Get Updates
Get notified of breaking news, exclusive insights, and must-see stories!

ರೈಲ್ವೆ ಬಜೆಟ್‌ 2016-17 : ಕರ್ನಾಟಕಕ್ಕೆ ಸಿಕ್ಕಿದ್ದೇನು?

ಬೆಂಗಳೂರು, ಫೆಬ್ರವರಿ 25 : ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು 2016-17ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸಿದರು. ಹೊಸ ಮಾರ್ಗಗಳ ಘೋಷಣೆಗೆ ಕಡಿವಾಣ ಹಾಕಿಕೊಂಡ ಸಚಿವರು, ಹಳೆಯ ಯೋಜನೆಗಳ ಮುಕ್ತಾಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಿದ್ದಾರೆ. [ರೈಲ್ವೆ ಬಜೆಟ್ ಪ್ರಮುಖ ಅಂಶಗಳು]

ಹಿಂದೆ ರೈಲ್ವೆ ಸಚಿವರಾಗಿದ್ದ ಕನ್ನಡಿಗರಾದ ಡಿ.ವಿ.ಸದಾನಂದ ಗೌಡ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯಕ್ಕೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದರು. ಅವುಗಳಿಗೆ ಸುರೇಶ್ ಪ್ರಭು ಅವರು ಸೂಕ್ತ ಅನುದಾನ ನೀಡಲಿದ್ದಾರೆ ಎಂಬ ಭರವಸೆ ಇತ್ತು. ಆದರೆ ಹಾಗಾಗಲಿಲ್ಲ. [ರೈಲ್ವೆ ಬಜೆಟ್ : ಕರ್ನಾಟಕದ ನಿರೀಕ್ಷೆ ಏನು?]

railway

ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರೈಲ್ವೆ ಸಚಿವರಾಗಿ ಎರಡನೇ ಬಾರಿಗೆ ಬಜೆಟ್ ಮಂಡನೆ ಮಾಡಿರುವ ಸುರೇಶ್ ಪ್ರಭು ಅವರು ಕರ್ನಾಟಕ ರಾಜ್ಯಕ್ಕೆ ನೀಡಿದ ಕೊಡುಗೆ ಏನು? ಇಲ್ಲಿವೆ ವಿವರಗಳು....

* ಬೆಂಗಳೂರು ನಗರದ ಉಪ ನಗರ ರೈಲು (ಸಬ್ ಅರ್ಬನ್ ) ಸೇವೆ ಆರಂಭಿಸುವ ಘೋಷಣೆ ಮಾಡಲಾಗಿದೆ. [ಸಬ್ ಅರ್ಬನ್ ರೈಲ್ವೆಗೆ ಗ್ರೀನ್ ಸಿಗ್ನಲ್]

ಸಮೀಕ್ಷೆಗಳು

* ಲೋಕಾಪುರ-ರಾಮದುರ್ಗ-ಶಿರಸಂಗಿ-ಸದವತ್ತಿ ಮಾರ್ಗ
* ಧಾರವಾಡ- ಬೆಳಗಾವಿ ಮಾರ್ಗ 91 ಕಿ.ಮೀ ಮಾರ್ಗ

ಹೊಸ ಯೋಜನೆಗಳು
* ನೇತ್ರಾವತಿ-ಮಂಗಳೂರು ಸೆಂಟ್ರಲ್ - ಜೋಡಿ ಮಾರ್ಗ ನಿರ್ಮಾಣ 1.5 ಕಿಮೀ
* ಬೀರೂರು-ಶಿವಮೊಗ್ಗ ಜೋಡಿ ಮಾರ್ಗ - 60 ಕಿ.ಮೀ.ಮಾರ್ಗ
* ನಂಜನಗೂಡು - ನೀಲಂಬೂರು - ಹೊಸ ಮಾರ್ಗ 236 ಕಿ.ಮೀ
* ಮೈಸೂರು-ಕುಶಾಲನಗರ - ಹೊಸ ಮಾರ್ಗ 85 ಕಿ.ಮೀ
* ತಾಳಗುಪ್ಪ ಸಿದ್ದಾಪುರ - ಹೊಸ ಮಾರ್ಗ -16 ಕಿ.ಮೀ
* ಬಂಗಾರಪೇಟೆ - ಮುಳುಬಾಗಲು - ಹೊಸ ಮಾರ್ಗ - 40 ಕಿ.ಮೀ
* ಸಕಲೇಶಪುರ - ಸುಬ್ರಮಣ್ಯ - ಜೋಡಿ ಮಾರ್ಗ 60 ಕಿ.ಮೀ
* ತಾಳಗುಪ್ಪ -ಹೊನ್ನಾವರ -ಹೊಸ ಮಾರ್ಗ 82 ಕಿ.ಮೀ
* ಧಾರವಾಡ - ಬೆಳಗಾವಿ - ಹೊಸ ಮಾರ್ಗ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+