ಗೌಡರ ಕುಟುಂಬ ವ್ಯಾಮೋಹಕ್ಕೆ ಟ್ವೀಟ್ ನಲ್ಲೇ ತಿವಿದ ಸುರೇಶ್ ಕುಮಾರ್!
ಬೆಂಗಳೂರು, ಮಾರ್ಚ್ 14: 'ತಾವು ಎಂದಿಗೂ ಕೇವಲ ಕುಟುಂಬ ರಾಜಕಾರಣ ಮಾಡಲಿಲ್ಲ' ಎನ್ನುತ್ತಲೇ ಈ ಬಾರಿಯ ಲೋಕಸಭಾ ಚುನಾವಣೆಗೆ ತಮ್ಮ ಇಬ್ಬರು ಮೊಮ್ಮಕ್ಕಳನ್ನೂ ಕಣಕ್ಕಿಳಿಸಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ಟ್ವೀಟ್ ನಲ್ಲೇ ತಿವಿದಿದ್ದಾರೆ.
"ನನಗೆ ಮಗ ಬೇರೆ ಅಲ್ಲ ಕಾರ್ಯಕರ್ತರು ಬೇರೆ ಅಲ್ಲ". ಸ್ವಲ್ಪ ಇಂಪ್ರೂವ್ಡ್ ವರ್ಷನ್ "ನನಗೆ ಮೊಮ್ಮಕ್ಕಳು ಬೇರೆ ಅಲ್ಲ, ಕಾರ್ಯಕರ್ತರು ಬೇರೆ ಅಲ್ಲ. ಮೊಮ್ಮಕ್ಕಳಿಗೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರಿಗೇ ಕೊಟ್ಟಂತೆ"!
ಎಂದು ಟ್ವೀಟ್ ಮಾಡಿರುವ ರಾಜಾಜೀನಗರ ಶಾಸಕ ಸುರೇಶ್ ಕುಮಾರ್, ದೇವೇಗೌಡರ ಕುಟುಂಬ, ಜೆಡಿಎಸ್ ನ ಬೇರೆ ಕಾರ್ಯಕರ್ತರಿಗೆ ರಾಜಕಾರಣಕ್ಕೆ ಬರಲು ಅವಕಾಶವನ್ನೇ ನೀಡುತ್ತಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಗೌಡರು, ಹಾಸನದಿಂದ ಈ ಬಾರಿ ಪ್ರಜ್ವಲ್ ರೇವಣ್ಣ ಅವರು ಲೋಕಸಭೆಗೆ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದ್ದರು. ಜೊತೆಗೆ ಮಂಡ್ಯದಿಂದ ಅವರ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರೂ ಕಣಕ್ಕಿಳಿಯುತ್ತಿದ್ದು, ಗೌಡರ ಕುಟುಂಬ ರಾಜಕಾರಣ ಸಾಮಾಜಿಕ ಮಾಧ್ಯಮಗಳಲ್ಲೂ ಸಾಕಷ್ಟು ಚರ್ಚೆಗೊಳಗಾಗಿದೆ.












Click it and Unblock the Notifications