ಎಣ್ಣೆಯೇಟಿನಲ್ಲಿ ಗೆಳೆಯನನ್ನೇ ಕೊಚ್ಚಿ ಹಾಕಿದ್ರು

ಬೆಂಗಳೂರು, ಜ.21: ಕುಡಿದ ಅಮಲಿನಲ್ಲಿ ಗೆಳೆಯನೊಬ್ಬನಿಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಗರದ ತ್ಯಾಗರಾಜನಗರದ ಭೈರಪ್ಪ ಬ್ಲಾಕಿನಲ್ಲಿ ವರದಿಯಾಗಿದೆ. 28 ವರ್ಷ ವಯಸ್ಸಿನ ಪುನೀತ್ ಕುಮಾರ್ ಕೊಲೆಗೆ ಹಳೆ ದ್ವೇಷ ಹಿನ್ನೆಲೆ ಕೂಡಾ ಇತ್ತು ಎಂದು ತಿಳಿದು ಬಂದಿದೆ.

ಕೇಬಲ್ ಟಿವಿ ಡಿಶ್ ಆಂಟೇನಾ ಹಾಕುತ್ತಿದ್ದ ಪುನೀತ್ ಹೊಟ್ಟೆ, ಎದೆ, ಕೈ ತೊಡೆ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಪುನೀತ್ ಅವರ ಐವರು ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ. ಕಳೆದ ಕೆಲ ದಿನಗಳಿಂದ ಯಾದೇಶ್, ಅಭಿ, ರವಿ ಎಂಬುವರ ಜತೆ ಪುನೀತ್ ಜಗಳವಾಡುತ್ತಿದ್ದ. ನಿನ್ನೆ ರಾತ್ರಿ ಭೈರಪ್ಪ ಬ್ಲಾಕಿನ ಬೇಕರಿ ಬಳಿ ಇದ್ದ ಪುನೀತ್ ನನ್ನು ಕರೆ ತಂದು ಯಾದೇಶ್, ಅಭಿ, ರವಿ ಮದ್ಯ ಸೇವನೆಗೆ ಪುಸಲಾಯಿಸಿದ್ದಾರೆ.

ಕುಡಿದ ಅಮಲೇರುತ್ತಿದ್ದಂತೆ ಮತ್ತೆ ಜಗಳ ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಇನ್ನಿಬ್ಬರು ಹುಡುಗರು ಸೇರಿಕೊಂಡು ಪುನೀತ್ ಜತೆ ವಾದಕ್ಕೆ ಇಳಿದಿದ್ದಾರೆ. ಮಾರಾಮಾರಿ ನಡೆದು ಪುನೀತ್ ಮೇಲೆ ಹಲ್ಲೆ ನಡೆಸಿದ ಗುಂಪು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಪುನೀತ್ ನನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಿ ನಂತರ ವಿಕ್ಟೋರಿಯಾಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಎಂದು ಡಿಸಿಪಿ ಎಚ್ ಎಸ್ ರೇವಣ್ಣ ಹೇಳಿದ್ದಾರೆ. ಐವರು ಆರೋಪಿಗಳಲ್ಲಿ ಮೂವರು ಸೆರೆ ಸಿಕ್ಕಿದ್ದಾರೆ. ತನಿಖೆ ಮುಂದುವರೆದಿದೆ...

ಕರ್ನಾಟಕ ರಾಜ್ಯ ಕ್ರೈಂ ನ್ಯೂಸ್ ಕವರೇಜ್

ಕರ್ನಾಟಕ ರಾಜ್ಯ ಕ್ರೈಂ ನ್ಯೂಸ್ ಕವರೇಜ್

ಬಾಲಕಿ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ : ಕೋಲಾರದ ಮುಳುಬಾಗಿಲು ತಾಲೂಕಿಗೆ ಸೇರಿದ ಪಲ್ಲಿಗರ ಪಾಳ್ಯದಲ್ಲಿ ಹಸುಳೆ ಮೇಲೆ ಅಪ್ರಾಪ್ತನೊಬ್ಬ ಅತ್ಯಾಚರ ಎಸಗಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಪಲ್ಲಿಗರಪಾಳ್ಯದ ನಿವಾಸಿ 5 ವರ್ಷದ ಬಾಲಕಿ ಮೇಲೆ 15 ವರ್ಷದ ಸಂತೋಷ್ ಎಂಬಾತ ಅತ್ಯಾಚಾರ ಎಸಗಿ ನಾಪತ್ತೆಯಾಗಿದ್ದಾನೆ. ಅಸ್ವಸ್ಥಗೊಂಡಿರುವ ಬಾಲಕಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಕಾರ್ಕಳ : ಕೊಲೆ ಪ್ರಕರಣ

