ಬಿಜೆಪಿ ಕಾರ್ಯಕಾರಣಿಯಲ್ಲಿ ಏನೇನು ಚರ್ಚೆ ಆಗುತ್ತೆ?

Recommended Video

      ಬಿಜೆಪಿ ಕಾರ್ಯಕಾರಣಿಯಲ್ಲಿ ಏನೇನು ಚರ್ಚೆ ಆಗುತ್ತೆ? | Oneindia Kannada

      ಬೆಂಗಳೂರು, ಜೂನ್‌ 29: ಬಜೆಟ್‌ ಅಧಿವೇಶನದ ಕುರಿತು ರಾಜ್ಯ ಬಿಜೆಪಿ ಘಟಕದ ಕಾರ್ಯಕಾರಿಣಿ ಸಭೆ ಶುಕ್ರವಾರ(ಜೂ.29) ಅರಮನೆ ಮೈದಾನದಲ್ಲಿ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಧ್ಯಾಹ್ನ 12ಗಂಟೆಗೆ ಉದ್ಘಾಟಿಸಲಿದ್ದಾರೆ.

      ಲೋಕಸಭಾ ಚುನಾವಣೆ ಕುರಿತಂತೆ ಮಹತ್ವದ ಚರ್ಚೆ ನಡೆಯಲಿದೆ. ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿರುವ ಬಳಿಕ ಮೊದಲ ಬಾರಿಗೆ ಕಾರ್ಯಕಾರಿಣಿ ನಡೆಯುತ್ತಿದ್ದು, ಆತ್ಮಾವಲೋಕನಕ್ಕೂ ಇದು ವೇದಿಕೆಯಾಗಲಿದೆ. ಮೂರು ದಿನಗಳ ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರು ಅಮಿತ್‌ ಷಾರನ್ನು ಭೇಟಿಯಾಗಿದ್ದರು, ಆದರೆ ಅವರು ಕಾರ್ಯಕಾರಿಣಿ ಸಭೆಗೆ ಬರುತ್ತಿಲ್ಲ.

      ಜುಲೈ 22ರಿಂದ 25ರವರೆಗೆ ಲೋಕಸಭೆ ಸ್ಥಾನ ಗೆಲ್ಲುವ ಗುರಿ ನಿಗದಿ ರಾಜ್ಯ ಘಟಕಕ್ಕೆ ಹೆಚ್ಚು ಚಿಂತೆಗೀಡುಮಾಡಿದೆ. ಜುಲೈನಲ್ಲಿ ರಾಜ್ಯಕ್ಕೆ ಭೇಟಿ ನೀಡಲಿರುವ ಅಮಿತ್‌ ಷಾ ಅವರಿಗೆ ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಒಪ್ಪಿಸಬೇಕಿದೆ.

      State Bjp executive meeting today

      ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಆರಂಭದಲ್ಲೇ ಎದ್ದಿರುವ ಅಪಸ್ವರ, ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಪ್ರಬಲ ಪ್ರತಿಪಕ್ಷವಾಗಿ ಹೇಗೆ ವರ್ತಿಸಬೇಕು, ಯಾವ ಸಂದರ್ಭದಲ್ಲಿ ಪಕ್ಷದ ನಿಲುವು ಏನಾಗಿರಬೇಕು ಎಂಬ ಬಗೆಗೆ ಸುದೀರ್ಘ ಚರ್ಚೆ ನಡೆಯಲಿದೆ.

      ಬಿಜೆಪಿ ಸಂಪರ್ಕ್ ಫಾರ್‌ ಸಮರ್ಥನ್‌ ಅಭಿಯಾನ, ಯೋಜನೆಗಳ ಮಾಹಿತಿ ಜನರಿಗೆ ತಲುಪಿಸುವುದು ಹೇಗೆ, ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಕುರಿತು ಚರ್ಚೆ ನಡೆಯಲಿದೆ. ಹಾಲಿ ಸಂಸದರಿಲ್ಲದ

      ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ, ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ, ಅಭ್ಯರ್ಥಿಗಳ ಆಯ್ಕೆ ವಿಚಾರ ಅಭಿಪ್ರಾಯ ಸಂಗ್ರಹ ಕೂಡ ನಡೆಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+