ಪರಿಶಿಷ್ಟರ ಪಟ್ಟಿಗೆ ಬಾಂಗ್ಲಾ ವಲಸಿಗರು, ಸಂಪುಟ ಸಭೆ ನಿರ್ಧಾರ

Subscribe to Oneindia Kannada

ಬೆಂಗಳೂರು, ಮೇ 18: ಬಾಂಗ್ಲಾದೇಶದಿಂದ ವಲಸೆ ಬಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ನೆಲೆಸಿರುವವರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ರಾಜ್ಯ ಸರಕಾರ ಮುಂದಾಗಿದೆ.

ಸಿಂಧನೂರಿನಲ್ಲಿ ನೆಲೆ ನಿಂತು ನಾಮಶೂದ್ರ, ಪೊಡ್ ಅಥವಾ ಪೌಂಡ್ರ ಹಾಗೂ ರಾಜಬುಶಿ ಜಾತಿಗಳ ಬಾಂಗ್ಲಾ ನಿವಾಸಿಗಳು ಭಾರತೀಯ ಪೌರತ್ವವನ್ನು ಪಡೆದಿದ್ದಾರೆ. ಇವರನ್ನು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಬುಧವಾರ ನಡೆಸ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.[5 ಸಾವಿರ ಡಿ ಗ್ರೂಪ್ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್]

 State Govt recommended Bangladeshi migrant to Scheduled Caste Category

ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಈ ಪ್ರದೇಶದಲ್ಲಿ ನಾಮಶೂದ್ರರ ಜನಸಂಖ್ಯೆ 8024, ಪೊಡ್ ಅಥವಾ ಪೌಂಡ್ರರ ಜನಸಂಖ್ಯೆ 118 ಹಾಗೂ ರಾಜಬುಶಿ ಜನಸಂಖ್ಯೆ 102 ಇದೆ.

1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಇವರೆಲ್ಲಾ ಭಾರತಕ್ಕೆ ವಲಸೆ ಬಂದವರಾಗಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ಸಮುದಾಯಕ್ಕೆ ಕೊಡುಗೆ ನೀಡಲು ರಾಜ್ಯ ಸರಕಾರ ಮುಂದಾಗಿದೆ.[ಜೂನ್ 5ರಿಂದ 16, ಜಿಎಸ್ಟಿಗಾಗಿ ಮುಂದುವರಿದ ಬಜೆಟ್ ಅಧಿವೇಶನ]

ಇವರನ್ನೆಲ್ಲಾ ಇವತ್ತಿಗೂ ಮೇಲ್ವರ್ಗದವರು ಅಸ್ಪೃಷ್ಯರಂತೆ ಕಾಣುತ್ತಿದ್ದಾರೆ. ಜತೆಗೆ ಸಾಮಾಜಿಕವಾಗಿಯೂ ತೀರಾ ಹಿಂದುಳಿದಿದ್ದಾರೆ. ಈ ಕಾರಣಕ್ಕೆ ಇವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಸದ್ಯ ಇವರಿಗೆಲ್ಲಾ ತಲಾ 5 ಎಕರೆ ಜಮೀನು ನೀಡಲಾಗಿದ್ದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರನ್ನು ಸಾಮಾನ್ಯ ವರ್ಷದಂತೆ ನೋಡಲಾಗುತ್ತಿರುವುದರಿಂದ ಪರಿಶಿಷ್ಟರಿಗೆ ನೀಇಡಲಾಗುತ್ತಿರುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಸಿಂಧನೂರು ಶಾಸಕ ಬಾದರ್ಲಿ ಹಂಪನ ಗೌಡ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The state government has recommended that the Centre grant Scheduled Caste tag to the three Bangladeshi migrant communities of Namasudra, Poundra and Rajbanshi who settled in Sindhanur, Raichur.
Please Wait while comments are loading...