ಮಂಡ್ಯ: ಒಂದೇ ಕುಟುಂಬದ ಮೂವರು ನೇಣಿಗೆ ಶರಣು

ಮಂಡ್ಯ, ನ.29 : ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿ, ಬಡತನದ ಬೇಗೆಗೆ ಬೇಸತ್ತ ಕುಟುಂಬದ ಸದಸ್ಯರು ಒಂದೇ ಬಾರಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರಿನ ಕೆಎಂ ದೊಡ್ಡಿಯಲ್ಲಿ ನಡೆದಿದೆ.

ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತಪಟ್ಟವರನ್ನು 38 ವರ್ಷದ ನಾಗರಾಜ್, ತಂಗಿ 28 ವರ್ಷದ ಪುಷ್ಪಾ, ತಂಗಿಯ ಮಗಳು 5 ವರ್ಷದ ಸೃಷ್ಟಿ ಎಂದು ಗುರುತಿಸಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಪುಷ್ಪಾ ಅವರ ಪತಿ ಕೂಡಾ ಬಡತನದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಪುಷ್ಟ ಅವರು ನಂತರ ಅಣ್ಣ ನಾಗರಾಜ್ ಅವರ ಮನೆಯಲ್ಲೇ ನೆಲೆಸಿದ್ದರು. ಆದರೆ, ಅಂಗವಿಕಲನಾಗಿರುವ ನಾಗರಾಜ್ ಅವರು ಹೆಚ್ಚಿನ ಆರ್ಥಿಕ ನೆರವು ನೀಡಲು ಸಾಧ್ಯವಾಗಿರಲಿಲ್ಲ.

ಇಡೀ ಕುಟುಂಬ ನಿರ್ವಹಣೆ ಜವಾಬ್ದಾರಿ ಪುಷ್ಪಾ ಮೇಲೆ ಬಿದ್ದಿತ್ತು. ಕೂಲಿ ಮಾಡಿ ಪುಷ್ಪಾ ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ಆದರೆ, ತೀವ್ರ ಬಡತನದಿಂದ ನೊಂದಿದ್ದ ಪುಷ್ಪಾ ಮತ್ತು ಅಣ್ಣಾ ನಾಗರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುಷ್ಪಾ ಅವರ 4 ವರ್ಷದ ಮಗು ಸೃಷ್ಟಿಗೂ ನೇಣು ಬಿಗಿದಿದ್ದಾರೆ. ಮತ್ತೊಂದು ಮಗು ಸಂಗೀತಾ ಪಕ್ಕದ ಮನೆಗೆ ಟಿವಿ ನೋಡಲು ತೆರಳಿದ್ದರಿಂದ ಪಾರಾಗಿದೆ. ಪ್ರಕರಣ ಕುರಿತಂತೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ತುಮಕೂರು, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ, ಶಿವಮೊಗ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ತುಮಕೂರು

ತುಮಕೂರು

ಶಿರಾ: ಭಗ್ನ ಪ್ರೇಮಿಯ ಕಾಟ ತಾಳಲಾರದೆ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

ಪಟ್ಟಣದ ಭವಾನಿನಗರದಲ್ಲಿ ನಡೆದಿದೆ. 16 ವರ್ಷದ ಕಾವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಎಸ್ ಎಸ್ ಎಲ್ ಸಿ ಓದುತ್ತಿದ್ದ ಕಾವ್ಯಶ್ರೀಯನ್ನು ಪ್ರೀತಿಸುವಂತೆ ಲಕ್ಷ್ಮೀನಾರಾಯಣ ಎಂಬಾತ ಪೀಡಿಸುತ್ತಿದ್ದ. ನಿತ್ಯ ಶಾಲೆಗೆ ಹೋಗಿ ಬರುವಾಗ ದಾರಿಯಲ್ಲಿ ಸಿಕ್ಕಿ ಪ್ರೀತಿಸುವಂತೆ ಕೇಳುತ್ತಿದ್ದ, ನಿನ್ನೆ ಕಾವ್ಯಾಳನ್ನು ರಸ್ತೆಯಲ್ಲೇ ಎಳೆದಾಡಿದ್ದಾನೆ

