ರಾಜ್ಯ ಸರ್ಕಾರದಿಂದ ಹಣ್ಣು, ತರಕಾರಿ ಬೆಳೆಗಾರರಿಗೆ 15 ಸಾವಿರ ರೂಪಾಯಿ!

ಬೆಂಗಳೂರು, ಮೇ.14: ನೊವೆಲ್ ಕೊರೊನಾ ವೈರಸ್ ಕಾಟ ಹಾಗೂ ಭಾರತ ಲಾಕ್ ಡೌನ್ ನಡುವೆ ಸ್ವಾವಲಂಬಿ ದೇಶ ನಿರ್ಮಾಣಕ್ಕಾಗಿ 20 ಲಕ್ಷ ಕೋಟಿ ರೂಪಾಯಿ ಘೋಷಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರ ಸಹ ಕೈಜೋಡಿಸಿದೆ.

ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲ ಸಚಿವರ ಜೊತೆಗೆ ಚರ್ಚೆಸಿ ಎಲ್ಲ ವಲಯಗಳ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಪ್ಯಾಕೇಜ್ ಒಂದನ್ನು ಘೋಷಿಸಿದ್ದಾರೆ.

ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕೆಳ ಮತ್ತು ಮಧ್ಯಮ ವರ್ಗವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೆಚ್ಚುವರಿ ಪ್ಯಾಕೇಜ್ ಘೋಷಿಸಿದ್ದಾರೆ. ಮೊದಲು 1610 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದ ಸಿಎಂ, ಈ ಪ್ಯಾಕೇಜ್ ಮೊತ್ತವನ್ನು 1,772ಕ್ಕೆ ಹೆಚ್ಚಿಸಿದ್ದಾರೆ.

ರಾಜ್ಯ ಸರ್ಕಾರದಿಂದ 162 ಕೋಟಿ ರೂ. ಹೆಚ್ಚುವರಿ ಪ್ಯಾಕೇಜ್

ರಾಜ್ಯ ಸರ್ಕಾರದಿಂದ 162 ಕೋಟಿ ರೂ. ಹೆಚ್ಚುವರಿ ಪ್ಯಾಕೇಜ್

ಕಳೆದ ಮೇ.06ರಂದು ಕರ್ನಾಟಕ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಅಗಸರು, ಆಟೋ ಮತ್ತು ಟ್ಯಾಕ್ಸಿ ಚಾಲಕರು, ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳ ಜನರಿಗೆ ರಾಜ್ಯ ಸರ್ಕಾರ 1,610 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಇದರ ಬೆನ್ನಲ್ಲೇ ಇಂದು 162 ಕೋಟಿ ಹೆಚ್ಚುವರಿ ಪ್ಯಾಕೇಜ್ ಘೋಷಿಸಲಾಗಿದೆ.

ಹಣ್ಣು ಬೆಳಗಾರರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ

ಹಣ್ಣು ಬೆಳಗಾರರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ

ರಾಜ್ಯದಲ್ಲಿ ಹಣ್ಣು ಬೆಳೆಯುವ ರೈತರಿಗೆ ಅನುಕೂವ ಕಲ್ಪಿಸುವ ನಿಟ್ಟಿನಲ್ಲಿ ಆರ್ಥಿಕ ನೆರವು ಘೋಷಿಸಲಾಗಿದೆ. ಏಳು ಬಗೆಯ ಹಣ್ಣು ಬೆಳೆಯುವ ರೈತರಿಗೆ ಹೆಕ್ಟರ್ ಗೆ 15 ಸಾವಿರ ರೂಪಾಯಿ ಘೋಷಣೆ ಮಾಡಲಾಗಿದೆ. ಹಾಗಿದ್ದಲ್ಲಿ ರಾಜ್ಯ ಸರ್ಕಾರವು ಗುರುತಿಸಿದ ಏಳು ಬಗೆ ಹಣ್ಣುಗಳ ಪಟ್ಟಿ ಇಲ್ಲಿದೆ.

ಪ್ಯಾಕೇಜ್ ಅಡಿಯಲ್ಲಿ ಗುರುತಿಸಿರುವ ಹಣ್ಣು:

- ಬಾಳೆ

- ಪಪ್ಪಾಯಿ

- ಟೇಬಲ್ ದ್ರಾಕ್ಷಿ

- ಅಂಜೂರಾ

- ಅನಾನಸ್

- ಕಲ್ಲಂಗಡಿ/ ಕರ್ಜೂರಾ

- ಬೋರೆ/ ಬೆಣ್ಣೆ ಹಣ್ಣು

10 ಬಗೆಯ ತರಕಾರಿಗೆ ಬೆಳೆಗಾರರಿಗೆ ಪ್ಯಾಕೇಜ್

10 ಬಗೆಯ ತರಕಾರಿಗೆ ಬೆಳೆಗಾರರಿಗೆ ಪ್ಯಾಕೇಜ್

ಹಣ್ಣು ಬೆಳೆಗಾರರು ಅಷ್ಟೇ ಅಲ್ಲದೇ ತರಕಾರಿ ಬೆಳೆಗಾರರಿಗೆ ರಾಜ್ಯ ಸರ್ಕಾರವು ಪ್ಯಾಕೇಜ್ ಘೋಷಿಸಿದೆ. 10 ಬಗೆಯ ತರಕಾರಿಗಳನ್ನು ಬೆಳೆಯುವ ರೈತರಿಗೆ ಹೆಕ್ಟರ್ ಗೆ 15 ಸಾವಿರ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ. ರಾಜ್ಯ ಸರ್ಕಾರವು ಗುರುತಿಸಿದ 10 ಬಗೆ ತರಕಾರಿಗಳ ಪಟ್ಟಿ ಇಲ್ಲಿದೆ.

ಪ್ಯಾಕೇಜ್ ಅಡಿಯಲ್ಲಿ ಗುರುತಿಸಿರುವ ತರಕಾರಿ:

- ಟೊಮ್ಯಾಟೊ

- ಈರುಳ್ಳಿ

- ಕ್ಯಾರೆಟ್

- ಹಸಿರು ಮೆಣಸಿನಕಾಯಿ

- ದಪ್ಪ‌ ಮೆಣಸಿನಕಾಯಿ

- ಹೂ ಕೋಸು

- ಎಲೆ ಕೋಸು

- ಸಿಹಿ ಕುಂಬಳಕಾಯಿ

- ಬೂದು ಕುಂಬಳಕಾಯಿ

ಕೈಮಗ್ಗ, ಹ್ಯಾಂಡ್ ಲೂಮ್ ಕಾರ್ಮಿಕರಿಗೆ 2 ಸಾವಿರ

ಕೈಮಗ್ಗ, ಹ್ಯಾಂಡ್ ಲೂಮ್ ಕಾರ್ಮಿಕರಿಗೆ 2 ಸಾವಿರ

ಇನ್ನು, ರಾಜ್ಯದಲ್ಲಿ ಇರುವ 162 ಲಕ್ಷ ವಿದ್ಯುತ್ ಚಾಲಿತ ಕೈಮಗ್ಗ ಮತ್ತು ಹ್ಯಾಡ್ ಲೂಮ್ ಘಟಕಗಳಲ್ಲಿ ಕೆಲಸ ಮಾಡುವ ಪ್ರತಿ ಕಾರ್ಮಿಕರಿಗೆ 2,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರವು 25 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+