ಮೋದಿ ಕಾರ್ಯಕ್ರಮದಲ್ಲೇ ಸಮಲತಾ ಬಿಜೆಪಿ ಸೇರಲು ಪ್ಲಾನ್ ಮಾಡಿದ್ರು, ಆದರೆ..: ಸಿ.ಎಸ್. ಪುಟ್ಟರಾಜು ಹೇಳಿದ್ದೇನು?

2023 ವಿಧಾನಸಭಾ ಚುನಾವಣೆಯಲ್ಲಿ ಈ ಬಾರೀ ಮಂಡ್ಯ ವಿಧಾನಸಭಾ ಕ್ಷೇತ್ರ ಘಟಾನುಘಟಿ ನಾಯಕರ ಸ್ಪರ್ಧೆಗೆ ಸಾಕ್ಷಿಯಾಗಲಿದೆ.

ಮೈಸೂರು,ಮಾರ್ಚ್ 9: ಮಂಡ್ಯ ಸಂಸದೆ ಸುಮಲತಾ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬರ್ತಾರೆ ಎನೋ ಚರ್ಚೆ ಚುನಾವಣಾ ಹೊತ್ತಲಿ ಹೆಚ್ಚಾಗಿದೆ. ಈ ಕುರಿತು ಕ್ಷೇತ್ರದ ಜನರ ಜೊತೆಗೆ ಚರ್ಚೆ ಮಾಡುವುದಾಗಿ ಸುಮಲತಾ ಹೇಳಿದರು.

ಆದರೆ, ಸುಮಲತಾ ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗ್ತಾರಾ ಅಥವಾ ಬಿಜೆಪಿ ಪಕ್ಷಕ್ಕೆ ಹೋಗ್ತಾರಾ ಅನೋ ಚರ್ಚೆಯಾಗಿತ್ತಿದೆ. ಈಗಾಗಲೇ ಬಿಜೆಪಿ ನಾಯಕರ ಸಂಪರ್ಕದಲ್ಲಿರುವ ಸುಮಲತಾ ಇನ್ನೂ ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ. ಆದರೆ, ಈ ಕುರಿತು ಗುರುವಾರ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟ ರಾಜು ಸಂಸದೆ ಸುಮಲತಾ ಅವರು ಬಿಜೆಪಿ ಸೇರ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

Sumalatha Ambareesh Will Join BJP Tomorrow Says MLA CS Puttaraju

ಈ ಕುರಿತು ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟ ರಾಜು ಮಾತನಾಡಿ, ಸುಮಲತಾ ನಾಳೆ ಬಿಜೆಪಿ ಸೇರ್ತಾರೆ. ಮೋದಿ ಕಾರ್ಯಕ್ರಮದಲ್ಲೇ ಸೇರ್ಪಡೆ ಆಗೋ ಪ್ಲಾನ್ ಮಾಡಿದ್ರು. ಆದರೆ ಅದು ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಪಕ್ಷ ಸೇರ್ಪಡೆಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಮೋದಿ ಬರಲಿ, ಅಮಿತ್ ಶಾ ಬರಲಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ನದ್ದೇ ಪ್ರಾಬಲ್ಯ ಇರುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಪೈಪೋಟಿ ಇದೆ. ಬಿಜೆಪಿ, ರೈತ ಸಂಘದವರು ಬಲಿಷ್ಠವಾದರೆ ಮತಗಳು ಹರಿದು ಹಂಚಿ ಹೋಗುತ್ತವೆ, ಇದರಿಂದ ನೇರವಾಗಿ ಜೆಡಿಎಸ್ ಗೆ ಅನುಕೂಲವಾಗುತ್ತದೆ. ಇನ್ನೂ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿರಬಹುದು. ಆದರೆ, 5.45 ಲಕ್ಷ ಮತ ಪಡೆದಿದ್ದಾರೆ. ಅವರನ್ನು ಜಂಟಿಯಾಗಿ ಸೋಲಿಸಿದ ಸುಮಲತಾ ಬಿಜೆಪಿ ಸೇರ್ತಾರೆ, ಮಂಡ್ಯ ಜಿಲ್ಲೆಯಲ್ಲಿರುವ ಶಾಸಕರು ಬಲಿಷ್ಠವಾಗಿದ್ದಾರೆ. ಮಂಡ್ಯದಲ್ಲಿ ಬೇರೆಯವರ ಆಟ ನಡೆಯೋದಿಲ್ಲ ಎಂದು ಹೇಳಿದರು.

Sumalatha Ambareesh Will Join BJP Tomorrow Says MLA CS Puttaraju

ಮೈಸೂರು-ಬೆಂಗಳೂರು ನಡುವಿನ ದಶಪಥ ಹೆದ್ದಾರಿ ಕ್ರೆಡಿಟ್ ವಾರ್ ವಿಚಾರವಾಗಿ ಮಾತನಾಡಿ, ಇದರಲ್ಲಿ ಜೆಡಿಎಸ್‌ನದ್ದೂ ಪಾಲಿದೆ. ಕೇಂದ್ರ ಸರ್ಕಾರ ಪ್ರತಾಪ್‌ ಸಿಂಹಗೆ ಹೆದ್ದಾರಿ ಯೋಜನೆ ಗುತ್ತಿಗೆ ಕೊಟ್ಟಿದೆಯಾ? ಇಡೀ ಯೋಜನೆ ನಾನೊಬ್ಬನೇ ಮಾಡಿಸಿದ್ದೇನೆ ಅಂತಾ ಓಡಾಡಿಕೊಂಡಿದ್ದಾರೆ, ನಾನು ಸಹ ಎಂಪಿ ಆಗಿದ್ದವನು. ದೆಹಲಿಯಲ್ಲಿ ಏನೆಲ್ಲಾ ಹೋರಾಟ ಮಾಡಿದ್ದೀನಿ ಅಂತ ಯಡಿಯೂರಪ್ಪ ಅವರ ಬಳಿ ಕೇಳಿ ತಿಳಿದುಕೊಳ್ಳಲಿ. ಹೆದ್ದಾರಿ ಬಂದಿರುವುದರಿಂದ ಚನ್ನಪಟ್ಟಣ, ರಾಮನಗರ, ಮಂಡ್ಯ, ಶ್ರೀರಂಗಪಟ್ಟಣದ ನೂರಾರು ಕುಟುಂಬಗಳ ಬಾಯಿಗೆ ಮಣ್ಣು ಬಿದ್ದಿದೆ. ಪ್ರತಾಪ್ ಸಿಂಹ ಹೆಜ್ಜೆ ಹೆಜ್ಜೆಗೂ ಚೀಫ್ ಇಂಜಿನಿಯರ್ ತರಹ ಆಡ್ತಿದ್ದಾರೆ ಎಂದು ಟಾಂಗ್ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+