ಕೇರಳದ ವಿದ್ಯಾರ್ಥಿನಿಗೆ ಕಲಬುರಗಿಯಲ್ಲಿ ಕಿರುಕುಳ

Written By:
Subscribe to Oneindia Kannada

ಕಲಬುರಗಿ, ಜೂನ್, 21: ಕೇರಳ ಮೂಲದ ವಿದ್ಯಾರ್ಥಿನಿಗೆ ಆಕೆಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೇ ದೌರ್ಜನ್ಯ ನಡೆಸಿ ಫಿನಾಯಿಲ್ ಕುಡಿಸಿದ್ದಾರೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

ಅಸ್ವಥಿ (19) ಎಂಬಾಕೆಗೆ ಕೇರಳದ ವಿದ್ಯಾರ್ಥಿಗಳೇ ಶೌಚಾಲಯ ಶುದ್ಧಿಗೆ ಬಳಸುವ ಕ್ಲೀನರ್ ಕುಡಿಸಿದ್ದು ಅಸ್ವಸ್ಥ ಗೊಂಡ ಯುವತಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಸದ್ಯ ಅಸ್ವಥಿ ಕೋಳಿಕ್ಕೋಡ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.[ಬೆಂಗಳೂರಲ್ಲಿ 27/65 'ಅಪೂರ್ವ'ವಾದ ಪ್ರೇಮವಿವಾಹ ಕಥೆ]

kalaburgi

ಕಲಬುರಗಿಯ ಅಲ್ ಖಮರ್ ಕಾಲೇಜಿನಲ್ಲಿ ನರ್ಸಿಂಗ್ ಕೋರ್ಸ್ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ನಡೆದಿದೆ. ಘಟನೆ ನಡೆದು 5 ದಿನಗಳ ನಂತರ ತೀವ್ರ ಅಸ್ವಸ್ಥಗೊಂಡ ಅಸ್ವಥಿಯನ್ನು ಕಾಲೇಜು ಆಡಳಿತ ಮಂಡಳಿ ಮನೆಗೆ ಕಳಿಸಿಕೊಟ್ಟಿದೆ ಎನ್ನಲಾಗಿದೆ.[ಮಹಿಳಾ ಸುರಕ್ಷತೆಗೆ ಬಂತು ಹೊಸ ಆಪ್, ಏನಿದರ ವಿಶೇಷ?]

ಆದರೆ ಕಾಲೇಜಿನಲ್ಲಿ ಇಂಥ ಯಾವ ಘಟನೆ ನಡೆದಿಲ್ಲ ಎಂದು ಅಲ್ ಖಮರ್ ಕಾಲೇಜಿನ ಪ್ರಾಂಶುಪಾಲೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A nursing student is in a critical state after being forced to drink toilet cleaning fluid during alleged ragging by her seniors at a college in Karnataka, Kalaburagi. The incident took place at the Al Qamar College of Nursing School in kalaburagi.
Please Wait while comments are loading...