ಘಟನೆಯಿಂದ ನೊಂದ ಬಾಲಕಿ ಮಧ್ಯಾಹ್ನ ಶಾಲೆಯಿಂದ ಮನೆಗೆ ಬಂದು ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮನೆಯವರು ಬೆಂಕಿ ನಂದಿಸಿ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಭಗ್ನ ಪ್ರೇಮಿ ಲಕ್ಷ್ಮಿನಾರಾಯಣನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಚಾಮರಾಜನಗರ

ಚಾಮರಾಜನಗರ

ಹೆಗ್ಗಡದೇವನಕೋಟೆಯ ಸರಗೂರು ಠಾಣೆ ವ್ಯಾಪ್ತಿಯಲ್ಲಿ ಕೆರೆ ಬಳಿ ದನ ಮೇಯಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಹುಲಿ ದಾಳಿ ಮಾಡಿ ಕೊಂದು ತಿಂದಿರುವ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಮೊಳೆಯೂರು ಅರಣ್ಯ ಪ್ರದೇಶದ ಸೀಗೆವಾಡಿ ಹಾಡಿಯ 45 ವರ್ಷದ ಚೆಲುವ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಎಚ್ ಡಿ ಕೋಟೆ ತಾಲೂಕಿನಲ್ಲಿ ಇದೇ ರೀತಿ ಹುಲಿ ದಾಳಿಗೆ ರೈತನೊಬ್ಬ ಬಲಿಯಾಗಿದ್ದ. ಅರಣ್ಯ ಇಲಾಖೆ ಇದು ನರಹಂತಕ ಹುಲಿ ಎನ್ನಲು ಇನ್ನೂ ತಯಾರಾಗಿಲ್ಲ. ಹುಲಿ ಬೇಟೆ ನಡೆದಿದೆ.

ಮೊಳೆಯೂರು ಅರಣ್ಯ ಪ್ರದೇಶದ ಸೀಗೆವಾಡಿ ಹಾಡಿಯ ಚೆಲುವ ಮೃತ ವ್ಯಕ್ತಿ. ಇತ್ತೀಚೆಗೆ ಒಬ್ಬ ರೈತ ಸಾವನ್ನಪ್ಪಿದ್ದ. ಅರಣ್ಯ

ಉಡುಪಿ

ಉಡುಪಿ

ಕುಂದಾಪುರ: ಪಿರ್ಯಾದಿದಾರರಾದ ಮಂಜುನಾಥ ಹೆಬ್ಬಾರ್, ತಂದೆ ನಾರಾಯಣ ಹೆಬ್ಬಾರ್, ವಾಸ ಬಡಾ ಮನೆ ಕುಂಭಾಶಿ ಮನೆಯ ಎದುರುಗಡೆ ಇವರ ತಂದೆಯ ತಂಗಿಯಾದ ಸತ್ಯಮ್ಮ (73) ಇವರು ವಾಸವಾಗಿದ್ದು ಅವರ ಗಂಡ ತುಂಬಾ ವರ್ಷದ ಹಿಂದೆ ತೀರಿಹೋಗಿದ್ದು ಮಕ್ಕಳು ಯಾರೂ ಇರುವುದಿಲ್ಲ.

ನ.28 ರಂದು ಮಂಜುನಾಥ ಹೆಬ್ಬಾರ್ ರವರ ಮನೆಯ ಹಿಂದೆ ಇರುವ ಕೆರೆಯ ಹತ್ತಿರ ಬೆಳಿಗ್ಗೆ 7:30 ಗಂಟೆಗೆ ಹೋದಾಗ ಮಂಜುನಾಥ ಹೆಬ್ಬಾರ್ ರವರ ಅತ್ತೆ ಸತ್ಯಮ್ಮರವರ ಕೆರೆಯಲ್ಲಿ ತೇಲುತ್ತಿದ್ದು ಸತ್ತುಹೋಗಿರುವುದು ಕಂಡು ಬಂದಿರುತ್ತದೆ. ಅವರು ಯಾವಾಗಲೂ ಈ ಕೆರೆಗೆ ಕೈಕಾಲು ತೊಳೆದುಕೊಳ್ಳಲು ಬರುತ್ತಿದ್ದು ನ.27ರ ಸಂಜೆ ಅಥವಾ ನ.28ರ ಬೆಳಿಗ್ಗಿನ ಜಾವ ಕೈಕಾಲು ತೊಳೆಯಲು ಬಂದಾಗ ಕಾಲು ಜಾರಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವುದಾಗಿದೆ ಎಂಬುದಾಗಿ ಮಂಜುನಾಥ ಹೆಬ್ಬಾರ್ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 57/2013 ಕಲಂ ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ

