ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುವಂತೆ ಸುಪ್ರಿಂ ಆದೇಶ

ತಮಿಳುನಾಡಿಗೆ 4 ಟಿಎಂಸಿ ಅಡಿ ನೀರನ್ನು ಶೀಘ್ರವೇ ಬಿಡುಗಡೆ ಮಾಡಲೇಬೇಕು ಎಂದು ಸುಪ್ರಿಂ ಕೋರ್ಟ್‌ ಮುಖ್ಯ ಮುಖ್ಯನ್ಯಾಯಪೀಠ ಇಂದು ಆದೇಶ ಹೊರಡಿಸಿದೆ.

ಸುಪ್ರಿಂ ಕೋರ್ಟ್‌ನ ಮುಖ್ಯನ್ಯಾಯೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಆದೇಶ ಹೊರಡಿಸಿದ್ದು, ಈ ತಿಂಗಳ ಒಳಗೆ ಏಪ್ರಿಲ್-ಮೇ ತಿಂಗಳಲ್ಲಿ ಹರಿಸಬೇಕಾದ ನೀರಿನ ಪಾಲಿನಲ್ಲಿ 4 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲೇಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಅಲ್ಲದೆ ಕಾವೇರಿ ನದಿ ನೀರು ಹಂಚಿಕೆ ಕರಡು ಬಗ್ಗೆ ರಚನೆ ಕೇಂದ್ರ ಸರ್ಕಾರಕ್ಕೂ ಎಚ್ಚರಿಕೆ ನೀಡಿರುವ ಸುಪ್ರೀಂ ಇನ್ನು 10 ದಿನಗಳೊಳಗೆ ನೀರು ಹಂಚಿಕೆ ಕರಡನ್ನು ಕರಡು ಪ್ರತಿಯನ್ನು ಸುಪ್ರಿಂಕೋರ್ಟ್‌ಗೆ ಸಲ್ಲಿಸಬೇಕೆಂದು ಕರಾವಕ್ಕಾಗಿ ತಿಳಿಸಿದೆ.

supreme court orders to release 4 TMC water to Tamilnadu

ಕೇಂದ್ರದ ಪರ ವಕೀಲರು ಕರ್ನಾಟಕ ಚುನಾವಣೆ ನಂತರ ಕಾವೇರಿ ನದಿ ನೀರು ಹಂಚಿಕೆ ಕರಡು ರಚಿಸಲು ಅವಕಾಶ ಕೇಳಿದ್ದರು ಆದರೆ ಅದನ್ನು ಸುಪ್ರಿಂ ತಳ್ಳಿ ಹಾಕಿದ್ದು, ಇನ್ನು 10 ದಿನಗಳ ಒಳಗೆ ಕರಡು ಪ್ರತಿಯನ್ನು ಸಲ್ಲಿಸಲು ಹೇಳಿದೆ.

ಅಲ್ಲದೆ ಈ ಜಲವರ್ಷದಲ್ಲಿ ಕರ್ನಾಟಕವು ತಮಿಳುನಾಡಿಗೆ ಹರಿಸಿರುವ ನೀರಿನ ಪ್ರಮಾಣ ಹಾಗೂ ಕರ್ನಾಟಕದ ಅಣೆಕಟ್ಟೆಗಳಲ್ಲಿ ಶೇಖರವಾಗಿರುವ ನೀರಿನ ಪ್ರಮಾಣದ ಮಾಹಿತಿಯುಳ್ಳ ಅಫಿಡವಿಟ್‌ ಅನ್ನು ಮುಂದಿನ ಮಂಗಳವಾರದ ಒಳಗೆ ಸಲ್ಲಿಸಲು ಸುಪ್ರಿಂ ಕೋರ್ಟ್‌ ಕರ್ನಾಟಕ್ಕೆ ಆದೇಶ ನೀಡಿದೆ.

ಮುಂದಿನ ವಿಚಾರಣೆಯನ್ನು ಸುಪ್ರಿಂ ಕೋರ್ಟ್‌ ಮುಂದಿನ ಮಂಗಳವಾರಕ್ಕೆ ಮುಂದೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+