ಸುಷ್ಮಾ ಸ್ವರಾಜ್ ವಿಧಿವಶ: ರಾಜ್ಯದ ನಾಯಕರ ಕಣ್ಣೀರು

ಬೆಂಗಳೂರು, ಆಗಸ್ಟ್ 07: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಪಕ್ಷಾತೀತರಾಗಿ ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ರಾಜಕೀಯ ಮುಖಂಡರು ಸಹ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು

ಕರ್ನಾಟಕ ಬಿಜೆಪಿಯ ಹಲವು ನಾಯಕರು ಸುಷ್ಮಾ ಸ್ವರಾಜ್ ಅವರೊಂದಿಗೆ ಆತ್ಮೀಯ ಬಾಂದವ್ಯವನ್ನು ಹೊಂದಿದ್ದರು. ಕರ್ನಾಟಕದೊಂದಿಗೆ ವಿಶೇಷ ಅನುಬಂಧ ಹೊಂದಿದ್ದ ಸುಷ್ಮಾ ಸ್ವರಾಜ್ ಅವರು ವರಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯಕ್ಕೆ ಬರುವ ಪರಿಪಾಠ ಇರಿಸಿಕೊಂಡಿದ್ದರು.

ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಆರ್.ಅಶೋಕ್, ಶ್ರೀರಾಮುಲು, ಜನಾರ್ದನ ರೆಡ್ಡಿ, ಶೋಭಾ ಕರಂದ್ಲಾಜೆ ಇನ್ನೂ ಹಲವರು ಟ್ವಿಟ್ಟರ್ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾತೃ ಹೃದಯಿ ರಾಜಕಾರಣಿ ಸುಷ್ಮಾ: ದೇವೇಗೌಡ

ಸುಷ್ಮಾ ಸ್ವರಾಜ್ ಅವರು ಮಾತೃ ಹೃದಯಿ ರಾಜಕಾರಣಿ ಆಗಿದ್ದರು. ಅವರ ಅಗಲಿಕೆ ತೀವ್ರ ದುಖಃ ತಂದಿದೆ. ಮುಂಬರುವ ರಾಜಕಾರಣಿಗಳಿಗೆ ಅವರು ಮಾದರಿಯೊಂದನ್ನು ಬಿಟ್ಟು ಹೋಗಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಹೇಳಿದ್ದಾರೆ.

Array

ಸುಷ್ಮಾ ಸ್ವರಾಜ್ ಅವರನ್ನು ದೇಶ ನೆನೆಯುತ್ತದೆ: ಬಿಎಸ್‌ವೈ

ಸಿಎಂ ಯಡಿಯೂರಪ್ಪ ಅವರು ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಸುಷ್ಮಾ ಸ್ವರಾಜ್ ಅವರ ಸೇವೆಯನ್ನು ದೇಶ ನೆನಪಿಟ್ಟುಕೊಳ್ಳುತ್ತದೆ. ವಿದೇಶಾಂಗ ಮಂತ್ರಿಯಾಗಿ ಅವರು ಮಾಡಿದ ಕಾರ್ಯ ಎಂದಿಗೂ ನೆನಪಿನಲ್ಲಿ ಉಳಿಯುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

'ಸ್ವಸಾಮಾರ್ಥ್ಯದಿಂದ ರಾಜಕೀಯವಾಗಿ ಎತ್ತರೆತ್ತರಕ್ಕೆ ಬೆಳೆದವರು'

ಕೇಂದ್ರದ ಮಾಜಿ ಸಚಿವೆ, ಬಿಜೆಪಿಯ ಹಿರಿಯ ನಾಯಕಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ನಿಧನದ ಸುದ್ದಿ ತಿಳಿದು ದು:ಖವಾಯಿತು. ಸ್ವಸಾಮಾರ್ಥ್ಯದಿಂದ ರಾಜಕೀಯವಾಗಿ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾಗಲೇ ಅವರ ಬದುಕಿನ ಪಯಣ ಹಠಾತ್ತನೆ ಕೊನೆಗೊಂಡಿದ್ದು ವಿಷಾದನೀಯ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Array

ಸುಷ್ಮಾ ಸ್ವರಾಜ್ ಅಗಲಿಕೆ ದುಖಃಕ್ಕೆ ನೂಕಿದೆ: ಶ್ರೀರಾಮುಲು

ಸುಷ್ಮಾ ಸ್ವರಾಜ್ ಅವರದ್ದು ಎತ್ತರದ ವ್ಯಕ್ತಿತ್ವ. ಇಂದು ಭಾರತವು ದೊಡ್ಡ ನಾಯಕಿಯೊಬ್ಬರನ್ನು ಕಳೆದುಕೊಂಡಿದೆ. ಬಿಜೆಪಿಗೆ ಸಹ ಇದು ಅತ್ಯಂತ ದೊಡ್ಡ ನಷ್ಟ ಎಂದಿರುವ ಶ್ರೀರಾಮುಲು. ಸುಷ್ಮಾ ಸ್ವರಾಜ್ ಅವರೊಂದಿಗೆ ಹಳೆಯ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ.

ಎರಡು ತಿಂಗಳಲ್ಲೇ ಕನ್ನಡ ಕಲಿತಿದ್ದ ಸುಷ್ಮಾ ಸ್ವರಾಜ್: ಶೋಭಾ ಕರಂದ್ಲಾಜೆ

ಸುಷ್ಮಾ ಸ್ವರಾಜ್ ಅವರಿಗೆ 1999ರ ಬಳ್ಳಾರಿ ಲೋಕಸಭೆ ಚುನಾವಣೆ ಸಮಯದಲ್ಲಿ ಸಹಾಯಕಿಯಾಗಿ ಕೆಲಸ ಮಾಡುವ ಭಾಗ್ಯ ದೊರೆತಿತ್ತು. ಅವರು ಕೇವಲ ಎರಡೇ ತಿಂಗಳಲ್ಲಿ ಕನ್ನಡ ಕಲಿತಿದ್ದರು. ಅವರೊಬ್ಬ ಬುದ್ಧಿವಂತ, ಶ್ರಮಜೀವಿಯಾದ ರಾಜಕಾರಣಿಯಾಗಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+