ಕ್ರೈಂ: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್, ಇನ್ನಿತರೆ ಸುದ್ದಿ
ಬೆಂಗಳೂರು, ನ.18: ಮುಕ್ತ ವಿಶ್ವ ವಿದ್ಯಾಲಯದ ಪರೀಕ್ಷೆ ಬರೆದು ವಾಪಸ್ ಆಗುತ್ತಿದ್ದಾಗ ವಿದ್ಯಾರ್ಥಿಯೊಬ್ಬಳನ್ನು ಕಿಡ್ನಾಪ್ ಮಾಡಿರುವ ಘಟನೆ ಹಾಸನ ನಗರದಲ್ಲಿ ವರದಿಯಾಗಿದೆ.
ಹಾಸನ ನಗರ ದ ವಿ.ಇ.ಜಿ.ಕಾಲೇಜ್ ಬಳಿ ವಿದ್ಯಾರ್ಥಿನಿ ಮುಕ್ತ ವಿವಿ ಪರೀಕ್ಷೆ ಮುಗಿಸಿ ಬರುತ್ತಿದ್ದಳು. ಆಗ ಮೂವರು ದುಷ್ಕರ್ಮಿಗಳು ಬಂದು ಆಕೆಯನ್ನು ಏಕಾಏಕಿ ಬಂದು ಕಿಡ್ನಾಪ್ ಮಾಡಿದ್ದಾರೆ. ಮಾರುತಿ ಓಮ್ನಿಯಲ್ಲಿ ಬಂದು ದುಷ್ಕರ್ಮಿಗಳು ವಿದ್ಯಾರ್ಥಿನಿಯನ್ನು ಬಲವಂತವಾಗಿ ಬಂದು ಕರೆದೊಯ್ದಿದ್ದಾರೆ ಎಂಬ ದೃಶ್ಯಾವಳಿ ಅಲ್ಲಿಯೇ ಇದ್ದ ಆಕ್ಸಸ್ ಬ್ಯಾಂಕ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದುಷ್ಕರ್ಮಿಗಳು ಯಾರು, ಯುವತಿ ಕಿಡ್ಯಾಪ್ ಗೆ ಕಾರಣವೇನು ಎಬುದು ಈ ವರೆಗೆ ತಿಳಿದುಬಂದಿಲ್ಲ. ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ ರಶ್ಮಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ಉಡುಪಿ
ಪಿರ್ಯಾದಿ ಎನ್. ನಾರಾಯಣ ಶೆಟ್ಟಿ, ಕಾರ್ಯದರ್ಶಿ, ಗ್ರಾಮ ಪಂಚಾಯತ್, ಕೊಲ್ಲೂರು ಗ್ರಾಮ, ಕುಂದಾಪುರರವರಿಗೆ ಕೊಲ್ಲೂರು ಗ್ರಾಮ ಅರಣ್ಯ ವಸತಿಗೃಹದ ಹಿಂದುಗಡೆ ಒಬ್ಬ ವ್ಯಕ್ತಿ ನೇಣು ಹಾಕಿಕೊಂಡು ಮೃತನಾಗಿರುತ್ತಾನೆ ಎಂದು ಮಾಹಿತಿ ಬಂದಂತೆ ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ ಮರದ ಕೊಂಬೆಗೆ ಕುತ್ತಿಗೆಗೆ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ಗಂಡಸಿನ ಮೃತದೇಹ ಕಂಡು ಬಂದಿದೆ.
ಸುಮಾರು 60-65 ವರ್ಷ ಪ್ರಾಯವಾಗಿದ್ದು, ಬಿಳಿ ಬಣ್ಣದ ಪಂಚೆ ಹಾಗು ಕ್ರೀಂ ಬಣ್ಣದ ಟೀ ಶರ್ಟ್ ಧರಿಸಿದ್ದು, ಆತನ ಪರಿಚಯವಿಲ್ಲದೇ ಇದ್ದು, ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡಿರುವಂತೆ ಕಂಡುಬರುತ್ತದೆ ಎಂಬುದಾಗಿ ಎನ್. ನಾರಾಯಣ ಶೆಟ್ಟಿರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 09/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಶಿವಮೊಗ್ಗ
ಹೊಳೆಹೊನ್ನೂರು ಠಾಣೆ ಅಡಿಕೆ ಕಳ್ಳತನ ಪ್ರಕರಣ: ಪಿರ್ಯಾದಿದಾರರಾದ ಹೇಮಣ್ಣ ವಾಸ ಮಲ್ಲಪ್ಪ ಕೊಪ್ಪ ಮನೆಯ ಮುಂದೆ 10 ಟಾರ್ಪಲ್ಗಲ್ಲಿ ಅಡಿಕೆಯನ್ನ ಒಣಗಿಸಲು ಮನೆಯ ಮುಂದೆ ಹಾಕಿದ್ದು ಯಾರೋ ಕಳ್ಳರೂ ಮೂರು ಟಾರ್ಪಲ್ ನಲ್ಲಿದ್ದ ಸುಮಾರು 80 ಕೆ ಜಿ ತೊಕದಷ್ಟು ಅಡಿಕೆಯನ್ನು ಕಳ್ಳತನ ಮಾಡಿಕೊಂಡಿ ಹೋಗಿರುತ್ತಾರೆ ಒಟ್ಟು ಬೆಲೆ 49,500 ರೂ ಆಗಿರುತ್ತದೆ

ಕೋಲಾರ
ದೇವಾಲಯದ ಬೀಗ ಹೊಡೆದು ಒಳ ಪ್ರವೇಶಿಸಿ ಹುಂಡಿಯನ್ನು ಹೊಡೆದು ಅದರಲ್ಲಿದ್ದ ರೂ. 10,000 ಗಳನ್ನು ಕಳವು ಮಾಡಿರುವ ಘಟನೆ ಶ್ರೀನಿವಾಸಪುರ ತಾಲೂಕು ಎನುಮಾರೇಪಲ್ಲಿ ಗೇಟ್ ಬಳಿಯ ಪಂಚಮುಖಿ ಆಂಜನೇಯ ದೇವಾಲಯದಲ್ಲಿ ಸಂಭವಿಸಿರುತ್ತದೆ. ದೇವಾಲಯದ ಕಾರ್ಯದರ್ಶಿಗಳಾದ ಶ್ರೀನಿವಾಸ.ಜಿ.ಪಿ ರವರು ದೂರು ನೀಡಿರುತ್ತಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ಚಿಕ್ಕಮಗಳೂರು
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 410/2013 - ಕಲಂ: 379 ಐಪಿಸಿ ಸಹಿತ 86-87 ಕೆಎಫ ಆಕ್ಟ್ ಕಳೆದ ರಾತ್ರಿ ವೇಳೆಯಲ್ಲಿ ಹೋಟೆಲ್ ಗೇಟ್ ವೇ ಆವರಣದಲ್ಲಿ ನೆಟ್ಟು ಬೆಳಸಿದ್ದ 2 ಗಂಧದ ಮರಗಳನ್ನು ಯಾರೂ ಅಪರಿಚಿತ ವ್ಯಕ್ತಿಗಳು ಕಡಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಗಂಧದ ಮರಗಳ ಬೆಲೆ ಅಂದಾಜು 10000/- ರೂ ಗಳಿಂದ 15000/- ರೂ ಗಳಾಗಬಹುದು ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಹೋಟೆಲ್ ನ ಮ್ಯಾನೇಜರ್ ಮುನ್ವಿಂದ್ರ ಇವರು ದೂರು ನೀಡಿರುವುದಾಗಿರುತ್ತೆ.












Click it and Unblock the Notifications