ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ಬಳಿ ಹಣವಿಲ್ಲ: ಕೈಚೆಲ್ಲಿದ ಯಡಿಯೂರಪ್ಪ

|
Google Oneindia Kannada News

Recommended Video

ರಾಜ್ಯ ಸರ್ಕಾರದ ಬೊಕ್ಕಸ ಖಾಲಿನಾ?

ಬೆಂಗಳೂರು, ಅಕ್ಟೋಬರ್ 04: ನೆರೆ ಸಂತ್ರಸ್ತರ ಬವಣೆ ದಿನೇ ದಿನೇ ಉಲ್ಬಣವಾಗಿದೆ ಆದರೆ ಸಿಎಂ ಯಡಿಯೂರಪ್ಪ ಅವರೇ ಹೇಳಿರುವ ಪ್ರಕಾರ ರಾಜ್ಯದ ಬೊಕ್ಕಸದಲ್ಲಿ ಹಣವೇ ಇಲ್ಲವಂತೆ.

ಹೌದು, ನಿನ್ನೆ ಬೆಳಗಾವಿಯಲ್ಲಿ ಮಾತನಾಡಿರುವ ಸಿಎಂ ಯಡಿಯೂರಪ್ಪ ಅವರು, 'ಸರ್ಕಾರದಲ್ಲಿ ಬಳಿ ಹಣ ಎಲ್ಲಿದೆ, ರಾಜ್ಯ ಬೊಕ್ಕಲ ಖಾಲಿಯಾಗಿದೆ' ಎಂದು ಹೇಳಿದ್ದಾರೆ.

ನೆರೆ ಪರಿಹಾರಕ್ಕೆ ಪೂರಕ ಬಜೆಟ್: ಸಂಪುಟ ನಿರ್ಧಾರನೆರೆ ಪರಿಹಾರಕ್ಕೆ ಪೂರಕ ಬಜೆಟ್: ಸಂಪುಟ ನಿರ್ಧಾರ

ಸವದತ್ತಿ ಶಾಸಕ ಆನಂದ ಮಾಮನಿ ಅವರು, 'ಪರಿಹಾರ ಮೊತ್ತ ಹೆಚ್ಚಿಸಿ' ಎಂದು ಸಿಎಂ ಅವರನ್ನು ಮನವಿ ಮಾಡಿದಾಗ ಯಡಿಯೂರಪ್ಪ ಅವರು ರಾಜ್ಯ ಬೊಕ್ಕಸ ಖಾಲಿ ಆಗಿರುವ ವಿಷಯ ಹೇಳಿದ್ದಾರೆ.

State Government Does Not Have Enogh Money: Yediyurappa

ರಾಜ್ಯ ಬೊಕ್ಕಸ ಖಾಲಿ ಆಗಿದೆ ಎಂದ ಯಡಿಯೂರಪ್ಪ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದು, 'ಬೊಕ್ಕಸ ಖಾಲಿ ಆಗಿದೆ ಎಂದು ಘೋಷಿಸಿದ ನಂತರ ಯಡಿಯೂರಪ್ಪ ಅವರು ಒಂದು ಕ್ಷಣವೂ ಮುಖ್ಯಮಂತ್ರಿಯಾಗಿ ಮುಂದುವರೆಯಬಾರದು' ಎಂದು ಹೇಳಿದ್ದಾರೆ.

ಕೃಷ್ಣಬೈರೇಗೌಡ ಅವರೂ ಸಹ ಯಡಿಯೂರಪ್ಪ ಹೇಳಿಕೆಯನ್ನು ಖಂಡಿಸಿದ್ದು, 'ಬಿಜೆಪಿಯದ್ದು ಅಸಮರ್ಥ ಸರ್ಕಾರ ಎಂದು ಟೀಕಿಸಿದ್ದಾರೆ'.

ಕರ್ನಾಟಕ ಪ್ರವಾಹ ನಷ್ಟದ ಅಂದಾಜು ವರದಿ ತಿರಸ್ಕರಿಸಿದ ಕೇಂದ್ರಕರ್ನಾಟಕ ಪ್ರವಾಹ ನಷ್ಟದ ಅಂದಾಜು ವರದಿ ತಿರಸ್ಕರಿಸಿದ ಕೇಂದ್ರ

ಆದರೆ ಇದೇ ಸಮಯದಲ್ಲಿ ಹೊಸ ಭರವಸೆಯನ್ನು ನೀಡಿರುವ ಯಡಿಯೂರಪ್ಪ, ಇನ್ನು ಮೂರು-ನಾಲ್ಕು ದಿನಗಳ ಒಳಗಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಪರಿಹಾರ ಅನುದಾನ ನೀಡಲಿದೆ ಎಂದು ಹೇಳಿದ್ದಾರೆ.

English summary
State Government does not have enough money said CM Yediyurappa. He said we are hoping that in two three days we may get money from central government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X