ಶಿಕ್ಷಕರ ದಿನಾಚರಣೆ: ಸರ್ಕಾರ ಪ್ರಶಸ್ತಿ ಘೋಷಿಸಿದ್ದು ಯಾರ್ಯಾರಿಗೆ?
ಬೆಂಗಳೂರು, ಸೆಪ್ಟೆಂಬರ್ 4: ಶಿಕ್ಷಕರ ದಿನಾಚರಣೆ ಅಂಗವಾಗಿ ಸರ್ಕಾರ ನೀಡುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಒಟ್ಟು 31 ಶಿಕ್ಷಕರು ಆಯ್ಕೆಯಾಗಿದ್ದಾರೆ. ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ 20ಮಂದಿ, ಪ್ರೌಢಶಾಲಾ ವಿಭಾಗದಿಂದ 10ಮಂದಿ ಮತ್ತು ಪ್ರೌಢಶಾಲಾ ವಿಭಾಗದ ಒಬ್ಬ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಸೆಪ್ಟೆಂಬರ್ 5ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ ಶಂಕರ್ ದಕ್ಷಿಣ ಕನ್ನಡ, ಸಿಎಸ್ ಸತೀಶ್ ಸೋಮವಾರಪೇಟೆ, ಎಂ ರಮೇಶ್ ಕೋಲಾರ, ಜಿಕೆ ಶ್ರೀರಾಮಯ್ಯ ತುಮಕೂರು, ಜೈರಾಮ ಎಂ.ಭಟ್ ಉತ್ತರ ಕನ್ನಡ, ಹುಲ್ಲಪ್ಪ ವನಕಿಹಾಳ ರಾಯಚೂರು, ಬೇಬಿ ಉಡುಪಿ, ಯಮುನಾ ನಾಯ್ಕ ಶಿರಸಿ, ಸಂತೋಷ ಮಡವಾಳಪ್ಪ ಚಿಕ್ಕೋಡಿ, ಮಹಾಲಕ್ಷ್ಮಮ್ಮ ಹಾಸನ, ಸಿ.ತಿಮ್ಮೇಶಪ್ಪ ಚಿಕ್ಕಮಗಳೂರು, ಜಿ. ರೇವಣ್ಣ ಚಿತ್ರದುರ್ಗ, ಬಾಬು ಗಂಗು ಚವ್ಹಾಣ ಯಾದಗಿರಿ, ಮಲ್ಲೇಶ ಹಡಿವಾಣ ಗದಗ ಅವರು ಆಯ್ಕೆಯಾಗಿದ್ದಾರೆ.
ಟಿ. ನೀಲಪ್ಪ ಕಲಬುರಗಿ, ಪ್ರೆಸಿಲ್ಲ ಶಾಂತ ಕುಮಾರಿ ಬೆಂಗಳೂರು, ವೆಂಕಟರೆಡ್ಡಿ ಬಸವರೆಡ್ಡಿ ಇಮ್ಮಡಿ ಕೊಪ್ಪಳ, ಎಂ.ಆರ್. ರೇವಣ್ಣಪ್ಪ ಶಿವಮೊಗ್ಗ, ವಾಯ್ ಆರ್ ಭೂತಾಳಿ ಬಾಗಲಕೋಟೆಯಿಂದ ಆಯ್ಕೆಯಾಗಿದ್ದಾರೆ.

ಇನ್ನು ಪ್ರೌಢಶಾಲಾ ಶಿಕ್ಷಕರ ವಿಭಾಗದಲ್ಲಿ ಎಸ್ ಯಾಕೂಬ್ ದಕ್ಷಿಣ ಕನ್ನಡ, ಪ್ರಕಾಶ್ ರಾವ್ ಉಡುಪಿ, ಸೌಮ್ಯ ಜೈನ್ ಮೈಸೂರು, ಶಿವಕುಮಾರ್ ತುಮಕೂರು, ಚಿದಾನಂದಸ್ವಾಮಿ ಚಿತ್ರದುರ್ಗ, ಕೆ.ಎನ್. ಮಂಜುನಾಥ್ ಕೊಡಗು, ಕೃಷ್ಣಮೂರ್ತಿ ಎಲ್.ಭಟ್ಟ ಶಿರಸಿ, ಎಸ್.ಎಸ್. ಬಿರಾದಾರ್ ಬೆಂಗಳೂರು, ಬಸವರೆಡ್ಡಿ ಅಡಿವೆಪ್ಪ ರಂಗಣ್ಣವರ ಧಾರವಾಡ, ರಂಗನಾಥಪ್ಪ ಮಧುಗಿರಿ ತಾಲೂಕು, ಬಿ. ಸೈಯದ್ ಬಳ್ಳಾರಿಯಿಂದ ಆಯ್ಕೆ ಮಾಡಲಾಗಿದೆ.












Click it and Unblock the Notifications