ಒಂದೇ ಕುಟುಂಬದ 3 ಜನ ಆತ್ಮಹತ್ಯೆ, ಇನ್ನಷ್ಟು

ಬೆಂಗಳೂರು, ಅ.31: ಒಂದೇ ಕುಟುಂಬದ 3 ಮಂದಿ ವಿಷ ಸೇವಿಸಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಿವಾಸದಲ್ಲಿ ಗುರುವಾರ ನಡೆದಿದೆ.

ನಿನ್ನೆ ಸಂಜೆ ಇವರ ಮನೆಗೆ ಮೂರ್ನಾಲ್ಕು ಜನ ಮನೆಗೆ ಬಂದು ಹೋಗಿದ್ದರು ಅವರ ಜತೆ ಜಗಳವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಇಟ್ಟುಕೊಂಡು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತರನ್ನು ಶಿವರಾಜ್ ಜೋಷಿ(36),ಉಷಾ ಜೋಷಿ(26), ನಿಖಿತಾ ಜೋಷಿ(3)ಎಂದು ಗುರುತಿಸಲಾಗಿದೆ. ಇವರಲ್ಲಿ ಬಾಲಕಿ ನೀಲಂ ಜೋಷಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಘಟನೆಗೆ ಕೌಟುಂಬಿಕ ಕಲಹವೇ ಕಾರಣವೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಧಾರವಾಡ: ಟವೇರಾ ವಾಹನ ಮತ್ತು ಸರಕಾರಿ ಬಸ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

ಮೃತರನ್ನು ಕೊಪ್ಪಳದ ದಿಡ್ಡಿಕೇರಿ ಬಡಾವಣೆಯ ನಿವಾಸಿಗಳಾದ ಮುಹಮ್ಮದ್ (30), ಅಸ್ಲಾಂ(38), ಶರ್ದುಲ್ಲಾ(28), ಜರೀನಾ(30) ಹಾಗೂ10 ಬಾಲಕ ಎಂದು ಗುರುತಿಸಲಾಗಿದೆ.

ಟವೇರಾ ವಾಹನದಲ್ಲಿ ಗೋವಾದಿಂದ ಕೊಪ್ಪಳಕ್ಕೆ ತೆರಳುತ್ತಿದ್ದಾಗ ನವಲಗುಂದ ತಾಲೂಕಿನ ಅಣ್ಣಿಗೇರಿ ಬಳಿ ಇಂದು ಬೆಳಗ್ಗಿನ ಜಾವ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಸಂಬಂಧ ಅಣ್ಣಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಚಿಕ್ಕಮಗಳೂರು

ಚಿಕ್ಕಮಗಳೂರು

ಕಡೂರು ಪೊಲೀಸ್‌ ಠಾಣೆ ಮೊ.ಸಂ. 247/2013 - ಕಲಂ: 279 304(ಎ) ಐಪಿಸಿ - ಅ.30 ರಂದು ಟಿ ಮಧು ಸುಮಾರು 25 ವರ್ಷ ಈತನು ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ನಂಬರ್ ಕೆ ಎ 52 ಈ 2947 ರಲ್ಲಿ ಎನ್ ಹೆಚ್ 206 ರಸ್ತೆಯಲ್ಲಿ ಬಾಣಾವಾರ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಲಾರಿ ನಂಬರ್ ಕೆ ಎ 19 7273 ರ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟಿ ಮಧು ಇದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿದ್ದು ಟಿ ಮಧುವಿನ ಬಲ ಕಾಲಿನ ತೊಡೆ ಮೂಳೆ ಮುರಿದು ಮುಖ ತರಚಿ ರಕ್ತ ಗಾಯವಾಗಿ ಕಡೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ,

ಲಾರಿಯನ್ನು ಚಾಲನೆ ಮಾಡಿದ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಅರುಣ ಬೈರಗೊಂಡನಹಳ್ಳಿ, ಎಂದು ತಿಳಿದಿದ್ದು ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ,ವ,ವರದಿಯನ್ನು ದಾಖಲು ಮಾಡಿರುತ್ತೆ.
ಮಾರಾಣಾಂತಿಕ ರಸ್ತೆ ಅಪಘಾತ

