ರೈಲಿಗೆ ತಲೆ ಕೊಟ್ಟು ಸತ್ತ, ವಿಷ ಸೇವಿಸಿ ಬದುಕಿದಳು

ಬೆಂಗಳೂರು, ಜ. 20: ಪೋಷಕರ ವಿರೋಧದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಪ್ರೇಮಿಗಳು ವಿಷ ಸೇವಿಸಿ ರೈಲಿಗೆ ತಲೆಕೊಡಲು ಯತ್ನಿಸಿದ ಘಟನೆಯಲ್ಲಿ ಪ್ರಿಯಕರ ಸಾವನ್ನಪ್ಪಿ ಪ್ರಿಯತಮೆ ಪರಾರಿಯಾದ ಘಟನೆ ಕೆಂಗೇರಿ ಬಳಿ ಜರುಗಿದೆ.

ವಿಜಯನಗರ ವಾಸಿ ವೇಣುಗೋಪಾಲ್(17) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ. ಪ್ರೇಮಕ್ಕೆ ಪೋಷಕರ ವಿರೋಧವಿದ್ದ ಕಾರಣ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಇಬ್ಬರೂ ವಿಷ ಸೇವಿಸಿ ಇಂದು ಮುಂಜಾನೆ ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪ ಹಳಿ ಮಲಗಿದ್ದಾರೆ. ಪ್ರೇಮಿಗಳು ಕೈ ಹಿಡಿದುಕೊಂಡು ಹಳಿಯ ಮೇಲೆ ನಡೆದು ಹೋಗುತ್ತಿದ್ದನ್ನು ಕೆಲವರು ನೋಡಿದ್ದಾರೆ. ಆದರೆ, ಯಾರೂ ಇಬ್ಬರನ್ನು ವಿಚಾರಿಸುವ ಗೋಜಿಗೆ ಹೋಗಿಲ್ಲ.

ಬೆಳಗ್ಗೆ ಸುಮಾರು ಮುಂಜಾನೆ 5.30ರ ಸುಮಾರಿಗೆ ರೈಲು ಬರುತ್ತಿದ್ದಂತೆ ಹೆದರಿದ ಪ್ರಿಯತಮೆ ಹಳಿ ಮೇಲಿಂದ ಎದ್ದು ಓಡಿ ಹೋಗಿದ್ದಾಳೆ. ರೈಲಿಗೆ ಸಿಲುಕಿ ಪ್ರಿಯತಮ ಸಾವನ್ನಪ್ಪಿದ್ದಾನೆ. ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಪ್ರಿಯತಮೆ ರೈಲ್ವೆ ಹಳಿ ಸಮೀಪವೇ ಕುಸಿದಿದ್ದಾಳೆ. ಘಟನೆ ಕಂಡವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.