ಚಿತ್ರದುರ್ಗ

ಹಿರಿಯೂರು ತಾಲೂಕಿನ ಗ್ರಾಮವೊಂದರಲಿ ದಂಪತಿಗಳು ಶುಕ್ರವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೃತರನ್ನು ಕರಿಯಪ್ಪ (26) ಮಂಜುಳ(19) ಎಂದು ಗುರುತಿಸಲಾಗಿದೆ. ಮೃತ ಕರಿಯಪ್ಪ ಅವರ ತಾಯಿ ಹೊಲಕ್ಕೆ ಹೋಗಿದ್ದ ವೇಳೆಯಲ್ಲಿ ದಂಪತಿಗಳು ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಶಿವಮೊಗ್ಗ

ಶಿವಮೊಗ್ಗ

ಸಾಗರ ಗ್ರಾಮಾಂತರ ಠಾಣೆ: ಪಿರ್ಯಾದಿ ಮಂಜಪ್ಪ ಬಿನ್ ಬಡಿಯಪ್ಪ ವಾಸ ಕಾಸರಗುಪ್ಪೆ ಸೊರಬ ಇವರ ಮಗಳು ಶೀಲಾ ಕೋಂ ಗೊಪಾಲಪ್ಪ ಇವರು ಆರೋಪಿ ಗೋಪಾಲ ಬಿನ್ ಈರಪ್ಪ 45 ವರ್ಷ ವಾಸ ಸೂರಗುಪ್ಪೆ ಸಾಗರ ತಾಲ್ಲೂಕ್ ರವರೊಂದಿಗೆ ಮದುವೆಯಾಗಿತ್ತು.

ಆ ಸಮಯದಲ್ಲಿ ವರೋಪಚಾರ ನೀಡಿದ್ದು, ನಂತರದ ದಿನದಲ್ಲಿ ಆರೋಪಿಯು ಪಿರ್ಯಾದಿಗೆ ನಾನು ಮನೆ ಕಟ್ಟಬೇಕು ನಿಮ್ಮ ತಂದೆ ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ದಿವಸವು ಪೀಡಿಸುತ್ತಿದ್ದು, ಮತ್ತು ಈ ವಿಚಾರವನ್ನು ಪಿರ್ಯಾದಿಗೂ ಸಹ ತಿಳಿಸಿದ್ದು, ನಂತರ ಏಕಾಏಕಿ ಪೋನು ಮಾಡಿ ನಿಮ್ಮ ಮಗಳು ಸತ್ತು ಹೋಗಿಹಳು ಎಂದಿದ್ದು, ಪಿರ್ಯಾದಿಯವರು ಬಂದು ನೋಡಿದಾಗ ಆರೋಪಿಯು ತನ್ನ ಹೆಂಡತಿಯನ್ನು ಸಾಯಿಸಿ ನೇಣು ಬಿಗಿದ ರೀತಿಯಲ್ಲಿ ನೇತು ಹಾಕಿರುವನು

