• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Stories Of Strength; ಕೊರೊನಾ Negative ಎಂಬ ಶುಭ ಸುದ್ದಿ

|
Google Oneindia Kannada News

" ಕೋವಿಡ್ ಟೆಸ್ಟ್ ರಿಪೋರ್ಟ್ negative ಬಂತು. ಆರಾಮಾಗಿದೀನಿ, ಸ್ವಲ್ಪ ಸುಸ್ತು ಆಗ್ತಿದೆ ಅಷ್ಟೇ. ನಾಳೆ ಡಿಸ್ಚಾರ್ಜ್ ಮಾಡ್ತಿನಿ ಅಂತ ಹೇಳಿದ್ರು" ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶುಭ ಹೇಳಿದ್ದಿಷ್ಟು.

ಅದು ಮಾರ್ಚ್ ತಿಂಗಳು. work from home ಎಂದು ಮನೆಯಲ್ಲಿ ಕೀ ಬೋರ್ಡ್ ಕುಟ್ಟುತ್ತಾ ಕುಳಿತಿದ್ದಾಗ ಫೋನ್‌ ರಿಂಗ್ ಆಯಿತು. ಆಪ್ತ ಸ್ನೇಹಿತೆಯ ಕರೆ, ಹೇಳು ಎಂದೆ, "ಅತ್ತೆಗೆ ಕೋವಿಡ್ ಪಾಸಿಟಿವ್, ಆಸ್ಪತ್ರೆಗೆ ಅಡ್ಮಿಟ್ ಮಾಡಿದಾರೆ. ನಂದು ಮತ್ತೆ ಮಾವನ ರಿಪೋರ್ಟ್ ನಾಳೆ ಬರತ್ತೆ".

Stories Of Strength: ಕೊರೊನಾ ಗೆದ್ದು ಸ್ಫೂರ್ತಿಯಾದ 98 ವರ್ಷದ ವೃದ್ಧStories Of Strength: ಕೊರೊನಾ ಗೆದ್ದು ಸ್ಫೂರ್ತಿಯಾದ 98 ವರ್ಷದ ವೃದ್ಧ

ಫೋನ್ ಕರೆ ಒಂದು ಕ್ಷಣ ಆತಂಕ ಮೂಡಿಸಿತ್ತು. ಆಪ್ತ ವಲಯದಲ್ಲಿ ಕಂಡು ಬಂದ ಮೊದಲ ಕೋವಿಡ್ ಪ್ರರಣವಿದು. "ಏನೂ ಆಗಲ್ಲ ಧೈರ್ಯವಾಗಿರು, ಏನಾದ್ರು ಹೆಲ್ಪ್ ಬೇಕಾದ್ರೆ ಪೋನ್ ಮಾಡು" ಎಂದು ಹೇಳಿದೆ ಅಷ್ಟೇ.

 Stories Of Strength: ಎದೆಯಲ್ಲಿ ನಳಿಕೆಯಿಟ್ಟುಕೊಂಡೇ ಕೊರೊನಾ ಗೆದ್ದ 99ರ ವ್ಯಕ್ತಿ Stories Of Strength: ಎದೆಯಲ್ಲಿ ನಳಿಕೆಯಿಟ್ಟುಕೊಂಡೇ ಕೊರೊನಾ ಗೆದ್ದ 99ರ ವ್ಯಕ್ತಿ

ಮರುದಿನ ಮತ್ತೆ ಫೋನ್, "ನಂಗೆ ಮತ್ತು ಮಾವನಿಗೆ ಪಾಸಿಟಿವ್. ಬೆಡ್ ಸಿಕ್ಕಿದೆ, ಸಂಜೆ ಅಡ್ಮಿಟ್ ಆಗ್ತಿವಿ. ಧೈರ್ಯ ತಂದುಕೋ ಏನೂ ಆಗಲ್ಲ. ಅವರಿಗೂ ಧೈರ್ಯವಾಗಿರಲು ಹೇಳು" ಎಂದು ಮತ್ತೆ ಅದೇ ಮಾತು ಹೇಳಿದೆ.

Stories Of Strength : ನೆಗೆಟಿವ್ ಬಂತೆಂದು ಎಚ್ಚರ ತಪ್ಪದಿರಿ ಎಂದ ಕಂಗನಾ Stories Of Strength : ನೆಗೆಟಿವ್ ಬಂತೆಂದು ಎಚ್ಚರ ತಪ್ಪದಿರಿ ಎಂದ ಕಂಗನಾ

ಸಣ್ಣದಾಗಿ ಜ್ವರ ಬಂದ ಕಾರಣ ಶುಭ, ಅವರ ಮಾವ ಆಸ್ಪತ್ರೆಗೆ ಆಡ್ಮಿಟ್ ಆದರು. ಅತ್ತೆಗೆ ಉಸಿರಾಟದ ತೊಂದರೆ ಉಂಟಾಗಿ ಐಸಿಯುಗೆ ಶಿಫ್ಟ್ ಮಾಡಿದರು. ಶುಭ ಪತಿಯ ವರದಿಗೆ ನೆಗೆಟಿವ್ ಬಂದಿತು.

