CP Yogeshwar: ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ ಗ್ಯಾರಂಟಿ: ಸಿಪಿ ಯೋಗೇಶ್ವರ್ ಭವಿಷ್ಯ
ಆನೇಕಲ್ ಮಾರ್ಚ್ 18: ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮೇಲ್ಮನೆ ಸದಸ್ಯ ಸಿಪಿ ಯೋಗೇಶ್ವರ್ ಭವಿಷ್ಯ ನುಡಿದಿದ್ದು, ಆಡಳಿತಾರೂಢ ಕಾಂಗ್ರೆಸ್ ವಿರುದ್ಧವೇ ಪಕ್ಷದ ಶಾಸಕರಿದ್ದು ಅದು ಬೂದಿ ಮುಚ್ಚಿದ ಕೆಂಡದಂತಿದೆ ಎಂದು ಹೇಳಿದರು.
ಅವರು ಅನೇಕಲ್ ತಾಲೂಕಿನ ಚಂದಾಪುರದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಸಮಾವೇಶ ಹಾಗೂ ಪ್ರಚಾರ ಸಭೆಯಲ್ಲಿ ಸಹಸ್ರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಈ ಬಾರಿ 400+ ಎಂಬ ಧ್ಯೆಯದೊಂದಿಗೆ ದೇಶಾದ್ಯಂತ ಬಿಜೆಪಿ ಹಾಗೂ ಎನ್‌ಡಿಎ ಕಾರ್ಯ ಕರ್ತರು ಟೊಂಕ ಕಟ್ಟಿ ಓಡಾಡುತ್ತಿದ್ದಾರೆ.

ನಮ್ಮ ರಾಜ್ಯದಿಂದ 28 ಕ್ಷೇತ್ರಗಳನ್ನೂ ಬಿಜೆಪಿ ಮಡಿಲಿಗೆ ತುಂಬಬೇಕೆಂದು ಕಾರ್ಯಕರ್ತರನ್ನು ಹುರಿದುಂಬಿಸಿದರು. ಬಿಜೆಪಿ ಶಾಸಕ ಮುನಿರತ್ನ ಮಾತನಾಡಿ, ಡಾ.ಮಂಜುನಾಥ್‌ರವರು ಯಶಸ್ವಿ ವೈದ್ಯರಾಗಿದ್ದು, ತಮ್ಮ ಪಾಲಿನ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿ ರಾಜ್ಯದ ಜನ ಮಾನಸದಲ್ಲಿ ನೆಲೆಸಿದ್ದಾರೆ.
ಕರ್ತವ್ಯ ನಿಷ್ಠೆಗೆ ಹೆಸರಾಗಿರುವ ಅವರು ಸಿದ್ದರಾಮಯ್ಯನವರ ಆದಿಯಾಗಿ ಎಲ್ಲಾ ಮುಖಂಡರರಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ರವರ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಿ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಅವರು ಇನ್ನೂ ಹೆಚ್ಚಿನ ಸ್ಥಾನ ಪಡೆದು ದೇಶಾಸ್ಯಂತ ಬಡ ಜನಗಳ ಸೇವೆ ಸಲ್ಲಿಸಲೂ ಅವಕಾಶ ಒದಗಿಬರಬಹದೆಂದು ಹೇಳಿದರು.
ಇನ್ನೂ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಸವಾವಲೇನಿದ್ದರೂ ಸ್ವೀಕರಿಸಿ ನಾನೇ ರಾಮನಗರಕ್ಕೂ, ಕನಕಪುರಕ್ಕೋ ಬರುವೆ ಎಂದವರು ಸವಾಲೆಸೆದರು. ಇನ್ನು, ಮಾಗಡಿ ಬಾಲಕೃಷ್ಣರವರ ಬಗ್ಗೆ ಮಾತನಾಡಿ ರಾಜಕಾರಣ ಒಬ್ಬರ ಸ್ವತ್ತಲ್ಲ. ಕ್ಷೇತ್ರ ಪರಿಚಯ, ಸೇವೆ ಮಾಡುವುದು ಅವರ ಇಚ್ಚಾಶಕ್ತಿಯನ್ನು ಅಲವಂಬಿಸುತ್ತದೆ. ತೆಗಳಿಕೆ ಹೊಗಳಿಕೆ ಮಾನದಂಡವಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಇದೇ ವೇಳೆ ಕೆಪಿ ರಾಜು ಬಿಜೆಪಿ ಸೇರ್ಪಡೆಯಾದರು.
ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಮಾಡದೇ ಈಗಲೂ ನನಗೆ ಬೆಂಬಲ ನೀಡಿದ್ದಾರೆಂಬ ಡಿಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ತಿರುಗೇಟು ನೀಡಿದ್ದಾರೆ. 5 ವರ್ಷದ ಹಿಂದೆ ನಾನು ಸ್ಪರ್ಧೆ ಮಾಡಿದ್ದರೆ ಡಿ.ಕೆ.ಸುರೇಶ್ ಗೆಲ್ತಿರಲಿಲ್ಲ. ಹಾಗಾಗಿ ಈ ಬಾರಿ ಬುಡಸಮೇತ ತೆಗೆಯಬೇಕು ಅಂತ ಮಂಜುನಾಥ್ ರನ್ನ ತಂದಿದ್ದೇವೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಯೋಗೇಶ್ವರ್ ಹೇಳಿದರು.
ನಾನು ಪಾರ್ಲಿಮೆಂಟ್ಗೆ ಹೋಗಬಾರದೆಂದು ನಿರ್ಧಾರ ಮಾಡಿದ್ದೇನೆ. ರಾಜ್ಯ ರಾಜಕೀಯದಲ್ಲಿ ಇರಬೇಕೆಂದು ನನ್ನ ನಿಲುವು. ಡಿ.ಕೆ.ಸುರೇಶ್ ಹತಾಶೆಯಿಂದ ಮಾತನಾಡ್ತಿದ್ದಾರೆ. ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ ಎಂದು ಹೇಳಿದರು.












Click it and Unblock the Notifications