ಕರ್ನಾಟಕ ರಾಜ್ಯ ಕ್ರೈಂ ನ್ಯೂಸ್ ಕವರೇಜ್

ಕರ್ನಾಟಕ ರಾಜ್ಯ ಕ್ರೈಂ ನ್ಯೂಸ್ ಕವರೇಜ್

ಶಂಕರನಾರಾಯಣ: ರತ್ನಾಕರ ಶೆಟ್ಟಿ (63) ತಂದೆ: ದಿ| ಬಿ ಹೆರಿಯಣ್ಣ ಶೆಟ್ಟಿ ವಾಸ: ಎಲ್‌ಐಸಿ ರಸ್ತೆ ವಡೇರ ಹೋಬಳಿ ಕುಂದಾಪುರ ತಾಲೂಕು ಇವರ ಮಗ ಹರ್ಷ ಶೆಟ್ಟಿ ಪ್ರಾಯ: 31 ವರ್ಷ ಎಂಬುವವನ ಹೆಸರಿನಲ್ಲಿ 5 ಲಕ್ಷ ರೂಪಾಯಿ ಹಣವನ್ನು ಡೆಪಾಸಿಟ್‌ಇಟ್ಟಿದ್ದು ಆತನು ಆ ಹಣವನ್ನು ಡ್ರಾ ಮಾಡಿ ಯಾರೂ ಗೆಳಯರಿಗೆ ನೀಡಿ ಕಳೆದು ಕೊಂಡಿದ್ದು ಅದನ್ನು ಹೊಂದಿಸಲಿಕ್ಕಾಗದೇ ಮನನೊಂದು ಜೀವನದಲ್ಲಿ ಬೇಸರಗೊಂಡು ದಿನಾಂಕ 18/01/2014 ರಂದು ಮದ್ಯಾಹ್ನ 01:00 ಗಂಟೆಯಿಂದ 01:45 ಗಂಟೆಯ ನಡುವಿನ ಅವದಿಯಲ್ಲಿ ಕುಂದಾಪುರ ತಾಲೂಕು ಕುಳ್ಳುಂಜೆ ಗ್ರಾಮದ ಕುಂಬಾರಮಕ್ಕಿ ಎಂಬಲ್ಲಿರುವ ವಿರಾಜ್‌ಎಂಬುವವರ ಬಾಬ್ತು ವಾಸ್ಥವ್ಯವಿಲ್ಲದ ಹಳೆಯ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ರತ್ನಾಕರ ಶೆಟ್ಟಿ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 02/2014 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮುಳಬಾಗಿಲು : ಮನೆಯ ಬೀಗ ಮುರಿದು ಕಳ್ಳತನ

ಮುಳಬಾಗಿಲು : ಮನೆಯ ಬೀಗ ಮುರಿದು ಕಳ್ಳತನ

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌನ್, ಎ.ಡಿ. ಕಾಲೋನಿಯ ವಾಸಿ ನಾರಾಯಣಸ್ವಾಮಿ ರವರು ತಮ್ಮ ಮನೆಗೆ ಬೀಗವನ್ನು ಹಾಕಿಕೊಂಡು ತಮ್ಮ ಸ್ವಂತ ಊರಿಗೆ ಹೋಗಿದ್ದು. ಈ ಸಮಯದಲ್ಲಿ ನಾರಾಯಣಸ್ವಾಮಿ ರವರ ಮನೆಯ ಬೀಗವನ್ನು ಮುರಿದು ಒಳ ಪ್ರವೇಶಿಸಿದ ಯಾರೋ ಕಳ್ಳರು ಮನೆಯಲ್ಲಿದ್ದ ಸುಮಾರು 800 ಗ್ರಾಂ ತೂಕದ ವಡವೆಗಳನ್ನು ಮತ್ತು 43,000 ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಶಿವಮೊಗ್ಗ; ವಿನೋಬನಗರ

ಶಿವಮೊಗ್ಗ; ವಿನೋಬನಗರ

ವಿನೋಬನಗರ;ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಸಾವು;
ಮೃತ; ಮನೋಜ ತಂದೆ ಮೈಲಾರಿ ರಾವ್ 9 ವರ್ಷ ಈತನು 3 ನೇ ತರಗತಿಯಲ್ಲಿ ಓದುತ್ತಿದ್ದು ಆಲ್ಕೊಳದ ಕೆರೆಯಲ್ಲಿ ಈಜಲು ಹೋಗಿ ಈಜು ಬಾರದೆ ಮುಳುಗಿ ಮೃತ ಪಟ್ಟಿರುತ್ತಾನೆ.

 ಮಲೆಬೆನ್ನೂರು ಪೊಲೀಸ್ ಠಾಣೆ

ಮಲೆಬೆನ್ನೂರು ಪೊಲೀಸ್ ಠಾಣೆ

ಮಲೆಬೆನ್ನೂರು ಪೊಲೀಸ್ ಠಾಣೆ ಗುನ್ನೆ ನಂ: 14/2014, ಕಲಂ: 18 ಕೆ.ಟಿ.ಟಿ ಆಕ್ಟ್ ರೆ/ವಿ 447.427 ಐ.ಪಿ.ಸಿ.


