ಕರ್ನಾಟಕ ರಾಜ್ಯದ ಕ್ರೈಂ ಸುದ್ದಿಗಳ ಸಂಗ್ರಹ

ನೆಲಮಂಗಲ, ಅ.1: ರಾಷ್ಟ್ರೀಯ ಹೆದ್ದಾರಿ 4ರ ಸರ್ವೀಸ್ ರಸ್ತೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ದುರ್ಮರಣಕ್ಕೀಡಾಗಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನ ರಾಮ ಮೂರ್ತಿನಗರದ ಶ್ರೀನಿವಾಸ್, ವೆಂಕಟೇಶ್ ಗೌಡ, ಅಸಯ್ಯ ಮೃತಪಟ್ಟವರು. ಗಾಯಾಳುಗಳನ್ನು ಕಿರಣ್ ಹಾಗೂ ಚಂದ್ರ ಎಂದು ಗುರುತಿಸಲಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ನಸುಕಿನ ಜಾವ ಈ ಐವರು ಫೋರ್ಡ್ ಕಾರಿನಲ್ಲಿ ತುಮಕೂರು ಕಡೆಯಿಂದ ಸರ್ವೀಸ್ ರಸ್ತೆಯಲ್ಲಿ ಬರುತ್ತಿದ್ದರು.

ಪದ್ಮಾವತಿ ಕಲ್ಯಾಣ ಮಂಟಪ ಮುಂಭಾಗ ನಿಂತಿದ್ದ ಮಹಾರಾಷ್ಟ್ರ ನೋಂದಣಿಯ ಲಾರಿಗೆ ರಭಸವಾಗಿ ಕಾರು ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದಿಂದಾಗ ಸರ್ವೀಸ್ ರಸ್ತೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಸಬ್‌ಇನ್ಸ್‌ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಪಾರ್ಕಿಂಗ್ ಹಾವಳಿ: ರಾಷ್ಟ್ರೀಯ ಹೆದ್ದಾರಿಯ ಅಂಚೆಪಾಳ್ಯ, ಮಾದನಾಯಕನಹಳ್ಳಿ ಮತ್ತು ಅಡಕಮಾರನಹಳ್ಳಿಗಳ ಎರಡೂ ಬದಿಯ ಸರ್ವೀಸ್ ರಸ್ತೆಯಲ್ಲಿ ರಾತ್ರಿ ಹಾಗೂ ಮುಂಜಾನೆ ವೇಳೆ ಸಾಲುಗಟ್ಟಿ ಲಾರಿಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಪದೇ ಪದೇ ಇಂತಹ ಭೀಕರ ಅಪಘಾತಗಳು ಸಂಭವಿಸುತ್ತಿವೆ.

ಲಾರಿಗಳನ್ನು ಹೇಗೆಂದರೆ ಹಾಗೆ ನಿಲ್ಲಿಸುತ್ತಿದ್ದು, ರಾತ್ರಿ ವೇಳೆ ನಿದ್ದೆ ಮಂಪರಿನಲ್ಲಿ ವಾಹನ ಚಲಾಯಿಸುವ ಮಂದಿ ನಿಯಂತ್ರಣ ತಪ್ಪಿ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.ಉಡುಪಿ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಇನ್ನಿತರ ಕಡೆಗಳಿಂದ ಬಂದಿರುವ ಕ್ರೈಂ ವರದಿಗಳ ಸಂಗ್ರಹ ಮುಂದಿದೆ ಓದಿ.

