ಸಿದ್ದು V/S ಡಿಕೆಶಿ ಬಣದಲ್ಲಿ ಮತ್ತೆ ಸಿಎಂ ಚರ್ಚೆ: ಹೈಕಮಾಂಡ್‌ ನಿಂದ ಬಂತು ಖಡಕ್‌ ಸೂಚನೆ?

ಬೆಂಗಳೂರು, ಮೇ 23: ಕಾಂಗ್ರೆಸ್‌ ಮನೆಯೊಂದು ಮೂರು ಬಾಗಿಲು ಎಂದು ಬಿಜೆಪಿ ಹಲವು ದಿನಗಳಿಂದ ಟೀಕೆಯನ್ನ ಮಾಡುತ್ತಿದ್ದು, ಇದೀಗ ಸರ್ಕಾರ ರಚನೆಯ ಆರಂಭದಲ್ಲೇ ಕಾಂಗ್ರೆಸ್‌ ನಲ್ಲಿ ಸಿಎಂ ಸ್ಥಾನದ ವಿಚಾರವಾಗಿ ಚರ್ಚೆ ಜೋರಾಗಿದೆ.

ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ನಡುವೆ ಸಂಧಾನ ಸಭೆಯ ಬಳಿಕ ಹೈಕಮಾಂಡ್‌ ಸೂಚನೆಯಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿದ್ದಾರೆ. ಇನ್ನೂ ಸರ್ಕಾರ ರಚನೆಯಾದ ಬೆನ್ನಲ್ಲೇ ಸಿಎಂ ಸ್ಥಾನದ ಅಧಿಕಾರ ಹಂಚಿಕೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

Surjewala Asks Siddaramaiah To Instruct His Faction Not To Give Any Statement About CM Tenure

ನೂತನ ಸಚಿವ ಎಂ.ಬಿ. ಪಾಟೀಲ್ ಅವರು ಸಿದ್ದರಾಮಯ್ಯನವರೇ ಮುಂದಿನ ಐದು ವರ್ಷಗಳವರೆಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಬಣ ಹಾಗೂ ಡಿಕೆಶಿ ಬಣಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದಾರೆ. ಈಗಾಗಲೇ ಈ ಹೇಳಿಕೆಯ ಬೆನ್ನಲ್ಲೇ ಡಿ ಕೆ ಶಿವಕುಮಾರ್‌ ಬಣದವರು ತಿರುಗಿ ಬಿದಿದ್ದು, ಸಹೋದರ ಪರವಾಗಿ ಡಿ ಕೆ ಸುರೇಶ್‌ ಬ್ಯಾಟಿಂಗ್‌ ಬೀಸುವ ಮೂಲಕ ಎಂ ಬಿ ಪಾಟೀಲ್‌ ಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಈ ವಿಚಾರವಾಗಿ ಬಿಜೆಪಿ ರಾಜ್ಯ ಘಟಕ ಟ್ವೀಟ್‌ ಮಾಡಿದ್ದು, ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಬಿಡುವುದಿಲ್ಲ ಎಂಬ ಅರ್ಥದಲ್ಲಿ ಕಾಲೆಳೆದಿದೆ. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊಂದಿರುವ ರಣದೀಪ್ ಸುರ್ಜೇವಾಲಾ, ನಿಮ್ಮ ಬಣದವರಿಗೆ ಸುಮ್ಮನಿರುವಂತೆ ಹೇಳಿ ಎಂದು ಖಡಕ್ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಗೆ ಖಡಕ್‌ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Surjewala Asks Siddaramaiah To Instruct His Faction Not To Give Any Statement About CM Tenure

ಸರ್ಕಾರ ರಚನೆಯಾದ ಹೊಸತರಲ್ಲೇ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ. ಇದು ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀಡಲಿದೆ ಎಂದು ಸುರ್ಜೆವಾಲ ವಾರ್ನಿಂಗ್‌ ನೀಡಿದ್ದಾರೆ ಎಂದು ಹೇಳಲಾಗಿದೆ.

ನೂತನ ಸಚಿವ ಎಂ ಬಿ ಪಾಟೀಲ್‌ ಹೇಳಿದ್ದೇನು?

ಮುಂದಿನ ಐದು ವರ್ಷದವರೆಗೆ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲೇ ಚರ್ಚೆಯಾಗಿದೆ. ಈ ವಿಚಾರ ಗೊತ್ತಿರುವುದು ಕೇವಲ ನಾಲ್ವರಿಗೆ ಮಾತ್ರ. ಅದು ವೇಣುಗೋಪಾಲ್, ಸುರ್ಜೇವಾಲ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರಿಗೆ ಮಾತ್ರ ಗೊತ್ತು ಎಂದು ಎಂಬಿ ಪಾಟೀಲ್ ಅವರು ಮೈಸೂರಿನಲ್ಲಿ ಮಂಗಳವಾರ ಮಾಧ್ಯಮಗಳ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇನ್ನೂ ಈ ವಿಚಾರವಾಗಿ ಬುಧವಾರ ಕೊಟ್ಟ ಹೇಳಿಕೆಯನ್ನ ಎಂ ಬಿ ಪಾಟೀಲ್ ಸಮರ್ಥಿಸಿಕೊಂಡಿದ್ದು, ಹೈಕಮಾಂಡ್ ನೀಡಿರುವ ಹೇಳಿಕೆಯನ್ನೇ ನಾನು ಹೇಳಿದ್ದೇನೆ. ದೆಹಲಿಯಲ್ಲಿ ಸಿದ್ದರಾಮಯ್ಯ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರಿಸುವಾಗ ಪತ್ರಕರ್ತರು ಯಾರು ಎಷ್ಟು ವರ್ಷ ಸಿಎಂ ಹುದ್ದೆಯಲ್ಲಿರುತ್ತಾರೆ ಎಂದು ಕೇಳಿದ್ದರು. ಆಗ, ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಣುಗೋಪಾಲ್, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಅಷ್ಟೇ ಎಂದು ಸೂಚ್ಯವಾಗಿ ಹೇಳಿದ್ದರು. ಅವರು ಹೇಳಿದ್ದನ್ನೇ ನಾನು ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+