ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಬಳಕ್ಕಾಗಿ ಕರ್ನಾಟಕದಾದ್ಯಂತ ಏರುತ್ತಿದೆ ಕಾವು

By Ananthanag
|
Google Oneindia Kannada News

ಕಂಬಳವನ್ನು ಯಾವುದೇ ಕಾರಣಕ್ಕೂ ನಿಷೇಧಿಸ ಬಾರದು ಎಂದು ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ವಿದ್ಯಾರ್ಥಿಗಳು ಮತ್ತು ಕನ್ನಡಪರ ಸಂಘಟನೆಗಳು ಮುಂದಾಗಿದ್ದು ರಾಜ್ಯದಲ್ಲಿ ಕಂಬಳದ ಕಾವು ತೀವ್ರಗತಿ ಪಡೆಯುತ್ತಿದೆ.

ತಮಿಳುನಾಡಿನ ಜಲ್ಲಿಕಟ್ಟಿನ ಹೋರಾಟದಿಂದ ಪ್ರಭಾವಿತರಾಗಿ ರಾಜ್ಯದ ವಿವಿಧೆಡೆ ನೂರಾರು ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಮಂಗಳೂರು ಮತ್ತು ಹುಬ್ಬಳ್ಳಿ ಧಾರವಾಡಗಳಲ್ಲಿ ವಿದ್ಯಾರ್ಥಿಗಳು ಮತ್ತು ಕನ್ನಡಪರ ಸಂಘಟನೆಗಳು ಬೀದಿಗಿಳಿದಿವೆ. ಕಂಬಳವನ್ನು ನಾಳೆ (ಜ.28) ಆಚರಣೆ ಮಾಡಿಯೇ ಮಾಡುತ್ತವೆ ಎಂದು ಎಲ್ಲ ಸಿದ್ಧತೆಗಳನ್ನು ನಡೆಸುತ್ತಿವೆ.

ಸರಕಾರವೂ ಕಂಬಳಕ್ಕಾಗಿ ಸುಗ್ರಿವಾಜ್ಞೆಯನ್ನು ಜಾರಿಗೊಳಿಸುವುದಾಗಿ ಹೇಳಿದೆ. ಯುಟಿ,ಖಾದರ್, ಪ್ರಮೋದ್ ಮಧ್ವರಾಜ್ ಸೇರಿದಂತೆ ಕರಾವಳಿ ಭಾಗದ ಹಿರಿಯ ಮುಖಂಡರು ಕಂಬಳಕ್ಕೆ ಸಮ್ಮತಿ ಸೂಚಿಸಿದ್ದಾರೆ. ಅಲ್ಲದೆ ಚರ್ಚೆ ಮಾಡಲೂ ಮುಂದಾಗಿದ್ದಾರೆ. ಕಂಬಳ ಆಚರಣೆಗಾಗಿ ಕರ್ನಾಟಕ ಬಂದ್ ಮಾಡಲು ಅನೇಕ ಸಂಘಟನೆಗಳು ಸಿದ್ದವಾಗಿವೆ. ಅದರೆ ನ್ಯಾಯಾಲಯದಲ್ಲಿ ಇದರ ವಿಚಾರಣೆ ಬಗ್ಗೆ ಏನು ಆದೇಶ ಬುರುವುದೋ ಎಂಬ ಅನುಮಾನವೂ ಕಾಡುತ್ತಿದೆ.

ಮಂಗಳೂರಿನಲ್ಲಿ ಪ್ರತಿಭಟನೆ

ಮಂಗಳೂರಿನಲ್ಲಿ ಪ್ರತಿಭಟನೆ

ಕಂಬಳವನ್ನು ಯಾವುದೇ ಕಾರಣಕ್ಕೂ ನಿಷೇಧಿಸಬಾರದು ಎಂದು ಕಂಬಳ ಅಭಿಮಾನಿಗಳು, ತುಳು ಚಿತ್ರರಂಗ ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಇಂದು(ಜ.27) ಬೆಳಗ್ಗೆ ನಗರದ ಹಂಪನಕಟ್ಟೆ ಜಂಕ್ಷನ್‌ನಲ್ಲಿ ಬೃಹತ್ ಮಾನವ ಸರಪಳಿ ನಡೆಸಿ ಪ್ರತಿಭಟಿಸಿದರು.
ಇದಕ್ಕೂ ಮೊದಲು ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆಯವರೆಗೆ ಕಂಬಳಾಭಿಮಾನಿಗಳು ಹಾಗೂ ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಬಳಿಕ ಹಂಪನಕಟ್ಟೆ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಕಂಬಳವನ್ನು ಬೆಂಬಲಿಸಿದರು.