ಕೋಲಾರ: ರಸ್ತೆ ಅಪಘಾತ

ಕೋಲಾರ: ರಸ್ತೆ ಅಪಘಾತ

ರಸ್ತೆಯಲ್ಲಿ ನಿಂತಿದ್ದ ಟ್ರೈಲರ್ ವಾಹನಕ್ಕೆ ಆಟೋ ಡಿಕ್ಕಿ ಹೊಡೆದು ಸ್ಥಳದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಾಳಹಸ್ತಪುರ ಮತ್ತು ವಡಗೂರ ಗೇಟ್ ಮಧ್ಯದಲ್ಲಿ ರಸ್ತೆಯ ಮೇಲೆ ನಿಲ್ಲಿಸಿದ್ದ ಟ್ರೈಲರ್ ವಾಹನ ಸಂ. ಎನ್.ಎಲ್-01-ಡಿ-0765 ವಾಹನಕ್ಕೆ ಕೆಎ-07-ಎ-0881 ಆಟೋ ವನ್ನು ಅದರ ಚಾಲಕ ಕೃಷ್ಣಪ್ಪ ಎಂಬುವರು ಡಿಕ್ಕಿ ಹೊಡೆಸಿದ್ದು ಇದರ ಪರಿಣಾಮವಾಗಿ ಆಟೋ ಚಾಲಕ ಕೃಷ್ಣಪ್ಪ ರವರು ಸ್ಥಳದಲ್ಲೆ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಕುಣಿಗಲ್

ಕುಣಿಗಲ್

ಹೆಚ್ಚಿನ ವರದಕ್ಷಿಣೆ ತರಲು ನಿರಾಕರಿಸಿದ ಪತ್ನಿ ಮೇಲೆ ಪತಿ ಆಸಿಡ್ ಸುರಿದು ಗಾಯಗೊಳಿಸಿರುವ ಘಟನೆ ತಾಲೂಕಿನ ಯಲಚವಾಡಿ ಗ್ರಾಮದಲ್ಲಿ ನಡೆದಿದೆ.

ಮಂಜುಳಾ ಎಂಬಾಕೆಯೇ ತನ್ನ ಪತಿ ಗಿರೀಶ್ ನ ಆಸಿಡ್ ದಾಳಿಯಿಂದ ಗಾಯಗೊಂಡಿರುವಾಕೆ. ಕಳೆದ ಮಾರ್ಚ್ ನಲ್ಲಿಗಿರೀಶ್ ನನ್ನು ಮದುವೆಯಾಗಿದ್ದ ಮಂಜುಳಾಗೆ ಒಂದು ಗಂಡು ಮಗುವಿದೆ.

ಮದುವೆಯಾದ ಆರು ತಿಂಗಳು ಚೆನ್ನಾಗಿದ್ದ ಪತಿ ಮನೆಯವರು ನಂತರ ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದ್ದ. ತವರಿಗೆ ಹೋಗಿದ್ದ ಮಂಜುಳಾಗೆ ಅಲ್ಲಿಯೂ ಹಿಂಸೆ ನೀಡಿದ್ದ.

ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಮುಚ್ಚಳಿಕೆ ಬರೆದುಕೊಟ್ಟು ಇದೇ ಸೆ.14ರಂದು ಮನೆಗೆ ಕರೆದುಕೊಂಡು ಬಂದಿದ್ದ. ಸೆ.16ರಂದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದ. ಸೆ.17ರಂದು ಮಂಜುಳಾಳ ಹೊಟ್ಟೆ ಮೇಲೆ ಆಸಿಡ್ ಸುರಿದು ಗಿರೀಶ್ ತನ್ನ ಕ್ರೌರ್ಯ ಮೆರೆದಿದ್ದಾನೆ.

ದಾವಣಗೆರೆ

ದಾವಣಗೆರೆ

ದಾವಣಗೆರೆ ನಗರದ ಸಿದ್ದವೀರಪ್ಪ ಬಡಾವಣೆಯ 11 ನೇ ಕ್ರಾಸ್ನ ಮನೆಯಿಂದ ಸಿದ್ದವೀರಪ್ಪ ಬಡಾವಣೆಯ 10 ನೇ ಕ್ರಾಸ್ನಲ್ಲಿರುವ ಶಟ್ಟರ ಕಿರಾಣಿ ಅಂಗಡಿಗೆ ಮಕ್ಕಳಿಗೆ ಕಾರ ಮಂಡಕ್ಕಿಯನ್ನು ತರಲು ಹೋಗಿ ವಾಪಾಸ್ ಸಿದ್ದವೀರಪ್ಪ ಬಡಾವಣೆಯ 11ನೇ ಕ್ರಾಸ್ ತಮ್ಮ ಮನೆಯ ಸಮೀಪ ಸಂಜೆ ಸುಮಾರು 6-30 ಗಂಟೆ ಸಮಯದಲ್ಲಿ ಬರುತ್ತಿರುವಾಗ...

