ಭಜರಂಗ ದಳ ಕಾರ್ಯಕರ್ತನ ಕಿರುಕುಳಕ್ಕೆ ಪತ್ನಿ ಸಾವು
ಮಂಗಳೂರು , ಡಿ.18: ಗಂಡನ ಮನೆಯವರು ನೀಡುತ್ತಿದ್ದ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದ ಮಂಗಳೂರು ನಗರದ ಪಂಪ್ ವೆಲ್ ನಿವಾಸಿ ನವ ವಿವಾಹಿತ ಮಹಿಳೆಯೊಬ್ಬರು ಮಂಗಳವಾರ ಸಾವನ್ನಪ್ಪಿದ್ದಾರೆ. ವರದಕ್ಷಿಣೆ ಪೀಡೆಗೆ ಬಲಿಯಾದ ನವ ವಿವಾಹಿತೆಯನ್ನು ಟಿಎಂ ಸುಮಿತ್ರಾ ಎಂದು ಗುರುತಿಸಲಾಗಿದೆ.
ಡಿ.9ರಂದು 100ಕ್ಕೂ ಅಧಿಕ ನಿದ್ದೆ ಮಾತ್ರೆಗಳನ್ನು ಸೇವಿಸಿದ್ದ ಸುಮಿತ್ರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪೊಳಲಿ ಮೂಲದವರಾದ ಸುಮಿತ್ರಾ ಆವರು ಕಳೆದ ಮೇ ತಿಂಗಳಲ್ಲಿ ಪಂಪ್ ವೆಲ್ ನ ಭಜರಂಗ ದಳದ ಕಾರ್ಯಕರ್ತರಾದ ಸುನಿಲ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದರು. ಮದುವೆಯ ಸಂಧರ್ಭದಲ್ಲಿ ಸುಮಿತ್ರಾ ಮನೆಯವರು ಹಣ ಮತ್ತು ಬಂಗಾರವನ್ನು ನೀಡಿದ್ದರು .
ಸುನಿಲ್ ಕುಮಾರ್ ಮತ್ತು ಮನೆಯವರು ನಿರಂತರವಾಗಿ ನೀಡಿದ ವರದಕ್ಷಿಣೆ ಕಿರುರುಳ ನೀಡಿದ್ದರಿಂದ ಮಾನಸಿಕ ಹಾಗೂ ದೈಹಿಕವಾಗಿ ಬಳಲಿದ ಸುಮಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸುಮಿತ್ರಾ ಅವರು ಸಹೋದರ ಮೋಹನ ಮತ್ತು ಮನೆಯವರು ಸುನಿಲ್ ಕುಮಾರ್ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ.
ಚಿತ್ರದುರ್ಗ, ದಾವಣಗೆರೆ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಚಿತ್ರದುರ್ಗ
ಹಿರಿಯೂರು, ಡಿಸೆಂಬರ್. 17; ನಂ: ಕೆಎ-16/ಬಿ-4390 ನೇ ಲಗೇಜ್ ಆಟೋ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆಯಲ್ಲಿ ಪಲ್ಟಿ ಹೊಡೆಸಿದ ಪರಿಣಾಮ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಚಾಲಕ ಸೇರಿ ಆರು ಜನರಿಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿರುವ ಘಟನೆ ತಾಲ್ಲೂಕಿನ ಹೂವಿನಹೊಳೆ ಈಶ್ವರಗೆರೆ ಮಧ್ಯದ ರಸ್ತೆಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ.
ಕೋಡಿಹಳ್ಳಿ ಗ್ರಾಮದ ಪೂಜಾರಿ ಕೃಷ್ಣಪ್ಪ (45) ಮೃತಪಟ್ಟ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ವೆಂಕಟೇಶ (40) ಹಾಗೂ ಚಾಲಕ ಯೋಗರಾಜ ಮತ್ತು ಇತರೆ ನಾಲ್ಕು ಜನರಿಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿರುತ್ತವೆ. ಈ ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ದಾವಣಗೆರೆ
ಹದಡಿ ಪೊಲೀಸ್ ಠಾಣೆ ಗುನ್ನೆನಂ: 200/2013, ಕಲಂ: ಹುಡುಗ ಕಾಣೆ. ಡಿ.17ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿ ಟಿ.ರೇವಪ್ಪ ತಂದೆ ನೀಲಪ್ಪ 60 ವರ್ಷ ಹಾಲುಮತ ಜನಾಂಗ ಜಿರಾಯ್ತ ಕೆಲಸ ವಾಸ ಲೋಕಿಕೆರೆ ಗ್ರಾಮ ದಾವಣಗೆರೆ ತಾ|| ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ:
ನಮ್ಮ ದೊಡ್ಡಪ್ಪನ ಮಗನಾದ ನಿಂಗಪ್ಪ, 55ವರ್ಷ ಇವರು ತಮ್ಮ ಹೆಂಡತಿ ಮಕ್ಕಳೊಂದಿಗೆ ಲೋಕಿಕೆರೆ ಗ್ರಾಮದಲ್ಲಿ ವಾಸವಾಗಿದ್ದು ಡಿ.16 ರಂದು ಮಧ್ಯರಾತ್ರಿ ತಮ್ಮ ಮನೆಯಿಂದ ಯಾರಿಗೂ ಹೇಳದೆ ಎಲ್ಲಿಗೋ ಎದ್ದು ಹೋಗಿದ್ದು ನಾವುಗಳು ಈ ಬಗ್ಗೆ ಎಲ್ಲಾ ಕಡೆಗಳಲ್ಲಿ ಇಲ್ಲಿಯವರೆವಿಗೂ ಹುಡುಕಾಡಿದ್ದು ಎಲ್ಲೋ ಸಿಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ ದಯಮಾಡಿ ಕಾಣೆಯಾದ ದೊಡ್ಡಪ್ಪನ ಮಗನಾದ ನಿಂಗಪ್ಪನನ್ನು ಹುಡುಕಿ ಕೊಡಿ ಅಂತ ನೀಡಿದ ದೂರಿನ ಮೇರೆಗೆ ಮೇಲ್ಕಂಡಂತೆ ಕೇಸು ದಾಖಲಿಸಿಕೊಮಡು ತನಿಖೆ ಕೈಗೊಂಡಿರುತ್ತೆ.

