ಇದು ಶಶಿಧರ ಭಟ್ಟರ ಸುದ್ದಿ ಟಿವಿ, ಲೋಗೋ ರಿಲೀಸ್

ಬೆಂಗಳೂರು, ಅಕ್ಟೋಬರ್ 23: ಸುದ್ದಿ ಟಿವಿ ಬಾಗಿಲು ಬಂದ್ ಆಗಿರುವ ಸುದ್ದಿ ಇತ್ತೀಚೆಗೆ ಹರಡಿತ್ತು. ಒಂದರ್ಥದಲ್ಲಿ ಇದು ನಿಜವೂ ಹೌದು. ಈ ಬಗ್ಗೆ ಚಾನೆಲ್ ನ ಮುಖ್ಯ ಸಂಪಾದಕರಾದ ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದರು. ಈಗ ಭಟ್ಟರು ತಮ್ಮ ಸುದ್ದಿ ಟಿವಿಗೆ ಮರು ಜೀವ ಸಿಕ್ಕಿರುವ ಬಗ್ಗೆ ಘೋಷಿಸಿದ್ದಾರೆ.

'ನಾನು ವಾಹಿನಿಯನ್ನು ನಿಲ್ಲಿಸದಿರುವ ತೀರ್ಮಾನ ತೆಗೆದುಕೊಂಡೆ. ಹೊಸ ಹೂಡಿಕೆದಾರರನ್ನು ಕರೆ ತರಲು ಯತ್ನ ನಡೆಸಿದೆ. ಸುಮಾರು ನಾಲ್ವರು ಹೂಡಿಕೆದಾರರ ನಡುವೆ ಒಪ್ಪಂದವಾಗುವ ಸಂದರ್ಭದಲ್ಲಿ ಅದು ತಪ್ಪಿ ಹೋಯಿತು. ಕೆಲವರು ಕುತಂತ್ರ ನಡೆಸಿ ಹೊಸ ಹೂಡಿಕೆದಾರರು ಬರದಂತೆ ನೋಡಿಕೊಂಡರು' ಎಂದು ಶಶಿಧರ್ ಭಟ್ಟರು ನೋವು ತೋಡಿಕೊಂಡಿದ್ದರು.

Suddi TV set to re launch logo released : Shashidhar Bhat

ಇದಾದ ಬಳಿಕ, ಮಾಧ್ಯಮ ಶಾಲೆ ಆರಂಭಿಸುವ ಬಗ್ಗೆ ಬರೆದುಕೊಂಡಿದ್ದರು. ಈಗ ಸುದ್ದಿ ಟಿವಿಯ ಹೊಸ ಲೋಗೋ ಪ್ರಕಟಿಸಿದ್ದಾರೆ. ಜೊತೆಗೆ ಆಸಕ್ತ, ಅರ್ಹರ ತಂಡ ಕಟ್ಟಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಫೇಸ್ ಬುಕ್ ಪೋಸ್ಟ್ ಮೂಲಕ ಮುಕ್ತ ಆಹ್ವಾನ ನೀಡಿದ್ದಾರೆ.

ಅಂದ ಹಾಗೆ, ಇದು ಶಶಿಧರ ಭಟ್ಟರ ಸುದ್ದಿ ಟಿವಿಯಾಗಿದೆ. ಹಳೆ ಸುದ್ದಿ ಟಿವಿ ಸ್ಟುಡಿಯೋಗೆ ಇನ್ನು ದಿಕ್ಕು ದಿಶೆ ಸಿಕ್ಕಿಲ್ಲ. ಭಟ್ಟರ ಟಿವಿಗೆ ಯಾರು ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+