ಹರಿಹರ ತಾಲ್ಲೂಕು ಮಲೇಬೆನ್ನೂರು ಗ್ರಾಮದ ವಾಸಿಯಾದ ಶ್ರೀಕತ್ತಿಗೆ ಹಳದಪ್ಪ ಬಿನ್ ಬಸಪ್ಪ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ, ಮಲೇಬೆನ್ನೂರು ಗ್ರಾಮದ ಕಣಿವೆ ಯಲ್ಲಿರುವ ದೊಡ್ಡಿ ಸಿದ್ದಪ್ಪನ ದೇವಸ್ಥಾನಕ್ಕೆ ಯಾರೋ ದುಷ್ರ್ಕಮಿಗಳು ಅಕ್ರಮ ಪ್ರವೇಶ ಮಾಡಿ ದೇವಸ್ಥಾನದಲ್ಲಿರಿವ ಈಶ್ವರ ಲಿಂಗವನ್ನು ಹೊಡೆದು ಹಾಕಿ ಗುಂಡಿ ತೆಗೆದು ವಿರೂಪಗೊಳಿಸಿ 10000 ಲುಕ್ಸಾನು ಮಾಡಿರುತ್ತಾರೆ ಸಮಾಜದ ಮುಖಂಡರಿಗೆ ತಿಳಿಸಿ ತಡವಾಗಿ ಬಂದು ದೂರು ನೀಡಿರುತ್ತೇನೆ ಸೂಕ್ತ ಕ್ರಮ ಕೈಗೊಳ್ಳಲು ಇತ್ಯಾದಿಯಾಗಿದ್ದ ದೂರಿನ ಮೇರೆಗೆ ಮೇಲ್ಕಂಡಂತೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಅಮೃತೂರು ಪೊಲೀಸ್ ಠಾಣಾ

ಅಮೃತೂರು ಪೊಲೀಸ್ ಠಾಣಾ

ದಿನಾಂಕ:-19/01/2014 ರಂದು ಬೆಳ್ಳಿಗ್ಗೆ 11-30 ಗಂಟೆಯಲ್ಲಿ ಬ್ಯಾಲದಕೆರೆ ಸರ್ವೆ ನಂ-42 ರ ಹತ್ತಿರ ಪಿರ್ಯಾದಿ ರಸ್ತೆಯಲ್ಲಿ ಕಾರು ನಿಲ್ಲಸಿ ತೋಟದ ಒಳಗೆ ಹೋಗಿದ್ದಾಗ ಬೆಂಗಳೂರಿನಲ್ಲಿ ವಾಸವಾಗಿರುವ ಕೆಂಪಗೂಳಿಗೌಡ,ಭಾಗ್ಯಮ್ಮ ಕೋಂ ಕೆಂಪಗೂಳಿಗೌಡ ,ಕೃಷ್ಣ ಬಿನ್ ಕೆಂಪಗೂಳಿಗೌಡ, ಚಂದ್ರಶೇಖರ್ ಬಿನ್ ಕೆಂಪಗೂಳಿಗೌಡ, ಶ್ರೀಕಾಂತ್ ಬಿನ್ ರಾಮು , ಗಂಗಣ್ಣ ಬಿನ್ ತಿರುಮಲೇಗೌಡ ಮತ್ತು ಬೆಂಗಳೂರಿನ ಇತರೆ 7 ಜನ ರೌಡಿಗಳು ಆಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡು ಬಂದು ಗಲಾಟೆ ತೆಗೆದು ಕೈಗಳಿಂದ ಹಲ್ಲೆ ಮಾಡಿ ಕಾರನ್ನು ಜಜ್ಜಿ ಜಖಂ ಗೊಳಿಸಿ ನಷ್ಟ ಉಂಟು ಮಾಡಿ ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ ಕೊಲೆ ಮಾಡಿಯೇ ತಿರುತ್ತೆವೆಂತ ಪ್ರಾಣ ಬೆದರಿಕೆ ಹಾಕಿ ಪಕ್ಕದ ಜಮೀನಿನಲ್ಲಿದ್ದ ಮಲ್ಲೇಶ್ವರ ಸ್ವಾಮಿ ಬಿಡಿಸಲು ಬಂದಾಗ ಓಡಿ ಹೋದರು ಎಂತ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+