವರೇ ಕಾರಣ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ ಇದರಲ್ಲಿ ಯಾರದ್ದೋ ಕೈವಾಡ ಇರಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್‌ ತನ್ನ ಹಿಡಿತವನ್ನು ಬಲ ಪಡಿಸುತ್ತಿದೆ. ಹೀಗಾಗಿ ಈ ಚಿತ್ರಣವನ್ನು ನೋಡಿದರೆ, ಈ ಹೇಳಿಕೆಯ ಹಿಂದೆ ವಿರೋಧ ಪಕ್ಷದವರ ಕೈವಾಡ ಇದೆ ಎಂದು ಹೇಳಿದ್ದಾರೆ.

Swamijis on Karnataka CM DyCM Posts Minister Sees BJP s Hand

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್‌ ಚೆನ್ನಾಗಿ ಇದ್ದಾರೆ. ಇವರಿಬ್ಬರು ಅನುಭವಿ ರಾಜಕರಾಣಿಗಳು. ಹೈಕಮಾಂಡ್‌ ಇವರೊಂದಿಗೆ ಚರ್ಚೆ ನಡೆಸುತ್ತದೆ. ಅಷ್ಟಾಗ್ಯೂ ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುವ ವಿಷಯವಾಗಿದೆ ಎಂದಿದ್ದಾರೆ.

ಸಿಎಂ ಬದಲಾವಣೆಯ ಬಗ್ಗೆ ಸ್ವಾಮೀಜಿ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿದ್ದಾರೆ ಅಷ್ಟೇ. ಆದರೆ ಅದನ್ನು ಹೇಳುವ ವೇದಿಕೆ ಅದು ಆಗಿರಲಿಲ್ಲ. ಲೋಕಸಭಾ ಚುನಾವಣೆಗಳಿಗೂ ಮುನ್ನ ಡಿಕೆಶಿ ಹಾಗೂ ಸಿದ್ದರಾಮಯ್ಯ ವೈಮನಸ್ಸು ಇದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಹಾಗೇನು ಇಲ್ಲ. ಇಬ್ಬರೂ ಚೆನ್ನಾಗಿಯೇ ಇದ್ದಾರೆ. ಇನ್ನು ಬೆಂಬಲಿಗರು ತಮ್ಮ ತಮ್ಮ ನಾಯಕರ ಬಗ್ಗೆ ನೀಡುತ್ತಿರುವ ಹೇಳಿಕೆಗೆ ಸಂಬಂಧಿಸಿದಂತೆ, ಸಿಎಂ, ಡಿಕೆಶಿ ಅವರೇ ಇದನ್ನು ಬಗೆ ಹರಿಸಬೇಕು ಎಂದಿದ್ದಾರೆ.

ಚಂದ್ರಶೇಖರನಾಥ್ ಸ್ವಾಮೀಜಿ ಹೇಳಿಕೆ ಬೆನ್ನಲ್ಲೆ ಲಿಂಗಾಯತರು ಸಿಎಂ ಆಗಬೇಕು ಎಂದು ಶಿವಾಚಾರ್ಯ ಶ್ರೀಗಳ ಹೇಳಿಕೆ ನೀಡಿದ್ದರು. ಈ ವಿಚಾರವಾಗಿಯೂ ಕೃಷಿ ಸಚಿವರು ಮಾತನಾಡಿದ್ದು, ಈ ವಿಚಾರವನ್ನು ಸ್ವಾಮೀಜಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹೇಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಮುಂದೆ ಅಥವಾ ಸಿಎಂ ಹಾಗೂ ಡಿಸಿಎಂಗಳ ಮುಂದೆ ಸ್ವಾಮೀಜಿಗಳು ತಮ್ಮ ಪ್ರಸ್ತಾವನೆ ಸಲ್ಲಿಸಬಹುದು ಎಂದಿದ್ದಾರೆ.

ಇನ್ನು ಇದೇ ವಿಚಾರವಾಗಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಹ ಮಾತನಾಡಿದ್ದಾರೆ. ತಮ್ಮ ಸಮುದಾಯದ ನಾಯಕರನ್ನು ಸಿಎಂ ಮಾಡಲು ಸ್ವಾಮೀಜಿ ಒತ್ತಾಯಿಸುವುದು ಹೊಸಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅನಿಸಿಕೆ ವ್ಯಕ್ತ ಪಡಿಸುವ ಹಕ್ಕಿದೆ. ಸಿಎಂ ಸ್ಥಾನವನ್ನು ಪಕ್ಷದ ಹೈಕಮಾಂಡ್‌ ಹಾಗೂ ಶಾಸಕರು ನಿರ್ಧರಿಸಬೇಕು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+