H3N2 flu: ರಾಜ್ಯದಲ್ಲಿ ಎಚ್3ಎನ್2 ವೈರಸ್ ತಡೆಗೆ ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಇಲಾಖೆ
ಎಚ್3ಎನ್2 (H3N2) ವೈರಸ್ನಿಂದ ಹರಡಿರುವ ಸೋಂಕು ಕನಿಷ್ಠ 5 ರಿಂದ 7 ದಿನಗಳ ವರೆಗೆ ಇರುತ್ತದೆ.
ಬೆಂಗಳೂರು, ಮಾರ್ಚ್ 06: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಕೆಮ್ಮು, ಜ್ವರ ಹಾಗೂ ಕೋವಿಡ್ ರೀತಿಯ ರೋಗಲಕ್ಷಣದ ಎಚ್3ಎನ್2 26 ಪ್ರಕರಣಗಳು ಪತ್ತೆಯಾಗಿವೆ. ಇದರ ಬೆನ್ನಲ್ಲೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಸಭೆ ನಡೆಸಿದ್ದು, ಸೋಮವಾರ ವಿಸ್ತೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
In the view of increasing cases of seasonal flu, guidelines have been issued by state health department to prevent and control the spread of viral infection.
— Dr Sudhakar K (@mla_sudhakar) March 6, 2023
I urge people to follow precautionary measures, visit doctor in case of any symptoms and strictly avoid self-medication. pic.twitter.com/LJyu9gVATE
ಆರೋಗ್ಯ ಇಲಾಖೆ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಆರೋಗ್ಯ ಸಚಿವ ಕೆ.ಸುಧಾಕರ್ ಕೂಡ ಟ್ವೀಟ್ ಮೂಲಕ ಮಾರ್ಗಸೂಚಿಗಳನ್ನು ಹಂಚಿಕೊಂಡಿದ್ದಾರೆ. ಈ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಪೀಡಿತ ವ್ಯಕ್ತಿಯ ಕೆಮ್ಮು ಅಥವಾ ಸೀನುವಿಕೆಯಿಂದ ಹನಿಗಳ ಮೂಲಕ ಅಥವಾ ಕೈ ಮತ್ತು ಮೇಲ್ಮೈಗಳ ಮೇಲಿನ ಹನಿಗಳ ಸಂಪರ್ಕದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು ಎಂದು ಹೇಳಿದ್ದಾರೆ.

ಎಚ್3ಎನ್2 (H3N2) ವೈರಸ್ನಿಂದ ಹರಡಿರುವ ಸೋಂಕು ಕನಿಷ್ಠ 5 ರಿಂದ 7 ದಿನಗಳ ವರೆಗೆ ಇರುತ್ತದೆ. ಗರ್ಭಿಣಿಯರು, ಶಿಶುಗಳು, ಮಕ್ಕಳು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ವೃದ್ಧರಿಗೆ ಬೇಗ ಸೋಂಕು ಹರಡುತ್ತದೆ. 15 ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಮೇಲೆ ಇರರುವವರಿಗೆ ಸೋಂಕು ಬೇಗ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ವಯೋಮಾನದವರು ಎಚ್ಚರಿಕೆ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
*ರೋಗಲಕ್ಷಣಗಳು*
ರೋಗಲಕ್ಷಣಗಳಲ್ಲಿ ಜ್ವರ, ಶೀತ, ಅಸ್ವಸ್ಥತೆ, ಹಸಿವಾಗದೇ ಇರುವುದು, ದೇಹದ ನೋವು, ವಾಕರಿಕೆ, ಸೀನುವಿಕೆ ಮತ್ತು ದೀರ್ಘಕಾಲದ ಒಣ ಕೆಮ್ಮು ಸೇರಿವೆ.
*ಮಾರ್ಗಸೂಚಿಯಲ್ಲಿ ಏನಿದೆ..?*
1. IDSP-IHIP ಪೋರ್ಟಲ್‌ನಲ್ಲಿ ಪ್ರಕರಣ ಮತ್ತು ವರದಿಗಾಗಿ ಸೂಕ್ತವಾದ ಮಾದರಿ ಸಂಗ್ರಹಣೆಯನ್ನು ದಾಖಲು ಮಾಡಬೇಕು.
2. ಅಗತ್ಯವಿರುವ ಎಲ್ಲಾ ಡೋಸ್‌ಗಳ ಸಾಕಷ್ಟು ಸ್ಟಾಕ್ ಅನ್ನು ಖಚಿತಪಡಿಸಿಕೊಳ್ಳಬೇಕು.
3. ತೀವ್ರ ನಿಗಾ ಘಟಕಗಳು ಮತ್ತು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರ ಬಳಕೆಗಾಗಿ ಪಿಪಿಇ ಕಿಟ್ ಇಟ್ಟುಕೊಳ್ಳಬೇಕು.
4. ಐಸಿಯು ಮತ್ತು ಐಸೋಲೇಶನ್ ವಾರ್ಡ್‌ಗಳಂತಹ ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಕೆಲಸ ಮಾಡುವ ಎಲ್ಲಾ ಆರೋಗ್ಯ ಕಾರ್ಯಕರ್ತರು ಫ್ಲೂ ಲಸಿಕೆಪಡೆದುಕೊಳ್ಳಬೇಕು.
5. ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ. (ಸಾರ್ವಜನಿಕ ಮತ್ತು ಖಾಸಗಿ ಕೇಂದ್ರಗಳಲ್ಲಿಯೂ ಕಡ್ಡಾಯ)
6. ಕೊವೀಡ್ ನೆಗೆಟಿವ್ ಪರೀಕ್ಷಾ ವರದಿಯೊಂದಿಗೆ ಎಲ್ಲಾ ಉಸಿರಾಟದ ತೊಂದರೆಯಿಂದ ಉಂಟಾದ ಸಾವಿನ ಪ್ರಕರಣಗಳನ್ನು ಹತ್ತಿರದ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯದ ಪ್ರಯೋಗಾಲಯದಲ್ಲಿ (VRDL) ಪರೀಕ್ಷೆಗೆ ಒಳಪಡಿಸಬೇಕು.
7. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಈಗ ಉಂಟಾಗಿರುವ ಜ್ವರದ ರೋಗಲಕ್ಷಣದ ನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು
8. ಜನರು ಸ್ವಯಂ ಔಷಧಿ ಮತ್ತು ಆಂಟಿಡೋಸ್‌ಗಳನ್ನು ಬಳಸುವುದನ್ನು ತಪ್ಪಿಸಬೇಕು
09. ಜನಜಾಗೃತಿಗಾಗಿ ರೋಗಿಗಳು, ಜನರು ಏನು ಮಾಡಬೇಕು, ಏನು ಮಾಡಬಾರದು ಎಂಬ ವಿಷಯಗಳನ್ನು ಆಸ್ಪತ್ರೆಯ ಆವರಣದಲ್ಲಿ ಲಗತ್ತಿಸಬೇಕು.
-
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
Property: ಆಸ್ತಿದಾರರಿಗೆ 2026 ವರ್ಷ ಅದೃಷ್ಟ: ರಿಯಲ್ ಎಸ್ಟೇಟ್ನಲ್ಲಿ ಹೊಸ ಸಂಚಲನ, ಮನೆ ಮಾರಾಟ ಭರ್ಜರಿ ಹೆಚ್ಚಳ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Vastu Tips: ಈ ವಾಸ್ತು ಟಿಪ್ಸ್ ಪಾಲಿಸಿದರೆ ಧನ ಮತ್ತು ಯಶಸ್ಸು ನಿಮ್ಮದೇ












Click it and Unblock the Notifications