ಕೋವಿಡ್ ವಿಚಿತ್ರ ಕಾಯಿಲೆ. ಆಪ್ತರಿಗೆ ಬಂದು ಅವರು ಆಸ್ಪತ್ರೆ ಸೇರಿದರೂ ಹೋಗಿ ನೋಡಲು ಆಗುವುದಿಲ್ಲ. ಚಿಕಿತ್ಸೆ ಪಡೆಯುತ್ತಿರುವವರಿಗೂ ಆತಂಕ. ಹೊರಗಡೆ ಇರುವವರಿಗೂ ಆತಂಕ.

ಕೋವಿಡ್ ವಾರ್ಡ್‌ನಲ್ಲಿ ಫೋನ್ ಬಳಕೆ ಮಾಡಲು ಅನುಮತಿ ಇರುವ ಕಾರಣ ವಾಟ್ಸಪ್ ಚಾಟ್‌ನಲ್ಲಿ ಆರೋಗ್ಯದ ಮಾಹಿತಿ ಸಿಗುತ್ತಿತ್ತು. ಮಾತ್ರೆ ಕೊಟ್ಟರು, ಮಧ್ಯಾಹ್ನದ ಫುಡ್ ಇದು, ರಾತ್ರಿ ಕುಡಿಯಲು ಹಾಲು ಕೊಟ್ಟರು ಹೀಗೆ ಅಪ್‌ಡೇಟ್ ಬರುತ್ತಿತ್ತು.

ರೋಗದ ಲಕ್ಷಣಗಳು ಇಲ್ಲದೇ ಕೇವಲ ಜ್ವರ ಇದಿದ್ದರಿಂದ ಎರಡು ದಿನದಲ್ಲಿ ಶುಭ ಮತ್ತು ಆಕೆಯ ಮಾವ ಸುಧಾರಿಸಿಕೊಳ್ಳ ತೊಡಗಿದರು. ಇದು ಸ್ಪಷ್ಟ ಮಟ್ಟಿಗಿನ ನೆಮ್ಮದಿಯನ್ನು ನೀಡಿತು. ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಿ ನೆಗೆಟಿವ್ ಬಂದರೆ ಡಿಸ್ಚಾರ್ಜ್‌ ಮಾಡ್ತಾರೆ ಎಂಬ ಮಾಹಿತಿಯೂ ಸಿಕ್ತು.

ಆದರೆ ಅದೇ ಆಸ್ಪತ್ರೆಯ ಐಸಿಯುನಲ್ಲಿದ್ದ ಆಕೆಯ ಅತ್ತೆ ಪರಿಸ್ಥಿತಿ ಸುಧಾರಿಸಲಿಲ್ಲ. ಎರಡು ದಿನ ಉಸಿರಾಟದ ಸಮಸ್ಯೆ ಎದುರಿಸಿದ ಅವರು ಮೂರನೇ ದಿನ ಸಾವನ್ನಪ್ಪಿದ್ದರು. ಪತಿ ಮತ್ತು ಸೊಸೆ ಆಸ್ಪತ್ರೆಯಲ್ಲಿದ್ದ ಕಾರಣ ಅಂತ್ಯ ಸಂಸ್ಕಾರದಲ್ಲಿ ಸಹ ಭಾಗಿಯಾಗಲು ಆಗಲಿಲ್ಲ.

ಶುಭ ಪತಿ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯ ಮುಗಿಸಿದರು. "ಅವರಿಬ್ಬರು ಆರೋಗ್ಯವಾಗಿ ಹೊರ ಬಂದರೆ ಅಷ್ಟೇ ಸಾಕು" ಎಂಬ ಅವರ ಮಾತಿನಲ್ಲಿ ಆತಂಕ ಎದ್ದು ಕಾಣಿಸುತ್ತಿತ್ತು. "ಏನೂ ಆಗಲ್ಲ" ಎಂದು ಮಾತಿನಲ್ಲಿ ಧೈರ್ಯ ಹೇಳಿದೆ.

ಇದಾದ ಎರಡು ದಿನಗಳ ಕಾಲ ವಾಟ್ಸಪ್ ಮೆಸೇಜ್, ಫೋನ್ ಕರೆ ಧೈರ್ಯದ ಮಾತುಗಳು ಹೀಗೆ ಸಾಗಿತು. ಬಳಿಕ ಕೋವಿಡ್ ವರದಿ ನೆಗೆಟಿವ್ ಬಂತು ನಾಳೆ ಡಿಸ್ಚಾರ್ಜ್ ಎಂದು ಹೇಳಿದಾಗ ನೆಮ್ಮದಿ. ಮರುದಿನ ಡಿಸ್ಚಾರ್ಜ್ ಆದರು. ಶುಭ ಮತ್ತು ಮಾವ ಕೋವಿಡ್ ಗೆದ್ದಿದ್ದರು.

Recommended Video

   Stories of Strength : Corona ಗೆದ್ದು ಮನೆಗೆ ಬಂದ 98 ವರ್ಷದ ತಾತನಿಗೆ ಭರ್ಜರಿ ಸ್ವಾಗತ | Oneindia Kannada
   English summary
   A friend and his family members tested positive for Covid. With mild symptoms admitted to hospital and recovered.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X