ಗೊಲ್ಲಹಳ್ಳಿ ಬಳಿ ರೈಲಿಗೆ ಸಿಲುಕಿ ಇಬ್ಬರ ಆತ್ಮಹತ್ಯೆ

ನೆಲಮಂಗಲ, ಜ.27: ಚಲಿಸುವ ರೈಲಿಗೆ ಸಿಲುಕಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊರವಲಯದ ರೈಲ್ವೆ ಗೊಲ್ಲಹಳ್ಳಿಯಲ್ಲಿ ನಡೆದಿದೆ. ಸುಮಾರು 50 ವರ್ಷದ ವ್ಯಕ್ತಿ ಹಾಗೂ 20 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಿಬ್ಬರು ತಂದೆ-ಮಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ತುಮಕೂರು-ಬೆಂಗಳೂರು ಮಾರ್ಗ ಮಧ್ಯೆ ಇರುವ ಜೋಡಿ ಹಳಿ ಮಧ್ಯದಲ್ಲಿ ಇವರಿಬ್ಬರು ನಿಂತುಕೊಂಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ನಂತರ 10 ಗಂಟೆ ಸಮಯದಲ್ಲಿ ತುಮಕೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರೈಲಿಗೆ ಸಿಲುಕಿದ ಇಬ್ಬರ ದೇಹ ಛಿದ್ರಗೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡವರ ಗುರುತು ಪತ್ತೆಯಾಗಿಲ್ಲ. ಅಲ್ಲದೆ ಎಲ್ಲಿಯವರು ಎಂಬುದು ತಿಳಿದುಬಂದಿಲ್ಲ. ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಉಳಿದಂತೆ, ಕೋಲಾರ, ತುಮಕೂರು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಉಳಿದ ಜಿಲ್ಲೆಗಳಿಂದ ಬಂದಿರುವ ಕ್ರೈಂ ಸುದ್ದಿಗಳನ್ನು ಮುಂದೆ ಓದಿ...

ರಾಜ್ಯ ಕ್ರೈಂ ನ್ಯೂಸ್ ಕವರೇಜ್

ರಾಜ್ಯ ಕ್ರೈಂ ನ್ಯೂಸ್ ಕವರೇಜ್

ಮೋಸ ಪ್ರಕರಣ : ಮಲ್ಪೆ: ಆರೋಪಿತ ನಾಗವೇಣಿ @ ಸ್ವಪ್ನಾ ಶಕೀರ್ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಪಡೆಯದೆ ಕಳೆದ 8 ವರ್ಷಗಳಿಂದ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಎಂಬಲ್ಲಿ ಶುಶ್ರೂತಾ ಕ್ಲಿನಿಕ್ ಇಟ್ಟುಕೊಂಡು ನಕಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದು ಆರೋಪಿತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವೈದ್ಯಕೀಯ ವೃತ್ತಿಯನ್ನು ನಡೆಸಿ ಸಾರ್ವಜನಿಕರಿಗೆ ನಂಬಿಕೆ ದ್ರೋಹ ಮತ್ತು ವಂಚಿಸಿದ್ದು ಅಲ್ಲದೆ ಗೊತ್ತಿದ್ದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನೊಂದಣಾ ಪ್ರಾಧಿಕಾರಕ್ಕೆ ನೀಡಿ ನೊಂದಾಯಿಸಿ ಪ್ರಾಧಿಕಾರಕ್ಕೆ ಮತ್ತು ಸರಕಾರಕ್ಕೆ ವಂಚಿಸಿ ನಕಲಿ ವೈದ್ಯಕೀಯ ವೃತ್ತಿಯಿಂದ ಸಾರ್ವಜನಿಕರಿಗೆ ಸ್ವಂತ ಲಾಭಕ್ಕಾಗಿ ಮೋಸ ಮಾಡಿದ್ದಾಗಿದೆ. ಈ ಬಗ್ಗೆ ಡಾ. ರಾಮಚಂದ್ರ ಬಾಯರಿ ಯಡ್ತಾಡಿ ಗ್ರಾಮ ಮತ್ತು ಅಂಚೆ ಬಾರ್ಕೂರು, ಉಡುಪಿರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 20/14 ಕಲಂ 465, 468, 471, 420 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೋಲಾರ: ಮಾರಾಣಾಂತಿಕ ರಸ್ತೆ ಅಪಘಾತ