ಶಿವಮೊಗ್ಗ
ಶಿವಮೊಗ್ಗ ಕೋಟೆ ಠಾಣೆ, ಕಳವು ಪ್ರಕರಣ ಸಾವು : ಶಿವಮೊಗ್ಗ ನಗರದ ಕರ್ನಾಟಕ ಸಂಘದ ಹತ್ತಿರದ ಜಮಾನುಲ್ಲಾ ಖಾನ್ ವಾಸ ಕೆ.ಆರ್. ಪುರಂ ರೋಡ್ ಶಿವಮೊಗ್ಗ ರವರ ಬಂಗಾರದ ಅಂಗಡಿಯ ಗೋಡೆ ಹೊಡೆದು ಸುಮಾರು 2.25.000 ರೂ ಬೆಲೆ ಬಾಳುವ ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಚಿಕ್ಕಮಗಳೂರು: ಕಳುವು ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.452/2013 - ಕಲಂ: 454 380 ಐಪಿಸಿ - ಪಿರ್ಯಾದುದಾರ ಲೋಕೇಶ್ ಕೈಮರ ವಾಸಿ ಇವರು ಕೂಲಿ ಕೆಲಸಕ್ಕೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾಗ ಮನೆಯ ಹಿಂದಿನ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳ ಪ್ರವೇಶಿಸಿ ಮನೆಯ ಒಳಗೆ ಮುಂದಿನ ಹಾಲ್ ನಲ್ಲಿ ಗಾಡ್ರೇಜ್ ಬೀರುವಿನಲ್ಲಿದ್ದ ಸುಮಾರು 16 ಗ್ರಾಂ ತೂಕದ ಒಂದು ಚಿನ್ನದ ಸರ, 2 ½ ಗ್ರಾಂ ತೂಕದ ಒಂದು ಉಂಗುರ, ಹಾಗೂ 2 ಗ್ರಾಂ ತೂಕದ ಇನ್ನೊಂದು ಉಂಗುರ ಹಾಗೂ 5.000/- ರೂ ನಗದು ಹಣವನ್ನು ಕಳ್ಳತನ ಮಾಡಿದ್ದು ಮೇಲ್ಕಂಡ ಎಲ್ಲಾ ವಸ್ತುಗಳ ಒಟ್ಟು ಅಂದಾಜು ಬೆಲೆ ಸುಮಾರು 20.000/- ರೂಗಳಾಗಬಹುದು.

ಉಡುಪಿ
ಮಟ್ಕಾ ಜುಗಾರಿ ಬರೆಯುತ್ತಿದ್ದವನ ಬಂಧನ: ಗಂಗೊಳ್ಳಿ: ಡಿ.17 ರಂದು ಸಂಜೆ 18:45 ಗಂಟೆಗೆ ಗಂಗೊಳ್ಳಿ ಸಿಂಡಿಕೇಟ್ ಬ್ಯಾಂಕ್ ಬಳಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸಿದ್ದ ಪ್ರಭಾಕರ ಪೂಜಾರಿ ದಾಕುಹಿತ್ಲು ಗಂಗೊಳ್ಳಿ ಇತನನ್ನು ವಶಕ್ಕೆ ತಗೆದುಕೊಂಡು ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ನಗದು ಹಣ 1470/- ರೂಪಾಯಿ ಮಟ್ಕಾ ಚೀಟಿ 1 ಬಾಲ್ ಪೆನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿ ಪ್ರಭಾಕರ ಪೂಜಾರಿ ತಂದೆ:ಮಂಜು ಪೂಜಾರಿ, ವಾಸ: ಕೋಟಿ ಪೂಜಾರಿ ಮನೆ, ದಾಕುಹಿತ್ಲು, ಗಂಗೊಳ್ಳಿ ಗ್ರಾಮ ಕುಂದಾಪುರರವರು ಮಟ್ಕ ಆಟದ ಬಗ್ಗೆ ಸಂಗ್ರಹಿಸಿದ ಹಣವನ್ನು ಗಣೇಶ್ ಎಂಬುವವನಿಗೆ ನೀಡುವುದಾಗಿ ತಿಳಿಸಿದ್ದು, ಅದರಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/2013 ಕಲಂ 78(1)ಎ)((III) ಕೆ ಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.












Click it and Unblock the Notifications