ಪಕ್ಕದ ಮನೆ ಅಜ್ಜನಿಂದ ಬಾಲೆ ಮೇಲೆ ಅತ್ಯಾಚಾರ

ಬೆಂಗಳೂರು, ನ.27: ಪ್ರತಿದಿನ ಮಗುವಿನ ಜತೆ ಆಡಿ ನಲಿಯುತ್ತಿದ್ದ ಪಕ್ಕದ ಮನೆ ಅಜ್ಜನೊಬ್ಬ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಏನೂ ಅರಿಯದಂತೆ ಇದ್ದ ಘಟನೆ ಇದಾಗಿದೆ. ವೃದ್ಧನೊಬ್ಬ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದಲ್ಲಿ ಮಂಗಳವಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಹುನ್ನೂರು ಗ್ರಾಮದ ಅಣ್ಣಪ್ಪ ಸಂಗಪ್ಪ ಮಾದಪ್ಪಗೋಳ ಎಂಬ 60 ವರ್ಷ ವೃದ್ಧ ಪಕ್ಕದ ಮನೆಯ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲೇ ಇದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ದುಗ್ಗಪ್ಪ ಪ್ರತಿ ದಿನ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಬಾಲಕಿ ಕೂಡಾ ಅಜ್ಜ ಅಜ್ಜ ಎಂದು ಆತನ ಜತೆ ಆಡಿ ನಲಿದಾಡುತ್ತಿತ್ತು. ನಿನ್ನೆ ದಿವಸ ಸಂಜೆ ವೇಳೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮನೆಗೆ ಹಿಂತಿರುಗಿದ ಬಾಲಕಿ ನೋವಿನಿಂದ ಬಳಲುವುದನ್ನು ಕಂಡು ಪ್ರಶ್ನಿಸಿದ ಅಜ್ಜಿಗೆ ವಿಷಯ ತಿಳಿದು ಬಂದಿದೆ. ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. [ಅತ್ಯಾಚಾರಕ್ಕೆ ಕಾರಣ ಯಾರು?]

ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ಚಾಮರಾಜನಗರ

ಚಾಮರಾಜನಗರ

ಎಚ್.ಡಿ.ಕೋಟೆ: ಲಾರಿಯೊಂದು ಮಗುಚಿ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಎಚ್.ಮಟಕೆರೆ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಮೃತನನ್ನು ಪೆಂಜಹಳ್ಳಿ ಗ್ರಾಮದ ನಿವಾಸಿ ಚಾಲಕ ಪ್ರಕಾಶ್ (28) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಜಕ್ಕಹಳ್ಳಿ ಗ್ರಾಮದ ಚಿನ್ನಸ್ವಾಮಿ ಮತ್ತು ಮಹದೇವಸ್ವಾಮಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಎಚ್ ಡಿ ಕೋಟೆ ತಾಲೂಕಿನ ನಡಿಹಾಡಿ ಗ್ರಾಮದಲ್ಲಿ ಹೊಲ ಕಾಯುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿ ಕೊಂದು ತಿಂದು ಹಾಕಿದೆ. ಮೃತ ರೈತನನ್ನು ಬಸವರಾಜು ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆಯನ್ನು ಅರಣ್ಯ ಇಲಾಖೆ ನೀಡಿದೆ

ಚಿತ್ರದುರ್ಗ

ಚಿತ್ರದುರ್ಗ

ಹಿರಿಯೂರು ಪಟ್ಟಣದ ಟಿ.ಟಿ. ರಸ್ತೆ ಮಹಾಲಕ್ಷ್ಮಿ ಜ್ಯೂಯಲರ್ಸ್ ಕಟ್ಟಡದ ಮೇಲೆ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಮಾಹಿತಿ ಆಧಾರಿಸಿ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಭಾರತ ಹಾಗೂ ವೆಸ್ಟ್‌ಇಂಡೀಸ್ ಏಕದಿನ ಸರಣಿ ಮೇಲೆ ಭಾರಿ ಬೆಟ್ಟಿಂಗ್ ಎರಡು ಮೂರು ದಿನಗಳಿಂದ ನಡೆದಿತ್ತು. ಬಂಧಿತರನ್ನು ಎಂ. ಯಶವಂತಚಾರ್ ಹಾಗೂ ವಿಕಾಸ್ ಬಂಧಿಸತರು ಎಂದು ಪಿಎಸ್ ಐ ವಿ.ಎಸ್ ಶಿವಕುಮಾರ್ ಹೇಳಿದ್ದಾರೆ.

ಚಿಕ್ಕಮಗಳೂರು

ಚಿಕ್ಕಮಗಳೂರು

ತರೀಕೆರೆ ತಾಲೂಕು ಅಜ್ಜಂಪುರದ ಅಮೃತ ಮಹಲ್ ತಳಿ ಸಂವರ್ಧನಾ ಕ್ಷೇತ್ರದ ಉಪ ನಿರ್ದೇಶಕ ಡಾ.ಸುರೇಶ್ ಅವರನ್ನು ಸರ್ಕರ ಅಮಾನತು ಮಾಡಿದೆ.

2013 ಸೆಪ್ಟೆಂಬರ್ 15ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಂದಿದ್ದ ರಾಸುಗಳ ದುಃಸ್ಥಿತಿ, ಇತ್ತೀಚಿಗೆ ಕರು ಮೃತಪಟ್ಟ ಬಗ್ಗೆ ವರದಿ ಆಧಾರಿಸಿ ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ಅವರ ತಂಡ ಪರಿಶೀಲನೆ ನಡೆಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್ ಭೇಟಿ ನೀಡಿದ ನಂತರ, ಕಾನೂನು ಸಚಿವ ಟಿ.ಬಿ.ಜಯಚಂದ್ರ ಕೂಡ ಅಜ್ಜಂಪುರದ ತಳಿ ಸಂವರ್ಧನಾ ಕ್ಷೇತ್ರಕ್ಕೆ ಭೇಟಿ ಪರಿಸ್ಥಿತಿ ಅವಲೋಕಿಸಿದ್ದರು

ಮಂಡ್ಯ

ಮಂಡ್ಯ

ಹಣ ಡಬ್ಲಿಂಗ್ ದಂಧೆಯಲ್ಲಿ ತೊಡಗಿದ್ದ ಮಂಡ್ಯ ನಗರಸಭೆ ಸದಸ್ಯರ ಬಂಧನ. ಪಾಂಡವಪುರ ತಾಲೂಕು ಅಂಕೇಗೌಡನಕೊಪ್ಪಲು ನಿವಾಸಿ ಶಿವರಾಮು(39), ಶ್ರೀರಂಗಪಟ್ಟಣ ಗಂಜಾಂನ ಎಸ್.ಮಂಜುನಾಥ್(40), ಮೈಸೂರಿನ ಆರ್.ರಮೇಶ್(42), ಮಂಡ್ಯದ ಗಾಂಧಿನಗರದ ಆರ್.ಚೇತನ್ ಕುಮಾರ್(27) ಬಂಧಿತ ಆರೋಪಿಗಳು. ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ.ಪಿ.ಅರುಣ್ ಕುಮಾರ್ ಐದನೇ ಆರೋಪಿ. ಮೈಸೂರಿನ ಇಮ್ತಿಯಾಜ್ ಪರಾರಿಯಾಗಿದ್ದಾನೆ ಎಂದು ಮಂಡ್ಯ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+