ಯಾರೋ ಇಬ್ಬರು ವ್ಯಕ್ತಿಗಳು ಒಂದು ಕಪ್ಪು ಬಣ್ಣದ ಮೋಟಾರ್ ಸೈಕಲ್ನಲ್ಲಿ ಬಂದು ಏಕಾಏಕಿ ಮೋಟಾರ್ ಸೈಕಲ್ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿ ಪಿರ್ಯಾದಿ ಶ್ರೀಮತಿ ಎಸ್.ಎಸ್.ಪ್ರೇಮಾ ಇವರ ಕೊರಳಿಗೆ ಕೈಹಾಕಿ ಕೊರಳಲಿದ್ದ ಸುಮಾರು 45 ಗ್ರಾಂ ತೂಕದ ಎರಡು ಎಳೇಯ ಮೂಡಿ ಮಾಡಲ್ ಬಂಗಾರದ ಮಾಂಗಲ್ಯ ಸರ ಎಗರಿಸಿರುತ್ತಾರೆ. ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.
ಚಿಕ್ಕಮಗಳೂರು

ಚಿಕ್ಕಮಗಳೂರು

ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 357/2013 - ಕಲಂ: 302 498(ಎ) 304(ಬಿ) ಐಪಿಸಿ - ಸೆ.30ರಂದು 1200 ಗಂಟೆಯಲ್ಲಿ ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿ ವಾಸವಾಗಿರುವ ಪ್ರಶಾಂತ್ ರಾಜ್ ರವರ ಹೆಂಡತಿ ಪುಷ್ಪ ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ.

ಶ್ರೀಮತಿ ಕಮಲಮ್ಮ ಇವರು ಬಂದು ನೋಡಲಾಗಿ ಪಿರ್ಯಾದುದಾರರ ಅಳಿಯ ಆರೋಪಿ ಪ್ರಶಾಂತ್ ರಾಜ್ ರವರ ವಾಸದ ಮನೆಯ ಹಿಂದಿನ ಬಚ್ಚಲುಮನೆಯಲ್ಲಿ ಅಳವಡಿಸದ ಕಬ್ಬಿಣದ ಪೈಪಿಗೆ ಪಿರ್ಯಾದಿ ಮಗಳು ಪುಷ್ಪ ನೇಣಿನಲ್ಲಿ ನೇತಾಡುತ್ತ ಮೃತಪಟ್ಟಿದ್ದು ಈ ಬಗ್ಗೆ ಪಿರ್ಯಾದುದಾರರು ಮೃತಳ ಗಂಡ ಪ್ರಶಾಂತ ರಾಜು, ಅತ್ತೆ ಕಮಲಮ್ಮ, ಮಾವ ಜವರರಾಜು, ರವರ ಮಗಳು ಸುಜಾತ, ಹಾಗೂ ಅಳಿಯ ವೆಂಕಟಾಚಲರಾಜು, ಮೊಮ್ಮಗಳು ಕಾವ್ಯ ಸೇರಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದು ಈ ದಿನ ಯಾವುದೋ ರೀತಿಯಲ್ಲಿ ಕೊಲೆ ಮಾಡಿ ನೇಣು ಬಿಗಿದು ನೇತು ಹಾಕಿರುತ್ತಾರೆ ಎಂದು ದೂರಲಾಗಿದೆ.

ಉಡುಪಿ

ಉಡುಪಿ

ಅಜೆಕಾರು : ಪಿರ್ಯಾದಿ ಚೇತನ ಭಂಡಾರಿ ಎಂಬವರ ತಂದೆ ಜಯಂತ ಭಂಡಾರಿ (55)ರವರು ವಿಪರೀತ ಮದ್ಯ ಸೇವನೆಯ ಚಟದವರಾಗಿದ್ದು, ಕುಡಿತದ ಚಟ ಬಿಡಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಲ್ಲಿ ಯಾವುದೋ ರಾಸಾಯನಿಕ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಚಿಕಿತ್ಸೆಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಸೇರಿಸದರೂ ಚಿಕಿತ್ಸೆ ಫಲಕಾರಿಯಾಗದೇ ಸೆ.30ರಂದು ಸಂಜೆ ಮೃತ ಪಟ್ಟಿರುವುದಾಗಿದೆ.

ಈ ಬಗ್ಗೆ ಚೇತನ ಭಂಡಾರಿರವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 14/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+