ಕಂಬಳದಲ್ಲಿ ಹಿಂಸೆಯಿಲ್ಲ: ಶಾಂತಾರಾಮ ಶೆಟ್ಟಿ

ಕಂಬಳದಲ್ಲಿ ಹಿಂಸೆಯಿಲ್ಲ: ಶಾಂತಾರಾಮ ಶೆಟ್ಟಿ

ತಮಿಳುನಾಡಿನ ಜಲ್ಲಿಕಟ್ಟು ಮತ್ತು ಕಂಬಳ ಆಚರಣೆಯ ನಡುವೆ ಬಹಳಷ್ಟು ವ್ಯತ್ಯಾಸವಿದೆ. ಕಂಬಳದಲ್ಲಿ ಹಿಂಸೆ ಇಲ್ಲವೇ ಇಲ್ಲ. ಹಾಗಾಗಿ ಕಂಬಳವನ್ನು ಉಳಿಸಲು ಜಾತಿ, ಧರ್ಮವನ್ನು ಮರೆತು ಹೋರಾಟಕ್ಕೆ ಮುಂದಾಗಿದ್ದೇವೆ. ಕಂಬಳದ ವಾಸ್ತವವನ್ನು ಅರಿತು ಸರಕಾರ ಇದನ್ನು ಉಲಿಸಲು ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಬೇಕು ಎಂದು ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಕಂಬಳ ನಡೆಸುವಂತೆ ಹುಬ್ಬಳ್ಳಿ ಧಾರವಾಡದಲ್ಲಿ ನಾಗರಿಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಕಂಬಳ ಕೇವಲ ಕ್ರೀಡೆ ಇದನ್ನು ಯಾವುದೇ ಕಾರಣಕ್ಕೂ ನಿಲ್ಲಿಸ ಬಾರದು ಇದರಲ್ಲಿ ಯಾವುದೇ ಹಿಂಸೆಯ ಆಚರಣೆಯಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಏರಿದ ಕಾವು

ಬೆಂಗಳೂರಿನಲ್ಲಿ ಏರಿದ ಕಾವು

ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಮೂರು-ನಾಲ್ಕು ದಿನದಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಕಂಬಳವನ್ನು ನಿಷೇಧಿಸಬಾರದು ಎಂದು ರಾಜಭವನ್ನು ಮುತ್ತಗೆ ಹಾಕುಲು ಮುಂದಾದ ಕನ್ನಡಪರ ಸಂಘಟನೆಯ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.

ಒಗ್ಗಟ್ಟಾದ ರಾಜಕೀಯ ಮುಖಂಡರು

ಒಗ್ಗಟ್ಟಾದ ರಾಜಕೀಯ ಮುಖಂಡರು

ರಾಜ್ಯದಲ್ಲಿ ಕಂಬಳ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ನಡೆದೇ ನಡೆಯುತ್ತದೆ ಎಂದು ಕರಾವಳಿ ಮೂಲದ ರಾಜಕೀಯ ಮುಖಂಡರಾದ ಯು.ಟಿ.ಖಾದರ್ ಮತ್ತು ಪ್ರಮೋದ್ ಮಧ್ವರಾಜ್ ನುಡಿದಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಕಂಬಳಕ್ಕಾಗಿ ಸುಗ್ರಿವಾಜ್ಞೆಗೂ ಸಿದ್ಧ

ಕಂಬಳಕ್ಕಾಗಿ ಸುಗ್ರಿವಾಜ್ಞೆಗೂ ಸಿದ್ಧ

ಕಂಬಳ ಪುರಾತನ ಗ್ರಾಮೀಣ ಕ್ರೀಡೆಯಾಗಿದ್ದು, ಅದರ ಆಚರಣೆಗೆ ಸುಗ್ರಿವಾಜ್ಞೆಯನ್ನು ಬೇಕಾದರೂ ಹೊರಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ ಜನರ ಭಾವನಾತ್ಮಕ ಸಂಬಂಧಕ್ಕೆ ಎಲ್ಲರೂ ಮಾನ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.

English summary
Students and pro-Kannada organisations took to the streets in Mangaluru, Hubli-Dharwad and Bengaluru in support of Kambala. Taking a cue from the people of Tamil Nadu fighting for their traditional sport Jallikattu, public demand for revoking the ban on Karnataka's Kambala has been growing. The protests come in the backdrop of the Siddaramaiah government mulling an ordinance similar to the Jallikattu ordinance to legalise Kambala in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X