ಕ್ರೈಂ ರೌಂಡಪ್: ಆರತಕ್ಷತೆ ಆದ್ಮೇಲೆ ವಧು ವಿಷ ಸೇವನೆ

ಬೇಲೂರು, ಮೇ 8: ವಿವಾಹಕ್ಕೆ ಮುನ್ನಾ ದಿನ ವಧು ವಿಷ ಸೇವಿಸಿ ಆಸ್ಪತ್ರೆ ಸೇರಿದ ಪರಿಣಾಮ ವಿವಾಹ ರದ್ಧಾದ ಪ್ರಕರಣ ವರದಿಯಾಗಿದೆ. ವಧು ಹರಿಣಿ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬೇಲೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆಯಬೇಕಿದ್ದ ಮದುವೆ ರದ್ದಾಗಿದೆ.

ಬೇಲೂರು ತಾಲೂಕು ಬಿಕ್ಕೋಡು ಹೋಬಳಿ ಸೂರುಕೋಡು ಗ್ರಾಮದ ಚಂದ್ರಾವತಿ ಎಸ್.ವಿ.ಕೃಷ್ಣ ಅವರ ಪುತ್ರಿಯನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಯಶೋಧಮ್ಮ ಈಶ್ವರಪ್ಪ ಇವರ ಪುತ್ರ ವೆಂಕಟೇಶ್ ಇವರೊಂದಿಗೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಇಂದು ವಿವಾಹ ನಡೆಯಬೇಕಿತ್ತು. ಇದಕ್ಕಾಗಿ ಎಲ್ಲಾ ಪೂರ್ವ ತಯಾರಿ ಅದ್ಧೂರಿಯಾಗೇ ನಡೆದಿತ್ತು. ನಿನ್ನೆ ಸಂಜೆ ಅರತಕ್ಷತೆ ಮುಂಚಿನ ಪೂಜಾ ಸಿದ್ಧತೆಯಲ್ಲಿ ತೊಡಗಿರುವಾಗಲೇ 6 ಗಂಟೆ ಸುಮಾರಿನಲ್ಲಿ ವಧು ಹರಿಣಿ ವಿಷಕಾರಿ ಮಾತ್ರೆಗಳ ಸೇವಿಸಿ ಅಸ್ವಸ್ಥಳಾದಳು.

ವಿಷಯ ತಿಳಿದ ವಧುವಿನ ಬಂಧುಗಳು ವಧುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು.

ವರ ಬಂದಿರಲಿಲ್ಲ: ಸಂಜೆ ವಧು ವಿಷಕಾರಿ ಗುಳಿಗೆ ಸೇವಿಸುವ ವೇಳೆಗಿನ್ನೂ ವರನ ಕಡೆಯವರು ತರೀಕೆರೆಯಿಂದ ಬೇಲೂರಿಗೆ ಆಗಮಿಸಿರಲಿಲ್ಲ. ಮೂರು ಬಸ್ಸುಗಳಲ್ಲಿ ಆಗಮಿಸುತ್ತಿದ್ದ ವರನ ಕಡೆಯವರಿಗೆ ಮಾರ್ಗಮಧ್ಯದಲ್ಲಿ ಹುಡುಗಿ ವಿಷಯ ತಿಳಿಯಿತು. ವಾಸ್ತವಾಂಶ ಅರಿಯಲು ವರನ ಬಂಧುಗಳು ಬೇಲೂರಿಗೆ ಆಗಮಿಸಿದರು. ವರ ವೆಂಕಟೇಶ್ ಮಾತ್ರ ಚಿಕ್ಕಮಗಳೂರಿನಲ್ಲೇ ಇಳಿದುಕೊಂಡು ಆಸ್ಪತ್ರೆಗೆ ತೆರಳಿ ಹುಡುಗಿಯ ಯೋಗಕ್ಷೇಮ ವಿಚಾರಿಸಿದ್ದಾನೆ.

ಮಂಗಳೂರಿನಲ್ಲಿ ಕೋಕಾ ಕೋಲಾ ಲಾರಿ ಅಪಘಾತ

ಮಂಗಳೂರಿನಲ್ಲಿ ಕೋಕಾ ಕೋಲಾ ಲಾರಿ ಅಪಘಾತ

ಮಂಗಳೂರಿನ ನಂತೂರು ಸರ್ಕಲ್ ಬಳಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕುಲಶೇಖರ್ ಬಳಿ ಇತ್ತೀಚೆಗೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನೂರಾರು ಕೋಕಕೋಲಾ ಬಾಕ್ಸ್ ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

ಕೇರಳದ ಕಡೆಯಿಂದ ಬರುತ್ತಿದ್ದ ಕೋಕಕೋಲಾ ಬಾಕ್ಸ್ ಹೊತ್ತ ಟ್ರಕ್ ಚಾಲಕ ಪಾನಮತ್ತ ನಾಗಿ ಜೋರಾಗಿ ವಾಹನ ಚಲಾಯಿಸಿ ಮಂಗಳೂರಿನಿಂದ ಬರುತ್ತಿದ್ದ ಟಿಪ್ಪರ್ ಗೆ ಗುದ್ದಿದ್ದ. ಇಬ್ಬರು ಚಾಲಕರು ಈಗ ಪ್ರಾಣಾಪಯದಿಂದ ಪಾರಾಗಿದ್ದಾರೆ. ಚಿತ್ರ: ಐಸಾಕ್ ರಿಚರ್ಡ್, ಮಂಗಳೂರು