ಕಾರ್ಕಳ : ಕೊಲೆ ಪ್ರಕರಣ

ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಕಾವೇರಿಬೆಟ್ಟು ಎಂಬಲ್ಲಿ ದಿನಾಂಕ 20/01/2014 ರಂದು ರಾತ್ರಿ 10-00 ಗಂಟೆಯಿಂದ ಈ ದಿನ ದಿನಾಂಕ;21/01/2014ರ 7-30 ಗಂಟೆಯ ಮಧ್ಯಾವಧಿಯಲ್ಲಿ ಅರುಣ ಡಿ ದಾಲ್ಮೇಡಾ (25ವರ್ಷ) ಎಂಬುವವರನ್ನು ಯಾರೋ ಅಪರಿಚಿತ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಯಾವುದೋ ಆಯುಧದಿಂದ ಹಲ್ಲೆ ನೆಡೆಸಿ ಕೊಲೆಮಾಡಿರುವುದಾಗಿದೆ.

ಈ ಬಗ್ಗೆ ಜಾನ್ ಆಲ್ಬರ್ಟ್ ಕ್ಯಾಸ್ತಲಿನೋ (56), ತಂದೆ: ದಿ ವಿಲಿಯಂ ಕ್ಯಾಸ್ತಲಿನೋ ವಾಸ:ಆಡಪಾಡಿ ಹೌಸ್ ಪಳ್ಳಿ ಗ್ರಾಮ, ಕಾರ್ಕಳ ತಾಲೂಕುರವರು ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2014 ಕಲಂ 302 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕುದುರೆಮುಖ : ವರದಕ್ಷಣೆ ಕಿರುಕುಳ ಸಾವು

ಕುದುರೆಮುಖ : ವರದಕ್ಷಣೆ ಕಿರುಕುಳ ಸಾವು

ಕುದುರೆಮುಖ ಪೊಲೀಸ್‌ ಠಾಣೆ ಮೊ.ಸಂ.01/2014 - ಕಲಂ:304(ಬಿ) 34 ಐಪಿಸಿ - ಈ ದಿನ ದಿನಾಂಕ; 20-01-2014 ರಂದು ಬೆಳಿಗ್ಗೆ 09-15 ಗಂಟೆಗೆ ಸಿ.ಎಂ ಲಕ್ಷ್ಮಣಗೌಡ ಬಿನ್ ಮಂಜಪ್ಪಗೌಡ 55 ವರ್ಷ ಕೂಲಿ ಕೆಲಸ ವಾಸ ಹಲಸೂರು ಬಾಳೆಹೊನ್ನೂರು ಹೋಬಳಿ ನ.ರಾ.ಪುರ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ:

ಪಿರ್ಯಾದಿ ಮಗಳು ಹೆಚ್ ಎಲ್ ರೂಪಶ್ರೀ 28 ವರ್ಷ ಇವರನ್ನು ದಿನಾಂಕ;-23-05-2011 ರಂದು ಸಂಸೆ ಗ್ರಾಮದ ಸಂಪಾನೆ ವಾಸಿ ದಿನೇಶ ಎಂಬುವರಿಗೆ 12 ಪವನ್ ಚಿನ್ನ ಮತ್ತು 13 ಗ್ರಾಂ ಬಂಗಾರದ ಸರ ಹಾಗು 30 ಸಾವಿರ ರೂ ನಗದು ಮತ್ತು ಗಾಡ್ರೇಜ್ ಬೀರು ಮತ್ತು ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ವರದಕ್ಷಿಣೆಯಾಗಿ ಕೊಟ್ಟು ಹಿರಿಯರ ಸಮ್ಮುಖದಲ್ಲಿ ಬಾಳೆ ಹೊನ್ನೂರು ಈಶ್ವರ ದೇವಾಲಯದಲ್ಲಿ ಮದುವೆ ಮಾಡಿಕೊಟ್ಟಿದ್ದು ಮದುವೆಯಾಗಿ 2 ತಿಂಗಳು ಚೆನ್ನಾಗಿ ನೋಡಿಕೊಂಡಿದ್ದು ನಂತರದ ದಿನಗಳಲ್ಲಿ ರೂಪಶ್ರೀ ಗಂಡ ದಿನೇಶ ಮತ್ತು ಆತನ ತಾಯಿ ಶಾರದಮ್ಮ, ಮತ್ತು ಅಣ್ಣ ಗಣೇಶ ಮತ್ತು ಅತ್ತಿಗೆ ಮಮತ ರವರು ಸೇರಿಕೊಂಡು ನೀನು ಮನೆಗೆ ಹೋಗಿ ಹಣ ತೆಗೆದುಕೊಂಡು ಬಾ ಬೇವಾರ್ಸಿ ಎಂಬುದಾಗಿ ಬೈಯ್ದು ಮಾನಸಿಕ ಹಿಂಸೆ ಕೊಡುತ್ತಿದ್ದರು.