ಕೋಲಾರ: ಮಾರಾಣಾಂತಿಕ ರಸ್ತೆ ಅಪಘಾತ

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಾಣಾಂತಿಕ ರಸ್ತೆ ಅಪಾಘತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ-ಕೋಲಾರ ರಸ್ತೆ, ಕೇದಾರ್ ಗ್ಯಾಸ್ ಎಜೆನ್ಸಿಯ ಬಳಿ ಸಂಭವಿಸಿರುತ್ತದೆ. ದಿನಾಂಕ 26-01-2014 ರಂದು ಸಂಜೆ 4 ಗಂಟೆಯಲ್ಲಿ ಕೋಲಾರ ನಗರದ, ಮಾಸ್ತಿ ಬಡಾವಣೆಯ ವಾಸಿ ಬಾಲಾಜಿ ಸಿಂಗ್ ರವರು ದ್ವಿಚಕ್ರ ವಾಹನ ಸಂ-ಕೆಎ-07, ಆರ್-3123 ವಾಹನದಲ್ಲಿ ಮಾಸ್ತಿ ಬಡಾವಣೆಗೆ ಬರುತ್ತಿದ್ದು. ಈ ಸಮಯದಲ್ಲಿ ಬಂಗಾರಪೇಟೆ ಕಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ ಕೆ.ಎ-07, F-1585 ವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ಬಾಲಾಜಿಸಿಂಗ್ ರವರಿಗೆ ಗಾಯಗಳಾಗಿದ್ದು. ಈ ಬಗ್ಗೆ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ರಾತ್ರಿ 8.30 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.

ಕಡೂರು : ವಂಚನೆ ಪ್ರಕರಣ

ಕಡೂರು : ವಂಚನೆ ಪ್ರಕರಣ

ಕಡೂರು ಪೊಲೀಸ್‌ ಠಾಣೆ ಮೊ.ಸಂ.30/2014 - ಕಲಂ:420 ಐಪಿಸಿ -ಪಿರ್ಯಾದುದಾರರು ಖಂಗಾರಮ್‌ ಕುಮಾರ್‌ ಬ್ಯಾಂಕರ್ಸ್‌ ಮತ್ತು ಜ್ಯುಯಲರಿಸ್ ಕಡೂರು ಟೌನ್‌ ಇವರು ಅಂಗಡಿಯಲ್ಲಿರುವಾಗ್ಗೆ 35 ವರ್ಷದ ಒಬ್ಬಳು ಹೆಂಗಸು ಹಾಗು 25 ವರ್ಷದ ಒಬ್ಬಳು ಹೆಂಗಸು ಷೋ ಕೇಸ್ ಕಡೆ ನೋಡಿದಾಗ ಆಭರಣಗಳನ್ನಿಟ್ಟಿದ್ದ ಒಂದು ಡ್ರೇ ಇರಲಿಲ್ಲ ಅಂಗಡಿಯಲ್ಲಿದ್ದ ಮಹಿಳೆಯರನ್ನು ವಿಚಾರಿಸಿದಾಗ ನಮಗೆ ಏನು ಗೊತ್ತಿಲ್ಲ ಎಂದು ಹೇಳಿದರು.

ಮೊದಲು ಬಂದ ಇಬ್ಬರು ಮಹಿಳೆಯರು ಷೋಕೇಸ್ ನಲ್ಲಿದ್ದ ಆಭರಣಗಳ ಟ್ರೇ ಯನ್ನು ತೆಗೆದುಕೊಂಡು ಹೋಗಿದ್ದು ಟ್ರೇ ನಲ್ಲಿ 1) 1 ತಾಳಿ ಗುಂಡು 2) 1 ಜೊತೆ ಕಿವಿ ಗುಂಡು 3) ಗುಂಡು ಗೋಲು 4) 1 ತಾಳಿ 5) 6 ಸಾದ ಕಾಸು 6) 9 ಲಕ್ಷ್ಮಿ ಕಾಸು 7) 1 ಜೊತೆ ಮುರ 8) 15 ಬೇಬಿ ರಿಂಗ್ 9) 3 ದೊಡ್ಡ ರಿಂಗ್ 10) 1 ಜೊತೆ ಓಲೆ 11) 1 ಜೊತೆ ಜುಮುಕಿ 12) 1 ಜೊತೆ ಮಾಟಿ 13) ಬುಗುಡಿ 14) 1 ಜೊತೆ ಕಿವಿ ರಿಂಗ್ 15) 1 ಜೊತರ ಕಿವಿ ಚಾಂದ್ ಓಲೆ 16) 1 ತಮಿಳಿಯನ್ಸ್ ತಾಳಿ 17) ತಮಿಳಿಯನ್ಸ್ ಗುಂಡು 18) ಓಲೆ ಪ್ಲೇಟ್ 19) 1 ಜೊತೆ ಸ್ಟಾರ್ 20) ಸಾದಾ ಡಾಲರ್ 21) ಬಿಳಿಸ್ಟೋನ್ ಸ್ಟಾರ್ 22) 1 ಸ್ಟೋನ್ ಡಾಲರ್ ಒಟ್ಟು ಸುಮಾರು 150 ಗ್ರಾಂ ತೂಕದ 3,75,000/(ಮೂರು ಲಕ್ಷದ ಎಪ್ಪತ್ತೈದು ಸಾವಿರ) ಬೆಲೆಯ ಬಂಗಾರದ ಆಭರಣಗಳಿದ್ದ ಟ್ರೇಯನ್ನು ನನ್ನ ಗಮನವನ್ನು ಬೇರೆ ಕಡೆ ಸೆಳೆದು ಅಂಗಡಿ ಷೋ ಕೇಸ್ ನಿಂದ ಮೋಸ ಮಾಡಿ ತೆಗೆದುಕೊಂಡು ಹೋಗಿರುವುದಾಗಿರುತ್ತೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣಾ

ಕೊಡಿಗೇನಹಳ್ಳಿ ಪೊಲೀಸ್ ಠಾಣಾ

ಪಿರ್ಯಾದಿ ವೆಂಕಟೇಶ ಬಿನ್ ದೊಡ್ಡಯ್ಯ 38 ವರ್ಷ ಆದಿಕರ್ನಾಟಕ ಜನಾಂಗ ದೊಡ್ಡಮಾಲೂರು ಗ್ರಾಮ ಕೊಡಿಗೇನಹಳ್ಳಿ ಹೋ ಮಧುಗಿರಿ ತಾ. ರವರು ದಿನಾಂಕ26-01-2014 ರಂದು ಸಂಜೆ 6-15 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದುವಿನ ಅಂಶವೇನಂದರೆ, ಪಿರ್ಯಾದಿಯವರಿಗೆ ಮೊದಲನೆಯ ಮಗಳು 13 ವರ್ಷದ ಮಗಳು ಕವಿತಾ ಎರಡನೆಯವನು ರಾಜೇಶ್ ಎಂಬ ಮಗನಿರುತ್ತಾರೆ. ಪಿರ್ಯಾದಿಯವರ ಮಗಳು ಅವರ ತಾತನಾದ ದೊಡ್ಡಯ್ಯನವರ ಮನೆಯಲ್ಲಿ ಇದ್ದು ಈಕೆಯು ಚಿಕ್ಕಮಾಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಳು. ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಬೆಂಗಳೂರಿನಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದು, ದಿನಾಂಕ 26-1-2014 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ನನ್ನ ತಮ್ಮ ಮಂಜುನಾಥ ಪೋನ್ ಮಾಡಿ ನಿನ್ನ ಮಗಳು ಕವಿತಾ ನಮ್ಮ ಕಾಲೋನಿಯ ವಾಸಿ ಸೋಮಪ್ಪ ಬಿನ್ ರಾಮಪ್ಪ ಎಂಬುವರ ಮನೆಯ ಹತ್ತಿರ ಹೋದಾಗ ಅವರ ಮನೆಯ ಮೇಲೆ ವೈರ್ ಕಟ್ಟಲು ಹಾಕಿದ್ದ ಪೈಪಿಗೆ ಗ್ರೌಂಡಿಗ್ ವೈರ್ ಆಕಸ್ಮಿಕವಾಗಿ ತಗುಲಿ ಶಾಕ್ ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಎಂದು ತಿಳಿಸಿದ್ದು ಆ ಕೂಡಲೇ ನಾನು ದೊಡ್ಡಮಾಲೂರು ಗ್ರಾಮಕ್ಕೆ ಬಂದು ನೋಡಿರುತ್ತೇನೆ ಸದರಿ ವಿಚಾರ ನಿಜವಾಗಿರುತ್ತೆ. ವಿದ್ಯುತ್ ಕಂಬದಿಂದ ಸೋಮಪ್ಪನ ಮನೆಗೆ ಎಳೆದುಕೊಂಡಿದ್ದ ವಿದ್ಯುತ್ ವೈರಿನಲ್ಲಿ ಇರುವ ತಂತಿಗೆ ವಿದ್ಯುತ್ ಪ್ರಸಾರವಾಗಿ ಮನೆಯ ಮೇಲೆ ವೈರ್ ಕಟ್ಟಲು ಹಾಕಿದ್ದ ಪೈಪಿಗೆ ವಿದ್ಯುತ್ ಹರಿದು ಗ್ರೌಂಡ್ ಆಗಿ ಕವಿತಾಳ ಬಲ ಕೈಯ ಅಂಗೈಗೆ ವಿದ್ಯುತ್ ತಗುಲಿ ಮೃತಪಟ್ಟಿರುತ್ತಾಳೆ ಎಂತ ಇತ್ಯಾದಿ ಅಂಶವಾಗಿರುತ್ತೆ.

ಬೆಂಗಳೂರು ಗ್ರಾಮಾಂತರ ಠಾಣೆ ಪ್ರಕರಣ

ಬೆಂಗಳೂರು ಗ್ರಾಮಾಂತರ ಠಾಣೆ ಪ್ರಕರಣ

ಚಿಕ್ಕಜಾಲದಲ್ಲಿ ಹಾರಿಕಾ ಎಂಬ 16 ವರ್ಷ ವಯಸ್ಸಿನ ಶಾಲಾ ವಿದ್ಯಾರ್ಥಿನಿ ಶಾಲಾ ಕಟ್ಟಡದಿಂದ ಬಿದ್ದು ಸೋಮವಾರ(ಜ.27) ಸಾವನ್ನಪ್ಪಿದ್ದಾಳೆ. 'ಆಕ್ಸ್ ಫರ್ಡ್ ಶಾಲೆ 10 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯ ಸಾವಿನ ಕಾರಣ ತಿಳಿದು ಬಂದಿಲ್ಲ. ಬೆಟ್ಟ ಹಲಸೂರು ಗ್ರಾಮದಲ್ಲಿ ನಡೆದ ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಜಾಲ ಪೊಲೀಸರು ತನಿಖೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+