ಕೋಲಾರ : ಅಕ್ರಮ ಸೀಮೆಎಣ್ಣೆ ವಶ

ಕೋಲಾರ : ಅಕ್ರಮ ಸೀಮೆಎಣ್ಣೆ ವಶ

ಸಿದ್ದಪ್ಪ.ಟಿ, ಮುಳಬಾಗಿಲು ಉಪವಿಭಾಗ ರವರ ಮಾರ್ಗದರ್ಶನದಲ್ಲಿ ನಂಗಲಿ ಪೊಲೀಸ್ ಠಾಣೆಯ ಪಿ.ಎಸ್.ಐ, ಕೆ.ವಿ.ಶ್ರೀಧರ್ ಮತ್ತು ಸಿಬ್ಬಂದಿಯವರು ಮುಳಬಾಗಿಲು ತಾಲ್ಲೂಕು, ಎನ್.ಕುರುಬರಹಳ್ಳಿ ಗೇಟ್ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಆಟೋ ನಂ-ಕೆಎ-30, 5025 ವಾಹನದಲ್ಲಿ ಮುಳಬಾಗಿಲು ಟೌನ್ ವಾಸಿ ರಶೀದ್ @ ಭಾಷಾಸಾಬಿ ರವರು ಆಟೋದಲ್ಲಿ ಅಕ್ರಮವಾಗಿ 5 ಪ್ಲಾಸ್ಟಿಕ್ ಕ್ಯಾನಿನಲ್ಲಿ ಸೀಮೆಎಣ್ಣೆ ಸಾಗಾಣಿಕೆ ಮಾಡುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡು ಬಂದು ಅಗತ್ಯವಸ್ತುಗಳ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ಚಿಕ್ಕಮಗಳೂರು

ಚಿಕ್ಕಮಗಳೂರು

ಕಳುವು ಪ್ರಕರಣ ಕಳಸ ಪೊಲೀಸ್ ಠಾಣೆ ಮೊ.ಸಂ. 92/2013 - ಕಲಂ: 379 ಐಪಿಸಿ : ಪಿರ್ಯಾದಿ ಶ್ರೀಮತಿ ಸರಸ್ವತಿ ಹಾಸನ ವಾಸಿ ಇವರು ನೀಡಿದ ದೂರು: ನ.28ರಂದು ಹೊರನಾಡು ಹತ್ತಿರ ಕೃತ್ಯ ನಡೆದಿದ್ದು, ಬಸ್ಸಿನ ಹಿಂಬದಿಯಲ್ಲಿ ಮೂರು ಸೀಟ್ ಇರುವ ಸೀಟಿನಲ್ಲಿ ಕುಳಿತಿದ್ದು ಕಿಟಕಿಯ ಕಡೆಗೆ ನನ್ನ ವ್ಯಾನಿಟಿ ಬ್ಯಾಗನ್ನು ಇಟ್ಟಿದ್ದು, ಮತ್ತು ನಾನು ಮಗು ಇಬ್ಬರೇ ಇದ್ದು ಆ ಬ್ಯಾಗನ್ನು ಬಸ್ಸಿನಲ್ಲೇ ಮರೆತುಬಿಟ್ಟು ಮಗು ಮತ್ತು ಲಗೇಜನ್ನು ತೆಗೆದುಕೊಂಡು ಬಸ್ಸಿನಿಂದ ಕೆಳಗೆ ಇಳಿದು ಮನೆಗೆ ಆಟೋದಲ್ಲಿ ಹೋದೆನು.

ನಂತರ ಬಸ್ಸನ್ನು ಹುಡುಕಿಕೊಂಡು ಬೈಕಿನಲ್ಲಿ ಮೂಡಿಗೆರೆಯಿಂದ ಹೊರನಾಡಿಗೆ ಬಂದು ನೋಡಿದಾಗ ಬ್ಯಾಗ್ ಸಿಕ್ಕಿದೆ. ಆದರೆ, ಬ್ಯಾಗಿನಲ್ಲಿದ್ದ 15 ಗ್ರಾಂ ನಕ್ಲೆಸ್, ಮತ್ತು 4 ಗ್ರಾಂ ಚೈನ್, 5 ಗ್ರಾಂ ನ ಓಲೆ ಮತ್ತು 500/- ರೂ ಹಣ ಇರಲಿಲ್ಲ. ಆಗ ಬಸ್ಸಿನ ಚಾಲಕ ಮತ್ತು ಕಂಡಕ್ಟರನ್ನು ವಿಚಾರಿಸಲಾಗಿ ನಮಗೆ ಒಡವೆ ಬಗ್ಗೆ ಗೊತ್ತಿಲ್ಲ ಬ್ಯಾಗ್ ಮಾತ್ರ ಇದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+