ಔರಾದ್ಕರ್ ವರದಿಗೆ ಸರ್ಕಾರ ತಡೆ: ಪೊಲೀಸರ ಆಸೆಗೆ ತಣ್ಣೀರು
ಬೆಂಗಳೂರು, ಸೆಪ್ಟೆಂಬರ್ 17: ಸಂಬಳ ಹೆಚ್ಚಳವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರಾಜ್ಯ ಪೊಲೀಸರಿಗೆ ನಿರಾಸೆಯಾಗಿದೆ. ಔರಾದ್ಕರ್ ವರದಿಗೆ ಸರ್ಕಾರ ತಡೆ ನೀಡಿದ್ದು, ಸಂಬಳ ಹೆಚ್ಚಳ ವಿಳಂಬ ಆಗಲಿದೆ.
ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ತಂದು ರಾಜ್ಯ ಪೊಲೀಸರ ಸಂಬಳ ಹೆಚ್ಚಳ ಮಾಡಲಾಗುತ್ತದೆ. ಆಗಸ್ಟ್ 1 ರಿಂದಲೇ ಅನ್ವಯವಾಗುವಂತೆ ಸಂಬಳ ಹೆಚ್ಚಳ ಆಗುತ್ತದೆ ಎಂದು ಹೇಳಿದ್ದ ಸರ್ಕಾರ ಈಗ ವರದಿಗೆ ಅಂಕಿತ ಹಾಕಲು ಒಲ್ಲೆ ಎಂದಿದೆ.
ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿದ್ದ ರಾಜ್ಯ ಪೊಲೀಸರಿಗೆ ಭಾರಿ ನಿರಾಸೆಯಾಗಿದ್ದು. ಮತ್ತೆ ಸಂಬಳ ಹೆಚ್ಚಳ ಯಾವಾಗ ಆಗುತ್ತದೆ ಎಂಬ ಬಗ್ಗೆ ಅನುಮಾನ ಮೂಡಲು ಆರಂಭಿಸಿದೆ.

ಕಳೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ದಸರಾ ವೇಳೆಗೆ ರಾಜ್ಯ ಪೊಲೀಸರಿಗೆ ಉಡುಗೊರೆ ನೀಡುವುದಾಗಿ ಹೇಳಿದ್ದರು. ಅದರಂತೆ ಪೊಲೀಸ್ ಸಿಬ್ಬಂದಿ ವೇತನ ಪರೀಷ್ಕರಣೆಗೆ ಅಧಿಸೂಚನೆಯನ್ನೂ ಹೊರಡಿಸಲಾಗಿತ್ತು. ಆದರೆ ಆ ಸೂಚನೆಯನ್ನು ರದ್ದುಮಾಡಿ ಮತ್ತೊಂದು ಆದೇಶ ಹೊರಡಿಸಲಾಗಿದೆ.
ಹಲವು ವರ್ಷಗಳಿಂದ ಪೊಲೀಸರು ವೇತನ ಪರೀಷ್ಕರಣೆಗಾಗಿ ಕಾಯುತ್ತಿದ್ದು, ಈ ಬಾರಿ ಬಾಗಿಲಿಗೆ ಬಂದು ವಾಪಸ್ ಹೋಗಿದೆ ಔರಾದ್ಕರ್ ವರದಿ. ಮತ್ತೆ ಯಾವಾಗ ವೇತನ ಪರೀಷ್ಕರಣೆ ಆಗುತ್ತದೆಯೋ ನೋಡಬೇಕಿದೆ.












Click it and Unblock the Notifications