ಅಭಿನಂದನ್ ಸ್ವದೇಶಕ್ಕೆ ಮರಳುತ್ತಿರುವುದಕ್ಕೆ ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ

ಬೆಂಗಳೂರು, ಮಾರ್ಚ್ 01: ಪಾಕಿಸ್ತಾನ ವಶದಲ್ಲಿರುವ ಭಾರತದ ವಾಯುಪಡೆ ಪೈಲಟ್‌ ವಿಂಗ್ ಕಮಾಂಡರ್‌ ಅಭಿನಂದನ್ ವರ್ಧಮಾನ್ ಇಂದು ಮಧ್ಯಾಹ್ನದ ವೇಳೆಗೆ ವಾಘಾ ಗಡಿಯ ಮೂಲಕ ತಾಯ್ನಾಡಿಗೆ ಮರಳಿ ಪ್ರವೇಶಿಸಲಿದ್ದಾರೆ.

ಅವರ ಸ್ವಾಗತಕ್ಕೆ ಭಾರತೀಯರು ಸಂಭ್ರಮದಿಂದ ಕಾಯುತ್ತಿದ್ದು, ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ. ಅಭಿನಂದನ್ ಬಿಡುಗಡೆ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ನೇತಾಜಿ ನಗರದ ಇಂಜಿನಿಯರಿಂಗ್ ಹಾಸ್ಟೆಲ್ ವಿದ್ಯಾರ್ಥಿಗಳು ಸಂಭ್ರಮಿಸಿ, ಜೈಘೋಷ ಹಾಕಿದ್ದಲ್ಲದೆ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂಭ್ರಮದಲ್ಲಿ ಸ್ಥಳೀಯ ಯುವಕರು ಭಾಗಿಯಾಗಿದ್ದರು.

Students at Haveri and Channapatna have congratulated Abhinandan

ಇನ್ನು ಚನ್ನಪಟ್ಟಣದಲ್ಲಿ ನಗರದ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳುತ್ತಿರುವ ಅಭಿನಂದನ್ ಗೆ ಅಭಿನಂದನೆ ಸಲ್ಲಿಸಿದರು. ಭಾರತಕ್ಕೆ ಜೈಕಾರ ಹಾಕುತ್ತಾ, ಕೈಯಲ್ಲಿ ಅಭಿನಂದನ್ ಭಾವಚಿತ್ರ ಹಿಡಿದು ಹರ್ಷ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+