ಎಕ್ಕಾರು ಗ್ರಾಮ ಬಳಿ ಶಾಲಾ ವಾಹನ ಅಪಘಾತ

ಎಕ್ಕಾರು ಗ್ರಾಮ ಬಳಿ ಶಾಲಾ ವಾಹನ ಅಪಘಾತ

ಮಂಗಳೂರಿನ ನಂತೂರು ಸರ್ಕಲ್ ಬಳಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕುಲಶೇಖರ್ ಬಳಿ ಇತ್ತೀಚೆಗೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನೂರಾರು ಕೋಕಕೋಲಾ ಬಾಕ್ಸ್ ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

ಕೇರಳದ ಕಡೆಯಿಂದ ಬರುತ್ತಿದ್ದ ಕೋಕಕೋಲಾ ಬಾಕ್ಸ್ ಹೊತ್ತ ಟ್ರಕ್ ಚಾಲಕ ಪಾನಮತ್ತ ನಾಗಿ ಜೋರಾಗಿ ವಾಹನ ಚಲಾಯಿಸಿ ಮಂಗಳೂರಿನಿಂದ ಬರುತ್ತಿದ್ದ ಟಿಪ್ಪರ್ ಗೆ ಗುದ್ದಿದ್ದ. ಇಬ್ಬರು ಚಾಲಕರು ಈಗ ಪ್ರಾಣಾಪಯದಿಂದ ಪಾರಾಗಿದ್ದಾರೆ. ಚಿತ್ರ: ಐಸಾಕ್ ರಿಚರ್ಡ್, ಮಂಗಳೂರು

ಹಲ್ಲೆ: ಗೌನಿಪಲ್ಲಿ ಪೊಲೀಸ್ ಠಾಣೆ

ಹಲ್ಲೆ: ಗೌನಿಪಲ್ಲಿ ಪೊಲೀಸ್ ಠಾಣೆ

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ಭೀಮಗಾನಪಲ್ಲಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ಭೀಮಗಾನಪಲ್ಲಿ ಗ್ರಾಮದ ವಾಸಿಯಾದ ಆನಂದರೆಡ್ಡಿ ರವರು ಜಮೀನು ಬಳಿ ಇದ್ದಾಗ ಹೊಸಹುಡ್ಯ ಗ್ರಾಮದ ವಾಸಿಗಳಾದ ಚಿನ್ನಲಕ್ಷ್ಮಣ್ಣ ಮತ್ತು ಇತರೇ 12 ಜನರು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಪಿರ್ಯಾದಿಯ ಬಳಿ ಬಂದು ಜಗಳತೆಗೆದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ವಿಚಾರದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಇದೇ ವಿಚಾರದಲ್ಲಿ ಮತ್ತೊಂದು ಪ್ರಕರಣ ಸಹ ದಾಖಲಾಗಿರುತ್ತದೆ.

ಬೈಕ್ ಕಳವು ಪ್ರಕರಣ [ ದೊಡ್ಡಪೇಟೆಠಾಣೆ]

ಬೈಕ್ ಕಳವು ಪ್ರಕರಣ [ ದೊಡ್ಡಪೇಟೆಠಾಣೆ]

ಬಿ ಹೆಚ್ ರಸ್ತೆ ಮಾಡ್ರನ್ ಟಾಕಿಸ್ ಬಳಿ ನಿಲ್ಲಿಸಿದ್ದ ಪಿರ್ಯಾದಿ ಉಮಾಕಾಂತ ಬಿನ್ ಲೇ. ರುದ್ರಪ್ಪ ವಾಸ ಹಳೇಮಂಡ್ಲಿ ಯವರ ಹೆವಿ ಡ್ಯೂಟಿ ಬೈಕ್ ನಂ ಕೆ ಎ 14 ಇಸಿ 9445 ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುವರು ಬೆಲೆ 25,000/- ರೂ ಗಳು

ಸಾಗರ ರಸ್ತೆ ಮೆಗ್ಗಾನ ಆಸ್ಪತ್ರೆಯ ಚೌಡೇಶ್ವರಿ ದೇವಸ್ತಾನದ ಬಳಿ ನಿಲ್ಲಿಸಿದ್ದ ಪಿರ್ಯಾದಿ ಶಿವಕುಮಾರ ಬಿನ್ ಲೇ. ಸೋಮಯ್ಯ ವಾಸ ಮಂಜುನಾಥ ಬಡಾವಣೆ ಯವರ ಬೈಕ್ ನಂ ಕೆ ಎ 14 ಡಬ್ಲೂ 4954 ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುವರು. ಬೆಲೆ 35,000/- ರೂಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+