ಕ್ರೈಂ: ಅಪ್ರಾಪ್ತೆ ಶೀಲಹರಣಗೈದ ಪರದೇಶಿ ಸೆರೆ
ಬೆಂಗಳೂರು, ನ.5: ಓಂಕಾರ ನಗರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಪರದೇಶಿಯನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಸಂಜೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವ್ಯಾಪಕ ಬಲೆ ಬೀಸಿದ ಪೊಲೀಸರು ಘಟನೆ ನಡೆದ ಕೆಲ ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ. ಕೋಲ್ಕತ್ತಾ ಮೂಲದ ಅಶ್ವಿನ್ ಎಂಬ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬಾಲಕ ಸಾವು : ಗಾಳಿಪಟ ಹಾರಿಸುವಾಗ ಮನೆ ಮಹಡಿಯಿಂದ ಆಯ ತಪ್ಪಿ ಕೆಳಗೆ ಬಿದ್ದ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಎಚ್ ಬಿಆರ್ ಬಡಾವಣೆಯ ನಿವಾಸಿ ಅಕ್ಬರ್ ಹಾಗೂ ರೇಷ್ಮಾ ಬಾನು ದಂಪತಿಯ ಮಗ 8 ವರ್ಷ ವಯಸ್ಸಿನ ಸಯ್ಯದ್ ವಾಜೀದ್ ಮೃತಪಟ್ಟ ಬಾಲಕ.
ಸೋಮವಾರ ಸಂಜೆ ಗೆಳೆಯರ ಜತೆ ಮನೆ ಮೊದಲ ಮಹಡಿಯಲ್ಲಿ ಗಾಳಿಪಟ ಹಾರಿಸುವಾಗ ಕೆಳಗೆ ಬಿದ್ದಿದ್ದಾನೆ. ತಕ್ಷಣವೇ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆದರೆ, ತೀವ್ರ ರಕ್ತಸ್ರಾವದಿಂದ ವಾಜೀದ್ ಮೃತಪಟ್ಟಿದ್ದಾನೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ಉಡುಪಿ
ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಬಿಲ್ಲವ ಮಂದಿರದ ಬಳಿ ಇರುವ ಭವಾನಿ ಶೆಟ್ಟಿಗಾರ್ ಗಂಡ: ಉಮಾನಾಥ, ವಾಸ: ಬಿಲ್ಲವ ಗುರು ಮಂದಿರದ ಬಳಿ,ಎರ್ಲಪಾಡಿ ಗ್ರಾಮ,ಕಾರ್ಕಳ ತಾಲೂಕು ಮನೆಯಲ್ಲಿ ಅವರ ಗಂಡ ಉಮಾನಾಥ ಶೆಟ್ಟಿಗಾರ್ (47) ಎಂಬವರು ಮನೆಯ ದೇವರ ಕೋಣೆಗೆ ಅಳವಡಿಸಿದ ಕಬ್ಬಿಣದ ಜಂತಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ.
ಅವರು ಸುಮಾರು ವರ್ಷಗಳಿಂದ ವಿಪರೀತ ಹೊಟ್ಟೆನೋವು, ರಕ್ತಹೀನತೆಯಿಂದ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ.ಎಂಬುದಾಗಿ ಭವಾನಿ ಶೆಟ್ಟಿಗಾರ್ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 38/13 ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆ
ಆನವಟ್ಟಿ ಠಾಣೆ ಅಪಘಾತದಿಂದ ಸಾವು ಪ್ರಕರಣ: ಆರೋಪಿಯಾದ ಕೆಎ 29 ಎ 1767 ಪ್ಸಾಸೆಂಜರ್ ಆಟೋ ಚಾಲಕನು ತನ್ನ ಆಟೋವನ್ನ ನಿರ್ಲಕ್ಷ್ಯತನದಿಂದ ಒಡಿಸಿಕೊಂಡು ಬಂದು ಶಕುನವಳ್ಳಿ ಶಾಲೆ ಮುಂಭಾಗ ರಸ್ತೆಯಲ್ಲಿ ಪಲ್ಟಿಹೊಡೆಸಿ ಆಟೋ ಒಳಗೆ ಇದ್ದ ರೇವಣಸಿದ್ದಯ್ಯ ಮತ್ತು ಅವರ ಮಗು ದರ್ಶಣ್ 11 ವರ್ಷ ಮಗುವಿಗೆ ತಲೆಗೆ ಪೆಟ್ಟುಬಿದ್ದರಿಂದ ಕೊಡಲೇ ಶಿರಸಿ ಆಸ್ವತ್ರೆಗೆ ದಾಖಲಿಸಿದ್ದರೂ ಮಗು ಈ ದಿನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತದೆ

ಜೂಜಾಟ ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 399/2013 - ಕಲಂ: 87 ಕೆಪಿ ಆಕ್ಟ್ - ನ.4ರಂದು ಬೆಳವಾಡಿ ಕೆರೆಯ ಹತ್ತಿರ ಸರ್ಕಾರಿ ಗೋಮಾಳದ ಹಳ್ಳದ ಬಳಿ ಅಂದರ್ ಬಾಹರ್ ಇಸ್ಪೀಟಿನ ಜೂಜಾಟದಲ್ಲಿ ಹಣವನ್ನು ಪಣವಾಗಿ ತೊಡಗಿಸಿ ಆಟವಾಡುತ್ತಿದ್ದವರ ಮೇಲೆ ಪಿಎಸ್ ಐ ಸಿಬ್ಬಂದಿಗಳೊಂದಿಗೆ ದಾಳಿ ಮಾಡಲಾಗಿ 3 ಜನರು ಸಿಕ್ಕಿದ್ದು 4 ಜನರು ಓಡಿ ಹೋಗಿದ್ದು ಇಸ್ಪೀಟ್ ಜೂಜಾಟಕ್ಕೆ ತೊಡಗಿಸಿದ ವಿವಿಧ ಮುಖಬೆಲೆಯ 14.170 ನಗದು,52 ಇಸ್ಪೀಟು ಎಲೆ 1 ಪ್ಲಾಸ್ಟಿಕ್ ಸೀಟು ಆಪಾದಿತರಾದ 1. ಚಂದ್ರಪ್ಪ, 2. ಸತೀಶ 3.ನಾಗರಾಜ ಇವರುಗಳನ್ನು ವಶಕ್ಕೆ ಪಡೆದು ಠಾಣೆಗೆ ಬಂದು ದೂರು ದಾಖಲಿಸಿರುತ್ತೆ.

ಕೋರಾ ಪೊಲೀಸ್ ಠಾಣಾ
ಮೊ.ನಂ- 167/2013 ಕಲಂ-279. 304 (ಎ) ಐ.ಪಿ.ಸಿ ರೆ/ವಿ 134(ಎ)&(ಬಿ) 187 ಐ.ಎಂ.ವಿ ಆಕ್ಟ್ : ನ.4ರಂದು ರಂದು ರಾತ್ರಿ 09-30 ಗಂಟೆಗೆ ಶಿವಣ್ಣ ನೀಡಿದ ಲಿಖಿತ ದೂರು: ಸೋಮ ಸಾಗರ ಗೇಟಿನ ಬಳಿ ಮೇಲು ಸೇತುವೆ ಬಳಿ ನಾನು ಬರುತ್ತಿದ್ದಾಗ ಯಾರೋ ಒಬ್ಬ ಆಸಾಮಿ ಶಿರಾ-ತುಮಕೂರು ನಡುವಿನ ಎನ್.ಹೆಚ್-4 ರಸ್ತೆಯನ್ನು ನಡೆದುಕೊಂಡು ದಾಟುತ್ತಿದ್ದಾಗ ಶಿರಾ ಕಡೆಯಿಂದ ಒಂದು ಕಾರನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನು ಉಂಟು ಮಾಡಿ ಕಾರನ್ನು ನಿಲ್ಲಿಸದೇ ಸ್ಥಳದಿಂದ ಹೊರಟುಹೋದನು.
ಕೂಡಲೇ ನಾನು ಮತ್ತು ಸ್ಥಳೀಯ ಜನರು ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ತಲೆಗೆ, ಮೈ,ಕೈ,ಕಾಲುಗಳಿಗೆ ಹೆಚ್ಚಿನ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಮೃತಪಟ್ಟ ವ್ಯಕ್ತಿಯು ಸುಮಾರು 25 ರಿಂದ 30 ವರ್ಷ ವಯಸ್ಸಿನವನಾಗಿದ್ದು ಆತನ ಹೆಸರು ಮತ್ತು ವಿಳಾಸ ಯಾವುದೆಂತಾ ಗೊತ್ತಿರುವುದಿಲ್ಲ. ಕಾರು ಚಾಲಕನ ಮೇಲೆ ಕ್ರಮ ಜರುಗಿಸಲು ಮನವಿ

ಹಾವು ಕಚ್ಚಿ ಅಣ್ಣ-ತಂಗಿ ಸಾವು
ಬೆಳಗಾವಿ: ಹಾವು ಕಚ್ಚಿ ಅಣ್ಣ ತಂಗಿ ಸಾವಿಗೀಡಾಗಿರುವ ಧಾರುಣ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮಸರ ಗುಪ್ಪಿ ಗ್ರಾಮದಲ್ಲಿ ನಡೆದಿದೆ. ಕಲ್ಮೇಶ ಬಡಿಗೇರ(17) ಮತ್ತು ಪಲ್ಲವಿ ಬಡಿಗೇರ (6) ಹಾವು ಕಡಿತದಿಂದ ಸಾವನ್ನಪ್ಪಿದವರು. ಇಬ್ಬರು ಮನೆಯ ಮುಂಭಾಗ ಮಲಗಿದ್ದ ವೇಳೆಯಲ್ಲಿ ಹಾವು ಕಚ್ಚಿದೆ. ಮಂಗಳವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೇವನಹಳ್ಳಿ
ದೇವನಹಳ್ಳಿ: ಪತಿಯ ಕಿರುಕುಳದಿಂದ ಬೇಸತ್ತ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೊನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅನಿತಾ (32) ಆವರು ಬೆಂಗಳೂರಿನ ಎ ನಾರಾಯಣಪುರದ ನಿವಾಸಿ ರಂಗಪ್ಪ ಎಂಬುವರ ಪುತ್ರಿಯಾಗಿದ್ದು 4 ವರ್ಷಗಳ ಹಿಂದೆ ಆಟೋ ಚಾಲಕ ಭೈರೇಗೌಡ ಅವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಬೆಂಗಳೂರಿನಲ್ಲಿ ನಿವೇಶನ ಕೊಡಿಸುವಂತೆ ಅನಿತಾಳನ್ನು ಭೈರೇಗೌಡ ಪೀಡಿಸುತ್ತಿದ್ದ ಎಂದು ಮೃತಳ ಸೋದರ ಮುರಳೀಧರ ದೂರು ನೀಡಿದ್ದಾರೆ.












Click it and Unblock the Notifications