ಮಾರಾಣಾಂತಿಕ ರಸ್ತೆ ಅಪಘಾತ

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಾಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು, ಕುಂಬಾರಹಳ್ಳಿಗೇಟ್ ಬಳಿ, ಎನ್.ಹೆಚ್-4, ಚೈನ್-ಬೆಂಗಳೂರು ರಸ್ತೆಯಲ್ಲಿ ಸಂಭವಿಸಿರುತ್ತದೆ. ಚೈನ್ ವಾಸಿ ಬಾಲಾಜಿ ರವರು ಮತ್ತು ಅವರ ಕುಟುಂಬದವರು ಟಿ.ಎನ್-20, ಬಿ.ಕೆ-5874 ಕಾರಿನಲ್ಲಿ ಅ.30 ರಂದು ಚೈನ್‌ನಿಂದ ಕೆ.ಆರ್ ಪುರಂಗೆ ಬರುತ್ತಿದ್ದು. ಈ ಸಮಯದಲ್ಲಿ ಕಾರ್ ಚಾಲನೆ ಮಾಡುತ್ತಿದ್ದ ವಿಜಯಕುಮಾರ್ ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ ಯಾವುದೋ ಒಂದು ವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ಕಾರಿನ ಚಾಲಕ ವಿಜಯಕುಮಾರ್ ರವರು ಸ್ಥಳದಲ್ಲಿಯೆ ಮೃತಪಟ್ಟಿದ್ದು. ಕಾರಿನಲ್ಲಿದ್ದ ಇತರರಿಗೆ ಗಾಯಗಳಾಗಿರುತ್ತವೆ.

ಶಿವಮೊಗ್ಗ

ಶಿವಮೊಗ್ಗ

ಅಕ್ರಮವಾಗಿ ಗಾಂಜ ಮಾದಕದ್ರವ್ಯ ಸಾಗಾಟ ಪ್ರಕರಣ

ಸಾಗರ ತಾಲ್ಲೋಕಿನ ಮೂಲಕ ಸೊರಬ ತಾಲ್ಲೋಕ್ ಉಳವಿಯಿಂದ ಶೌಕತ್ ಆಲಿ ಮತ್ತು ಜಹೀರ್ ಖಾನ್ ಹಾಗು ಇತರೆ 3 ಜನರು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾದಕ ದ್ರವ್ಯ ಗಾಂಜಾವನ್ನು ಸಾಗಿಸುತ್ತಿದ್ದು ಮಾರುತಿ ಒಮಿನಿ ನಂ ಕೆ.ಎ. 31 7920 ರಲ್ಲಿ ಸಾಗರ ತಾಲ್ಲೋಕ್ ಗುಡ್ಡೇ ಕೌತಿ ಎಂಬಲ್ಲಿ ಹಿಡಿದು ಅವರಿಂದ 20 ಕೆ.ಜಿ. ಮಾದಕ ದ್ರವ್ಯ ಹಾಗು 10 ಕೆ.ಜಿ. ಗಾಂಜವನ್ನು ಹಾಗು ವಾಹನ ನಗದು ಹಣ 2230/- ರೂ ವಶಪಡಿಸಿಕೊಂಡಿರುತ್ತದೆ. ಇದರ ಒಟ್ಟು ಅಂದಾಜು ಮೌಲ್ಯ10,54,230 ರೂ ಆಗಿರುತ್ತದೆ.

ಮಟ್ಕಾಚೀಟಿ

ಮಟ್ಕಾಚೀಟಿ

ತಿಪಟೂರು ನಗರ ಪೊಲೀಸ್‌ ಠಾಣೆ ಮೊ.ಸಂ 192/2013. U/S 78(3) KP Act.

ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಗಣೇಶ್ ಮೂರ್ತಿ ರವರಿಗೆ ತಿಪಟೂರು ನಗರದ ಗಾಂದಿನಗರದ ವಾಟರ್ ಟ್ಯಾಂಕ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವಾಡುತ್ತಿದ್ದಾನೆಂತ ಖಚಿತ ವರ್ತಮಾನದ ಮೇರೆಗೆ ಪಿ.ಎಸ್.ಐ (ಕ್ರೈಂ) ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆಲಂ ಬಿನ್ ಪ್ಯಾರೇಜಾನ್, 32 ವರ್ಷ, ಮುಸ್ಲೀಂ, ವ್ಯಾಪಾರ, ವಾಟರ್ ಟ್ಯಾಂಕ್ ಮುಂಭಾಗ, ಗಾಂದಿನಗರ ತಿಪಟೂರು ಟೌನ್ ರವರನ್ನು ವಶಕ್ಕೆ ಪಡೆದು ಒಂದು ಮಟ್ಕಾಚೀಟಿ, 500/- ರೂ ನಗದು ಹಣ ಹಾಗೂ ಒಂದು ಬಾಲ್ ಪೆನ್ ನೊಂದಿಗೆ ಸ್ಥಳಪಂಚನಾಮೆಯನ್ನು ಬರೆದು, ಆರೋಪಿಯೊಂದಿಗೆ ಒಂದು ಮಟ್ಕಾಚೀಟಿ, 500/- ರೂ ನಗದು ಹಣ ಹಾಗೂ ಒಂದು ಬಾಲ್ ಪೆನ್ ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+