ಈ ಬಗ್ಗೆ ಪಿರ್ಯಾದಿ ಬಂದು ಹಿರಿಯರನ್ನು ಸೇರಿಸಿ ಪಂಚಾಯಿತಿ ಮಾಡಿ ಸಂಸಾರ ಸರಿಪಡಿಸಿ ಹೋಗುತ್ತಿದ್ದರು. ರೂಪಶ್ರೀಗೆ ಪೃಥ್ವಿ ಎಂಬ ಹೆಣ್ಣು ಮಗು ಜನಿಸಿದ ನಂತರ ಈ ವಿಚಾರದಲ್ಲಿ ದಿನೇಶ ಮತ್ತು ಮನೆಯವರು ಹೊಡೆದು ಬಡಿದು ಗಲಾಟೆ ಮಾಡುತ್ತಿದ್ದರು. ಈಗ್ಗೆ 8 ದಿನಗಳ ಹಿಂದೆ ದಿನೇಶನು ನೀನು ಹಣವನ್ನು ತಂದು ಕೊಡಲಿಲ್ಲ ನಿನಗೆ ಹೆಣ್ಣು ಮಗುವಾಗಿದೆ ಬೇವಾರ್ಸಿ ಎಂದು ಹೊಡೆದು ಗಲಾಟೆ ಮಾಡಿದ್ದು ಪಿರ್ಯಾಧಿಯವರು ಬಂದು ಹಿರಿಯರನ್ನು ಸೇರಿಸಿ ಸರಿಪಡಿಸಿ ಹೋಗಿದ್ದರು. ಮನೆಯ ಅಂಗಳದಲ್ಲಿ ದಿನೇಶನು ಇದೇ ವಿಚಾರವಾಗಿ ರೂಪಶ್ರೀಗೆ ಬಡಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ.

ದೊಡ್ಡಪೇಟೆ ಠಾಣೆ : ಆತ್ಮ ಹತ್ಯೆ ಪ್ರಕರಣ

ದೊಡ್ಡಪೇಟೆ ಠಾಣೆ : ಆತ್ಮ ಹತ್ಯೆ ಪ್ರಕರಣ

ಪಿರ್ಯಾದಿ ಎ.ಗೋವಿಂದರಾಜು 33ವರ್ಷ ವಾಸ : ಇಲಿಯಾಸ್ ನಗರ ನ್ಯೂಮಂಡ್ಲಿ ರವರ ತಂಗಿ ಮೃತೆ ಕವಿತಾ ಕೋಂ.ಪಳನಿ 24 ವರ್ಷ ವಾಸ ನ್ಯೂಮಂಡ್ಲಿ ಶಿವಮೊಗ್ಗ ಇವರು ತನ್ನ ಅಣ್ಣ ಪರುಶ ರಾಮ ಮತ್ತು ಭಾವ ವರದ ರಾಜ ಇವರು ಗಲಾಟೆ ಮಾಡಿಕೊಂಡ ವಿಚಾರದಲ್ಲಿ ಅಥಾವ ಇನ್ಯಾವುದೋ ವಿಚಾರ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ.

ಮಾರಣಾಂತಿಕ ಅಪಘಾತ ಪ್ರಕರಣ

ಮಾರಣಾಂತಿಕ ಅಪಘಾತ ಪ್ರಕರಣ

ಚಿತ್ರದುರ್ಗ: ನಂ: ಕೆಎ-16/ಎಸ್-4113 ನೇ ಬೈಕ್‍ಗೆ ಯಾವುದೋ ವಾಹನ ಡಿಕ್ಕಿ ಪಡಿಸಿ ವಾಹನವನ್ನು ನಿಲ್ಲಿಸದೇ ಹೋಗಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ಮಲ್ಲಾಪುರ ಗ್ರಾಮದ ಬಳಿ ರಸ್ತೆಯಲ್ಲಿ ನಡೆದಿದೆ.

ಗುಡ್ಡದರಂಗವ್ವನಹಳ್ಳಿ ವಾಸಿ ರಾಘವೇಂದ್ರಾಚಾರ್ (28) ಎಂಬುವವರು ಚಿತ್ರದುರ್ಗದಲ್ಲಿ ಕಾರ್ಪೆಂಟರ್ ಕೆಲಸ ಮುಗಿಸಿಕೊಂಡು ಊರಿಗೆ ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ರಾಘವೇಂದ್ರಚಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತವೆಸಗಿದ ವಾಹನ ಯಾವುದು ಎಂದು ತಿಳಿದು ಬಂದಿರುವುದಿಲ್ಲವೆಂದು ದೂರು ಇದ್ದ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+